ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಬೆಲೆ ಭಾರಿ ಕಡಿತ!

|

ಟೆಕ್‌ ಮಾರುಕಟ್ಟೆಯಲ್ಲಿ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಹೊಸ ಸಿಹಿ ಸುದ್ದಿಯೊಂದನ್ನ ನೀಡಿದೆ. ಈಗಾಗ್ಲೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ನೋಕಿಯಾ ಕಳೆದ ವರ್ಷವಷ್ಟೇ ಬಿಡುಗಡೆ ಮಾಡಿದ್ದ ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಬೆಲೆಯನ್ನ ಭಾರಿ ಪ್ರಮಾಣದಲ್ಲಿ ಕಡಿತ ಮಾಡಿದೆ. ಈ ಮೂಲಕ ನೋಕಿಯಾ 9 ಪ್ಯೂರ್ ವ್ಯೂ ಖರೀದಿಸಬೇಕು ಅಂದುಕೊಂಡಿರುವ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿಸುದ್ದಿಯನ್ನೇ ನೀಡಿದೆ.

ಹೌದು

ಹೌದು, ಮೊಬೈಲ್‌ ಜಗತ್ತಿನಲ್ಲಿ ಸದಕಾಲ ಗುಣಮಟ್ಟತೆಗೆ ಹೆಸರಾಗಿರುವ ನೋಕಿಯಾ ಕಳೆದ ವರ್ಷ ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡಿದ್ದ ಈ ಸ್ಮಾರ್ಟ್‌ಫೋನ್‌ ಪೆಂಟಾ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಅನ್ನು ಹೊಂದಿತ್ತು. ಇನ್ನು ಬಿಡುಗಡೆಯಾದ ಪ್ರಾರಂಭದಲ್ಲಿ 49,999 ರೂ ಬೆಲೆಯನ್ನ ಹೊಂದಿದ್ದ ಈ ಸ್ಮಾರ್ಟ್‌ಫೋನ್‌ ಬೆಲೆ ಇದೀಗ 15,000ರೂ ಗಳಷ್ಟು ಕಡಿತಗೊಂಡಿದ್ದು, ಅಂದರೆ ಇದೀಗ ಕೇವಲ 34,999 ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ 1440 x 2880 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 18:9 ರೇಶಿಯೋ ಹೊಂದಿದ್ದು, 538PPI ಪಿಕ್ಸೆಲ್‌ ಸಾಂದ್ರತೆಯನ್ನ ಒಳಗೊಂಡಿದೆ. ಇನ್ನು ಡಿಸ್‌ಪ್ಲೇ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್‌ ಗೋರಿಲ್ಲಾ ಗ್ಲಾಸ್‌ 5 ಅನ್ನು ನೀಡಲಾಗಿದ್ದು, ಉತ್ತಮ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ವಿಡಿಯೋ ವೀಕ್ಷಣೆಯಲ್ಲಿ ಡಿಸ್‌ಪ್ಲೇಯು ಉತ್ತಮ ಅನುಭವವನ್ನು ನೀಡಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 845 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 400GB ವರೆಗೂ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಈ ಸ್ಮಾರ್ಟ್‌ಫೋನ್‌ ಪೆಂಟಾ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ, ಸೇರಿದಂತೆ ಎಲ್ಲಾ ಐದು ಕ್ಯಾಮೆರಾಗಳು ಕೂಡ 12ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿವೆ. ಜೊತೆಗೆ 20ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಈ ಕ್ಯಾಮೆರಾಗಳಲ್ಲಿ ಮೊನೊಕ್ರೋಮ್‌ ಸೆನ್ಸಾರ್‌, ಆರ್‌ಜಿಬಿ ಸೆನ್ಸಾರ್‌ ಹೊಂದಿದ್ದು, ಅಲ್ಟ್ರಾ ವೈಡ್‌ ಕ್ಯಾಮೆರಾ ಲೆನ್ಸ್‌ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್‌ ಟು ಫೋಕಸ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್‌ಫೋನ್‌ 3,320mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದ್ದು, ಉತ್ತಮ ಸ್ಟ್ಯಾಂಡ್‌ಬೈ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ , ಬ್ಲೂಟೂತ್ 5.0, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು NFC ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ನೀಡಲಾಗಿಲ್ಲ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆದಾಗ ಪ್ರಾರಂಭಿಕ ಬೆಲೆ 49,999 ರೂ ಬೆಲೆಯನ್ನ ಹೊಂದಿತ್ತು. ಇದೀಗ ಈ ಸ್ಮಾರ್ಟ್‌ಫೋನ್‌ ಬೆಲೆ ಅನ್ನು 15,000ರೂ ಗಳಷ್ಟು ಕಡಿತಮಾಡಲಾಗಿದೆ. ಅಂದರೆ ಇದೀಗ ಕೇವಲ 34,999 ರೂ. ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ನೋಕಿಯಾ ವೆಬ್‌ಸೈಟ್ ನಲ್ಲಿ ಕೆಲವೇ ಕೆಲ ಕ್ರೆಡಿಟ್ ಕಾರ್ಡ್‌ಗಳಲ್ಲಿ 9 ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಆಯ್ಕೆಗಳಲ್ಲಿ ಫೋನ್ ಅನ್ನು ಖರೀದಿಸಬಹುದಾಗಿದ್ದು, ಬ್ಲೂ ಕಲರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
The Nokia 9 PureView was launched in India at Rs. 49,999 last year, and it is now listed on the Nokia website for Rs. 34,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X