ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ನೋಕಿಯಾ 9.3 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್ !
ಟೆಕ್ ವಲಯದ ಎವರ್‌ಗ್ರೀನ್ ಮೊಬೈಲ್ ಬ್ರಾಂಡ್ ಎನಿಸಿಕೊಂಡಿರುವ ನೋಕಿಯಾ ಸಂಸ್ಥೆ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ನೋಕಿಯಾ ಸಂಸ್ಥೆ ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ನೋಕಿಯಾ ಕಂಪೆನಿ ತನ್ನ ಹೊಸ ನೋಕಿಯಾ 9.3 ಪ್ಯೂರ್ ವ್ಯೂ, ನೋಕಿಯಾ 7.3 5G, ಮತ್ತು ನೋಕಿಯಾ 6.3 ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಈ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಇದೇ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲು ನೋಕಿಯಾ ನಿರ್ಧರಿಸಿದೆ ಎನ್ನಲಾಗಿದೆ.

ಹೌದು, ನೋಕಿಯಾ ಸಂಸ್ಥೆಯ ಪರವಾನಗಿ ಪಡೆದಿರುವ HMD ಗ್ಲೋಬಲ್ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಇದೇ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿದೆ. ಈಗಾಗಲೇ ನೋಕಿಯಾ 9.3 ಪ್ಯೂರ್ ವ್ಯೂ, ನೋಕಿಯಾ 7.3 5G, ಮತ್ತು ನೋಕಿಯಾ 6.3 ಸ್ಮಾರ್ಟ್‌ಫೋನ್ ಎಲ್ಲಾ ಪರೀಕ್ಷಾ ಹಂತಗಳನ್ನು ಮುಗಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ, ನೋಕಿಯಾ 8.3 5G ಅನ್ನು ಈ ತಿಂಗಳು ಬಿಡುಗಡೆ ಮಾಡಬಹುದು ಎನ್ನಲಾಗುವ ಸಾಧ್ಯತೆ ಇದೆ. ಅಲ್ಲದೆ ನೋಕಿಯಾ 2.4 ಮತ್ತು ನೋಕಿಯಾ 3.4 ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡಬಹುದು ಎನ್ನಲಾಗ್ತಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಇನ್ನು ನೋಕಿಯಾ ಬಿಡುಗಡೆ ಮಾಡಲಿರುವ 9.3 ಪ್ಯೂರ್‌ವ್ಯೂ ಸ್ಮಾರ್ಟ್‌ಫೋನ್ ನೋಕಿಯಾ ಬ್ರಾಂಡ್‌ನ ಪ್ರಮುಖ ಸ್ಮಾರ್ಟ್‌ಫೋನ್ ಆಗಿದೆ. ಅಲ್ಲದೆ ನೋಕಿಯಾ 7.3 ಮತ್ತು ನೋಕಿಯಾ 6.3 ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್‌ನಲ್ಲಿ IFA2020 ರಲ್ಲಿ ಬ್ರಾಂಡ್‌ನ ಬಜೆಟ್ ಸ್ನೇಹಿ ಕೊಡುಗೆಗಳಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇನ್ನು ಈ ಮೂರು ಫೋನ್‌ಗಳು ಬಹುತೇಕ ಅಭಿವೃದ್ಧಿ ಹಂತವನ್ನು ಪೂರ್ಣಗೊಳಿಸಿವೆ ಮತ್ತು ಅಂತಿಮ ಪರೀಕ್ಷಾ ಹಂತಕ್ಕೆ ಕಳುಹಿಸಲಾಗುವುದು ಎಂದು ವರದಿಯಾಗಿದೆ.

ಇದಲ್ಲದೆ ನೋಕಿಯಾ 8.3 5G ಸ್ಮಾರ್ಟ್‌ಫೋನ್ ಆಗಸ್ಟ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಎಂಟ್ರಿ ನೀಡಿದರೂ ಅಚ್ಚರಿಯಿಲ್ಲ ಎಂದು ವರದಿ ಹೇಳಿದೆ. ಹಾಗೇ ನೊಡಿದರೆ ಈ ಸ್ಮಾರ್ಟ್‌ಫೋನ್ ಅನ್ನು ಮೂಲತಃ ಮಾರ್ಚ್‌ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು, ಆದರೆ COVID-19 ಲಾಕ್‌ಡೌನ್‌ಗಳಿಂದಾಗಿ ವಿಳಂಬವಾಗಿತ್ತು. ಸದ್ಯ ಇದೀಗ ನೋಕಿಯಾ ಆಯ್ದ ಮಾರುಕಟ್ಟೆಗಳಲ್ಲಿ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಹೇಳಲಾಗ್ತಿದೆ. ಇನ್ನು ನೋಕಿಯಾ 2.4 ಮತ್ತು ನೋಕಿಯಾ 3.4 ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ನೋಕಿಯಾ 2.4 ಅನ್ನು ಆರಂಭದಲ್ಲಿ IFA2020 ರಲ್ಲಿ ನಿರೀಕ್ಷಿಸಲಾಗಿತ್ತು, ಆದಾಗ್ಯೂ, ಸೆಪ್ಟೆಂಬರ್‌ನಲ್ಲಿ ನೋಕಿಯಾ 3.4 ಜೊತೆಗೆ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ. ಸದ್ಯ ಲಭ್ಯ ಮಾಹಿತಿಯ ಪ್ರಕಾರ ನೋಕಿಯಾ 9.3 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್ 120Hz ಡಿಸ್‌ಪ್ಲೇ, 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8k ವಿಡಿಯೋ ರೆಕಾರ್ಡಿಂಗ್ ಅನ್ನು ನೀಡಲಿದೆ ಎನ್ನಲಾಗ್ತಿದೆ. ಇದಲ್ಲದೆ ನೋಕಿಯಾ 6.3 ಮತ್ತು ನೋಕಿಯಾ 7.3 ಕ್ರಮವಾಗಿ ಸ್ನಾಪ್‌ಡ್ರಾಗನ್ 670/675 ಮತ್ತು ಸ್ನಾಪ್‌ಡ್ರಾಗನ್ 700-ಸರಣಿ ಚಿಪ್‌ಸೆಟ್‌ಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಹೇಳಲಾಗಿದೆ.


Click it and Unblock the Notifications