'ನೋಕಿಯಾ 9' ಲೀಕ್!..ಮೊಬೈಲ್ ಮಾರುಕಟ್ಟೆಯನ್ನು ನಡುಗಿಸುತ್ತಿವೆ ಫೀಚರ್ಸ್!
ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮಾರಾಟ ಹಕ್ಕನ್ನು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಐದು ಕ್ಯಾಮೆರಾಗಳ ವೈಶಿಷ್ಟ್ಯಗಳನ್ನು ಹೊಂದಿರುವ ಬಹುನಿರೀಕ್ಷಿತ ನೋಕಿಯಾ 9 ಸ್ಮಾರ್ಟ್‌ಫೋನಿನ ಚಿತ್ರಗಳು ಇದೇ ಮೊದಲ ಬಾರಿಗೆ ಲೀಕ್ ಆಗಿವೆ. ಬಹುನಿರೀಕ್ಷಿತ ನೋಕಿಯಾ 9 ಸ್ಮಾರ್ಟ್‌ಫೋನಿಲ್ಲಿ ಐದು ಕ್ಯಾಮೆರಾ ಲೆನ್ಸ್ ಜೊತೆಗೆ ದೊಡ್ಡದಾದ ಎಲ್‌ಇಡಿ ಫ್ಲ್ಯಾಶ್, ಆಟೋಫೋಕಸ್ ಪ್ರಮುಖ ಆಕರ್ಷಣೆಯಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ.
MWC 2018ನಲ್ಲಿ ತನ್ನ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿದ್ದ ನೋಕಿಯಾ ಈಗ ಸಿಹಿ ಸುದ್ದಿ ನೀಡಿದ್ದು, ಸಾಧ್ಯವಾದರೆ ಈ ಬೇಸಿಗೆಯ ಕೊನೆಯ ಹಂತದ ರಜಾ ದಿನಗಳಲ್ಲಿ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆ ಇದೆಯಂತೆ. ಈ ಬಾರಿಯ ಬೇಸಿಗೆ ಅಂತ್ಯದಲ್ಲಿ ಬರ್ಲಿನ್‌ನಲ್ಲಿ ನಡೆಯುವ IFA 2018 ಟ್ರೇಡ್ ಶೋನಲ್ಲಿ ನೋಕಿಯಾ 9 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಕಳೆದ MWC 2018ನಲ್ಲಿ ನೋಕಿಯಾ 1, ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೊಕೊ ಸ್ಮಾರ್ಟ್ಫೋನ್‌ಗಳನ್ನು ಘೋಷಿಸಿದ್ದ ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆ ಆಗ ತನ್ನ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ಗಳಲ್ಲಿ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆಯನ್ನು ತಂದಿರಲಿಲ್ಲ. ಆದರೆ ಈ ವರ್ಷದ MWC 2018ನಲ್ಲಿ ಬಿಡುಗಡೆಯಾಗುತ್ತಿರುವ ನೋಕಿಯಾ 9 ಸ್ಮಾರ್ಟ್‌ಫೋನ್ ಭಾರೀ ಫೀಚರ್ಸ್ ಹೊತ್ತು ಬಿಡುಗಡೆಯಾಗುವುದು ಪಕ್ಕಾ ಎಂದು ಹೇಳಲಾಗಿದೆ.
ಐದು ಕ್ಯಾಮೆರಾ ಲೆನ್ಸ್ಗಳ ಜೊತೆಗೆ ನೋಕಿಯಾ 9 ಸ್ಮಾರ್ಟ್‌ಫೋನ್ 3ಡಿ ಸ್ಮಾರ್ಟ್‌ಫೋನ್ ಆಗಿರಲಿರುವ ಬಗ್ಗೆಯೂ ಕೂಡ ಸುದ್ದಿ ಸಿಕ್ಕಿದೆ. ಹಾಗೇನಾದರೂ ಇದು 3ಡಿ ಸ್ಮಾರ್ಟ್‌ಫೋನ್ ಆಗಿದ್ದರೆ, ಬಿಡುಗಡೆಗೆ ಸಜ್ಜಾಗಿರುವ ಮೊದಲ ನೋಕಿಯಾ 3ಡಿ ಸ್ಮಾರ್ಟ್‌ಫೋನ್ ಇದಾಗಿರಲಿದೆ. ಈ ನೋಕಿಯಾ 9 ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ ಏನೆಂದರೆ ಸ್ಮಾರ್ಟ್‌ಫೋನಿನಲ್ಲಿ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಅಳವಡಿಸಲಾಗಿದೆ ಎಂದು ಸಹ ಹೇಳಲಾಗಿದೆ.

ಇನ್ನು ಸ್ಮಾರ್ಟ್‌ಫೋನ್‌ಗೆ ಯಾವ ಕಂಪನಿ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ನೀಡುತ್ತಿದೆ ಎನ್ನುವುದು ಈ ವರೆಗೂ ಸ್ಪಷ್ಟವಾಗಿಲ್ಲ. ಆದರೆ, ಖಚಿತ ಮೂಲಗಳ ಪ್ರಕಾರ Vivo ಕಂಪನಿಯ Vivo X20 UDಗೆ ಫಿಂಗರ್ಪ್ರಿಂಟ್ ಮ್ಯಾಡ್ಯೂಲ್‌ಗಳನ್ನು ಪೂರೈಸುತ್ತಿದ್ದ ಸ್ಯಾನ್ಜೋಸ್ ಮೂಲದ ಸೈಟೋಪ್ಟಿಕ್ಸ್ ಕಂಪನಿಯೇ ನೋಕಿಯಾ 9ಗೂ ಮಾಡ್ಯೂಲ್‌ಗಳನ್ನ ನೀಡಿದೆ ಎಂದು ಹೇಳಲಾಗಿದೆ.. ಅಷ್ಟೇ ಅಲ್ಲದೆ, ನೋಕಿಯಾ 8 ಸಿರಾಕೊದಲ್ಲಿ ಇರುವಂತೆಯೇ ನೋಕಿಯಾ 9ನಲ್ಲೂ ಬಾಗಿದ ಡಿಸ್ಪ್ಲೇ ಪ್ಯಾನಲ್ ಇರಲಿದೆ.

'ನೋಕಿಯಾ 6.1 ಪ್ಲಸ್' ಖರೀದಿಸಲು ಎರಡು ಆಯ್ಕೆಗಳಿಲ್ಲ!..ಏಕೆ ಗೊತ್ತಾ?
ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿರುವುದರಿಂದ ಯಾವ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವುದು ಎಂಬುದು ಎಲ್ಲರಿಗೂ ಗೊಂದಲವಾಗುವ ವಿಷಯವೇ. ಅದರಲ್ಲಿಯೂ ಇತ್ತೀಚಿನ ಆಕರ್ಷಕ ಫೀಚರ್ಸ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಫೋನ್‌ಗಳು ಸಹ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವುದು ಗ್ರಾಹಕರಿಗೂ ಮೊಬೈಲ್‌ಗಳ ಆಯ್ಕೆ ವಿಷಯದಲ್ಲಿ ಕಷ್ಟವಾಗುತ್ತಿದೆ.
ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ, ಮಾರುಕಟ್ಟೆಯಲ್ಲಿರುವ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಎಂದು ಕರೆಸಿಕೊಳ್ಳುತ್ತಿರುವ 'ನೋಕಿಯಾ 6.1 ಪ್ಲಸ್' ಸ್ಮಾರ್ಟ್‌ಫೋನ್. ಹೌದು, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸಧ್ಯ ಟ್ರೆಂಡ್ ಸೃಷ್ಟಿಸಿರುವ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಸ್ಥಾನದಲ್ಲಿರುವ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ 'ನೋಕಿಯಾ 6.1 ಪ್ಲಸ್' ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಖರೀದಿಸಲು ಯೋಗ್ಯವಾದ ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ.
ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ, ಎಲ್ಲಾ ಫೀಚರ್ಸ್‌ಗಳಲ್ಲಿಯೂ ಒಂದು ಕೈ ಮುಂದಾಗಿರುವ ' 'ನೋಕಿಯಾ 6.1 ಪ್ಲಸ್'' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುತ್ತಿದೆ. ಕೇವಲ 15,999 ರೂಪಾಯಿಗಳಲ್ಲಿ ಲಭ್ಯವಿರುವ ಈ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಇಂದಿನ ನಮ್ಮ ಹಾಟ್ ಫೇವರೇಟ್ ಸ್ಮಾರ್ಟ್‌ಫೋನ್ ಆಗಿದ್ದು, ಹಾಗಾದರೆ, ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ 'ನೋಕಿಯಾ 6.1 ಪ್ಲಸ್'' ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷ ಫೀಚರ್ಸ್ ಯಾವುವು? ಖರೀದಿಸಲು ಏನು ಕಾರಣಗಳು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ಡಿಸೈನ್!
ಅತ್ಯಾಕರ್ಷಕ ವಿನ್ಯಾಸದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 19: 9 ಆಕಾರ ಅನುಪಾತದ 5.84 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 1080 x 2280 ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಐಫೋನ್ 10 ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್ ಮತ್ತು RAM!
ಮೊದಲೇ ಹೇಳಿದಂತೆ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 4+64 GB ವೆರಿಯಂಟ್ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಆಂಡ್ರಾಯ್ಡ್ ಒನ್ ಸಪೋರ್ಟ್ ಕ್ವಾಲ್ಕಂ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 636 ಎಸ್‌ಒಸಿ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ. ಎಸ್‌ಡಿ ಕಾರ್ಡ್ ಸಹಾಯದಿಂದ ಸ್ಮಾರ್ಟ್‌ಫೋನ್ ಮೆಮೊರಿಯನ್ನು 400GB ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಸಹ ಲಭ್ಯವಿದೆ.

ಕ್ಯಾಮೆರಾ ಸಾಮರ್ಥ್ಯ?
ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಎಫ್ / 2.0 ಅಪಾರ್ಚರ್ ಮತ್ತು 1-ಮೈಕ್ರಾನ್ ಪಿಕ್ಸೆಲ್ಗಳಲ್ಲಿ 16-ಮೆಗಾಪಿಕ್ಸೆಲ್ ಮತ್ತು 5-ಮೆಗಾಪಿಕ್ಸೆಲ್ ಮೊನೊಕ್ರೋಮ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 2.0 ಅಪಾರ್ಚರ್ ಮತ್ತು 1ಮೈಕ್ರಾನ್ ಪಿಕ್ಸೆಲ್ ಸೆನ್ಸಾರ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟು?
ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 3060mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಅಲ್ಲದೇ, ಸ್ಮಾರ್ಟ್‌ಫೋನ್ 18W ಚಾರ್ಜರ್ ಸಹಾಯದಿಂದ ಕೇವಲ 30 ನಿಮಿಷಗಳಲ್ಲಿ 50 ಪರ್ಸೆಂಟ್ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಯುಎಸ್‌ಬಿ ಟೈಪ್ ಸಿ ಪೋರ್ರ್ಟ ಮತ್ತು 3.5MM ಹೆಡ್‌ಪೋನ್ ಜಾಕ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?
4G ವೋಲ್ಟ್, ಬ್ಲೂಟೂತ್ V5.0, 2.3 ಕರ್ವರ್ ಗ್ಲಾಸ್ 3 ಸ್ಕ್ರೀನ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್, ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕಿನ ಸಂವೇದಕ, ಡಿಜಿಟಲ್ ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್‌ಲಾಕ್ ಫೀಚರ್ ಅನ್ನು ಒಳಗೊಂಡಿರುವುದು ವಿಶೇಷತೆಯಾಗಿದೆ.

ನೋಕಿಯಾ 6.1 ಪ್ಲಸ್ ಬೆಲೆ ಎಷ್ಟು?
ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಭಾರತದ ಮೊಬೈಲ್ ಮಾರುಕಟ್ಟೆ ಊಹಿಸಿದ್ದಕ್ಕಿಂತಲೂ ಕಡಿಮೆ ಇದೆ. ಶಿಯೋಮಿಯ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನಿಗೆ ನೇರಾನೇರ ಸೆಡ್ಡು ಹೊಡೆಯುತ್ತಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 15,999 ರೂಪಾಯಿಗಳಾಗಿವೆ. ಹಾಗಾಗಿ, ಇದು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳಲ್ಲಿಯೇ ಬೆಲೆಗೆ ತಕ್ಕಂತಹ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಗಿದೆ.


Click it and Unblock the Notifications