ಭದ್ರತಾ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಲಿರುವ ನೋಕಿಯಾ 8

ನೋಕಿಯಾ ಫೋನ್‌ಗಳಿಗೆ ಹೊಸದಾಗಿ ಸುರಕ್ಷತಾ ಅಪ್‌ಡೇಟ್ ಅನ್ನು ಎಚ್‌ಎಮ್‌ಡಿ ಗ್ಲೋಬಲ್ ಮಾಡುತ್ತಿದ್ದು, ಕಂಪನಿಯು ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನೋಕಿಯಾ ಡಿವೈಸ್‌ಗಳು ಪಡೆದುಕೊಳ್ಳಲಿವೆ ಎಂಬುದಾಗಿ ಪ್ರಕಟಣೆಯನ್ನು ಮಾಡಿದೆ.

By Shwetha Ps
|

ಕೆಲವು ದಿನಗಳ ಹಿಂದೆಯಷ್ಟೇ ನೋಕಿಯಾ 5 ಹೊಸದಾಗಿ ಪ್ರಚಲಿತಕ್ಕೆ ಬರುತ್ತಿರುವ ಆಂಡ್ರಾಯ್ಡ್ ಸಂರಕ್ಷಣೆಯನ್ನು ಪಡೆದುಕೊಳ್ಳುವ ಸುದ್ದಿಯನ್ನು ನಾವು ಕೇಳಿದ್ದು ನೆಕ್ಸಸ್ ಮತ್ತು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೂ ಈ ಅಪ್‌ಡೇಟ್ ಕಾಲಿಡುವ ಸುದ್ದಿ ಇತ್ತು. ಈಗ ನೋಕಿಯಾ 6 ಕೂಡ ಈ ಹೊಸ ಸುರಕ್ಷತಾ ಅಪ್‌ಡೇಟ್ ಅನ್ನು ಪಡೆದುಕೊಳ್ಳಲಿದೆ.

ಭದ್ರತಾ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಲಿರುವ ನೋಕಿಯಾ 8

ಆಗಸ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಘೋಷಣೆಗೊಂಡಿತ್ತು, ಅಂತೆಯೇ ಹೆಚ್ಚಿನ ಮಾರುಕಟ್ಟೆಗಳಲ್ಲಿ ಇದು ಇನ್ನೂ ಲಭ್ಯವಾಗುತ್ತಿಲ್ಲ. ಭದ್ರತಾ ಅಪ್‌ಡೇಟ್ ಅನ್ನು ಇದು ಪಡೆದುಕೊಳ್ಳಲಿರುವ ಕಾರಣದಿಂದಾಗಿ ಇದು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇನ್ನು ನೋಕಿಯಾ 8 ಅನ್ನು ತಮ್ಮಲ್ಲಿ ಹೊಂದಿರುವ ಬಳಕೆದಾರರಿಗೆ ಈ ಅಪ್‌ಡೇಟ್ ಕುರಿತು ಅಧಿಸೂಚನೆ ದೊರೆಯಲಿದೆ. ನೀವು ಸೆಟ್ಟಿಂಗ್ ಮೆನುವಿನಲ್ಲಿ ಅಧಿಸೂಚನೆಯನ್ನು ಪರಿಶೀಲಿಸಬೇಕಾಗುತ್ತದೆ.

ತನ್ನೆಲ್ಲಾ ನೋಕಿಯಾ ಫೋನ್‌ಗಳಿಗೆ ಹೊಸದಾಗಿ ಸುರಕ್ಷತಾ ಅಪ್‌ಡೇಟ್ ಅನ್ನು ಎಚ್‌ಎಮ್‌ಡಿ ಗ್ಲೋಬಲ್ ಮಾಡುತ್ತಿದ್ದು, ಕಂಪನಿಯು ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನೋಕಿಯಾ ಡಿವೈಸ್‌ಗಳು ಪಡೆದುಕೊಳ್ಳಲಿವೆ ಎಂಬುದಾಗಿ ಪ್ರಕಟಣೆಯನ್ನು ಮಾಡಿದೆ. ಪ್ರಾರಂಭಿಕ ಹಂತದ ನೋಕಿಯಾ 3 ಈಗಾಗಲೇ 7.1.1 ನಾಗಟ್ ಅಪ್‌ಡೇಟ್ ಅನ್ನು ಪಡೆದುಕೊಂಡಿದೆ.

ಭಾನುವಾರದಿಂದ 6 ದಶಲಕ್ಷ ಜಿಯೋ ಫೋನ್ ವಿತರಣೆ!!.ಗ್ರಾಮೀಣ ಪ್ರದೇಶಗಳಿಗೆ ಮೊದಲು!!ಭಾನುವಾರದಿಂದ 6 ದಶಲಕ್ಷ ಜಿಯೋ ಫೋನ್ ವಿತರಣೆ!!.ಗ್ರಾಮೀಣ ಪ್ರದೇಶಗಳಿಗೆ ಮೊದಲು!!

ಕಂಪನಿಯು ಎರಡು ವರ್ಷಗಳ ಆಂಡ್ರಾಯ್ಡ್ ಓಎಸ್ ಬೆಂಬಲವನ್ನು ನೋಕಿಯಾ ಬ್ರಾಂಡ್ ಫೋನ್‌ಗಳಿಗೆ ನೀಡಲಿದೆ. ನೋಕಿಯಾ 8 ಮತ್ತು ಇನ್ನು ಘೋಷಣೆಯಾಗಬೇಕಾಗಿರುವ ನೋಕಿಯಾ 9 ಆಂಡ್ರಾಯ್ಡ್ 8.0 ಓರಿಯೋ ಅಪ್‌ಡೇಟ್ ಅನ್ನು ಪಡೆದುಕೊಳ್ಳಲಿದೆ. ಇನ್ನು ಮುಂಬರುವ ವರ್ಷಗಳಲ್ಲಿ ಎಲ್ಲಾ ನೋಕಿಯಾ ಫೋನ್‌ಗಳು ಹೊಸ ಅಪ್‌ಡೇಟ್ ಅನ್ನು ಪಡೆದುಕೊಳ್ಳಲಿವೆ.

ನೋಕಿಯಾ 8 ಹೆಚ್ಚಿನ ಭದ್ರತಾ ಅಂಶಗಳನ್ನು ಪಡೆದುಕೊಳ್ಳಲಿದ್ದು ಸಮಯೋಚಿತ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಲಿದೆ. ಅಕ್ಟೋಬರ್ ಮಾಸದ ದೀಪಾವಳಿಯಂದು ಫೋನ್ ಲಭ್ಯವಾಗಲಿದೆ. ಅಂತೆಯೇ ಡಿವೈಸ್ ಬೆಲೆ ರೂ 45,000 ವಾಗಿದೆ.

Best Mobiles in India

Read more about:
English summary
Nokia 8 has received the September Android Security patch update before the Nexus and Pixel phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X