Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟ ನೋಕಿಯಾ!

ಈಗಾಗ್ಲೆ ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರಖ್ಯಾತ ಸಂಸ್ಥೆಯಾಗಿ ಗುರ್ತಿಸಿಕೊಂಡಿರೋ ನೋಕಿಯಾ ಕಂಪೆನಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿತ್ತು. ಸದ್ಯ ಸ್ಮಾರ್ಟ್‌ಫೋನ್‌ ಪ್ರಿಯರ ಪಾಲಿಗೆ ಬಾರಿ ನಿರೀಕ್ಷೆಯನ್ನ ಹುಟ್ಟುಹಾಕಿರೋ ನೋಕಿಯಾ 9.2 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಬಿಡುಗಡೆ ಇನ್ನು ತಡವಾಗಲಿದೆ ಎಂದು ಹೇಳಲಾಗ್ತಿದೆ. 2020ರ ಪ್ರಾರಂಭದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ನಿರೀಕ್ಷಿಸಿದ್ದ ಗ್ರಾಹಕರು ಇದೀಗ ಇನ್ನಷ್ಟು ತಿಂಗಳುಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು

ಹೌದು, ಮೊಬೈಲ್‌ ತಯಾರಿಕೆಯಲ್ಲಿ ಈಗಾಗ್ಲೆ ಗ್ರಾಹಕ ಸ್ನೇಹಿ ಆಗಿರೋ ನೋಕಿಯಾ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ನೋಕಿಯಾ 9.2 ಪ್ಯೂರ್ ವ್ಯೂ ಬಿಡುಗಡೆ ಇನ್ನು ತಡವಾಗಲಿದೆ ಎಂದು ಹೇಳಿಕೊಂಡಿದೆ. ನೋಕಿಯಾ 9.2 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಅನ್ನು ಬಳಸುತ್ತಿರೊದ್ರಿಂದ ಬಿಡುಗಡೆಯಾಗುವುದದು ವಿಳಂಬವಾಗಲು ಕಾರಣ ಎಂದು ಟಿಪ್‌ಸ್ಟರ್ ನೋಕಿಯಾ ಅನ್ಯೂ ಟ್ವಿಟರ್‌ನಲ್ಲಿ ವರದಿಯಾಗಿದೆ.

ಸದ್ಯ

ಸದ್ಯ ಹೊಸವರ್ಷದ ಆರಂಭದಲ್ಲಿ ನೋಕಿಯಾ 9.2 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕೆಂದುಕೊಂಡಿದ್ದವರಿಗೆ ಇದೊಂದು ಶಾಕಿಂಗ್‌ ನ್ಯೂಸ್‌ ಆಗಿದೆ. ಹಾಗೇ ನೋಡಿದ್ರೆ ನೋಕಿಯಾ 9.2 ಪ್ಯೂರ್ ವ್ಯೂ ಈ ಹಿಂದೆ ಬಿಡುಗಡೆಯಾಗಿದ್ದ ನೋಕಿಯಾ 9 ಪ್ಯೂರ್‌ವ್ಯೂ ಸ್ಮಾರ್ಟ್‌ಫೋನ್‌ ನಂತರ ಬರುತ್ತಿರುವ ಹೊಸ ಆವೃತ್ತಿ ಸ್ಮಾರ್ಟ್‌ಫೋನ್‌ ಆಗಿರೊದ್ರಿಂದ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿದ್ದವು, ಇದೀಗ ನಿರಾಸೆಯಾಗಿದೆ.

ಇನ್ನು

ಇನ್ನು ನೋಕಿಯಾ 9.2 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಒಳಗೊಂಡಿರಲಿದ್ದು, ಅಂಡ್ರಾಯ್ಡ್‌ ಎಕ್ಸ್ 55 5G ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಸ್ಮಾರ್ಟ್‌ ಫೋನ್‌ 2k ಪೋಲ್ಡ್ ಡಿಸ್ಪ್ಲೇಯನ್ನ ಒಳಗೊಂಡಿದ್ದು, ಸ್ಮಾರ್ಟ್‌ಫೋನ್‌ನ ಹಿಂಬಾಗದಲ್ಲಿ ಪೆಂಟಾ-ಲೆನ್ಸ್ ಕ್ಯಾಮೆರಾ ಸೆಟಪ್ ಹೊಂದಿರಲಿದ್ದು, ಐದು ಕ್ಯಾಮೆರಾಗಳನ್ನ ಹೊಂದಿರಲಿದೆ. ಐದು ಕ್ಯಾಮೆರಾಗಳಲ್ಲಿ ಮೊದಲ ಎರಡು ಕ್ಯಾಮೆರಾ ಗಳು 12 ಮೆಗಾಪಿಕ್ಸೆಲ್ RGB ಸೆನ್ಸಾರ್‌ ಹೊಂದಿರಲಿದೆ.

ಅಲ್ಲದೆ

ಅಲ್ಲದೆ ಈ ಸ್ಮಾರ್ಟ್‌ಫೋನ್‌ನ ಐದು ಕ್ಯಾಮೆರಾಗಳಲ್ಲಿ ಮೂರು ಕ್ಯಾಮೆರಾಗಳು 12 ಮೆಗಾಪಿಕ್ಸೆಲ್ ಏಕವರ್ಣದ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಜೊತೆಗೆ ಡಿಸ್‌ಪ್ಲೇ ಅಲ್ಲ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಇರಲಿದೆ ಎನ್ನಲಾಗ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ನೋಕಿಯಾ 9.2 ಪ್ಯೂರ್ ವ್ಯೂ ಹಿಂದಿನ ಆವೃತ್ತಿ ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯವಿದ್ದು, ಈ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಒಳಗೊಂಡಿದ್ದು,3500mah ಬ್ಯಾಟರಿ ಪ್ಯಾಕಪ್‌ ಅನ್ನ ಸಹ ಹೊಂದಿದೆ.

ನೋಕಿಯಾ

ಸದ್ಯ ನೋಕಿಯಾ 9.2 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಇನ್ನು ತಯಾರಿಕ ಹಂತದಲ್ಲಿಯೇ ಇದ್ದು ಸಧ್ಯದಲ್ಲಿ ಬಿಡುಗಡೆಯಾಗುವುದಿಲ್ಲ ಬದಲಿಗೆ ಈ ವರ್ಷದ ಕೊನೆಯಲ್ಲಿ ಅಂದರೆ 2020ರ ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ವದಂತಿಗಳು ಹಬ್ಬಿದ್ದು, ನೋಕಿಯಾ ಕಂಪೆನಿಯ ಇತ್ತೀಚನ ಹೇಳಿಕೆ ಕೂಡ ಇದನ್ನು ಪುಷ್ಟಿಕರಿಸುತ್ತಿದೆ.

Best Mobiles in India

English summary
HMD Global will reportedly launch its next flagship Nokia phone in late 2020. Dubbed Nokia 9.2 PureView, this Nokia phone might use Qualcomm’s Snapdragon 865 SoC, which is one of the main reasons for the delay. Tipster Nokia Anew (@nokia_anew) reported on Twitter that the launch of the Nokia 9.2 PureView could be delayed to autumn of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+