ಸ್ಮಾಮ್‌ಸಂಗ್-ಜಿಯೋ ಒಂದಾದ ಬೆನ್ನಲೆ, ನೋಕಿಯಾ ಜೊತೆ ಕೈ ಜೋಡಿಸಿದ ಏರ್‌ಟೆಲ್..! ಕಾರಣವೇನು..!?
ಮುಂದಿನ ತಲೆ ಮಾರಿನ 5G ನೆಟ್‌ವರ್ಕ್ ಅಭಿವೃದ್ಧಿ ಪಡಿಸಲು ಈ ಎರಡು ಕಂಪನಿಗಳು ಒಂದಾಗಿವೇ ಎನ್ನಲಾಗಿದೆ.
ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಮುಂದಾಗಿರುವ ನೋಕಿಯಾ ಜೊತೆಗೆ ಭಾರತೀಯ ಟೆಲಿಕಾಂ ವಲಯದಲ್ಲಿ ತನ್ನದೇ ಛಾಪು ಮೂಡಿಸಿರುವ ಏರ್‌ಟೆಲ್ ಕೈ ಜೋಡಿಸಿದ್ದು, ಮುಂದಿನ ತಲೆ ಮಾರಿನ 5G ನೆಟ್‌ವರ್ಕ್ ಅಭಿವೃದ್ಧಿ ಪಡಿಸಲು ಈ ಎರಡು ಕಂಪನಿಗಳು ಒಂದಾಗಿವೇ ಎನ್ನಲಾಗಿದೆ.
ಓದಿರಿ: ನೋಟು ನಿಷೇಧದ ನಂತರ ಗ್ರಾಹಕರಿಗೆ ಬ್ಯಾಂಕ್‌ಗಳು ನೀಡಿದ ಮೊದಲ ಶಾಕ್.!!!
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಒಪ್ಪಂದ ನಡೆದಿದೆ ಎನ್ನಲಾಗಿದ್ದು, ಮುಂದಿನ ತಲೆಮಾರಿನ ನೆಟ್‌ವರ್ಕ್ ಅಭಿವೃದ್ಧಿಗಾಗಿ ಈ ಸ್ನೇಹ ಸಂಬಂಧ ನಡೆದಿದೆ ಎನ್ನುವ ಮಾತು ಕೇಳಿ ಬಂದಿದೆ.

5G ನೆಟ್‌ವರ್ಕ್ ಅಭಿವೃದ್ಧಿಗಾಗಿ
ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ನೋಕಿಯಾ ಸಿದ್ಧ ಹಸ್ತವಾಗಿದ್ದು, ಇದೇ ಮಾದರಿಯಲ್ಲಿ ಏರ್‌ಟೆಲ್ ಟೆಲಿಕಾಂ ವಲಯದಲ್ಲಿ ಸಾಕಷ್ಟು ಅನುಭವ ಹೊಂದಿದೆ, ಈ ಹಿನ್ನಲೆಯಲ್ಲಿ ಮುಂದೆ ಬರುವ 5G ನೆಟ್‌ವರ್ಕ್ ಅಭಿವೃದ್ಧಿ ಪಡಿಸಲು, ಹೊಸ ಸ್ಮಾರ್ಟ್‌ಪೋನು ಮತ್ತು ತರಂಗಾಂತರ ವಿಚಾರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಲು ಏರ್‌ಟೆಲ್ ಮತ್ತು ನೋಕಿಯಾ ಒಂದಾಗಿವೆ.

ಜಿಯೋ-ಸ್ಯಾಮ್‌ಸಂಗ್ ಎದುರಾಗಿ:
ಮೊನ್ನೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ 4G ನೆಟ್‌ವರ್ಕ್ ಅಭಿವೃದ್ಧಿ ಪಡಿಸಲು ಮತ್ತು ಮುಂದಿನ ಸಿದ್ಧತೆಗಾಗಿ ರಿಲಯನ್ಸ್ ಮಾಲೀಕತ್ವದ ಜಿಯೋ, ದಕ್ಷಿಣಾ ಕೋರಿಯಾ ಮೂಲಕ ಸ್ಯಾಮ್‌ಸಂಗ್ ನೊ೦ದಿಗೆ ಒಪ್ಪಂದ ಮಾಡಿದ್ದು, ಇದೇ ಹಿನ್ನಲೆಯಲ್ಲಿ ಏರ್‌ಟೆಲ್ ನೋಕಿಯಾ ದೊಂದಿಗೆ ಸೇರಿಕೊಂಡಿದೆ ಎನ್ನಲಾಗಿದೆ.

ನೋಕಿಯಾ-ಏರ್‌ಟೆಲ್
ನೋಕಿಯಾದ ದೊಂದಿಗೆ ಒಪ್ಪಂದಕ್ಕೆ ಮುಂದಾಗಿರುವ ಭಾರ್ತಿ ಏರ್‌ಟೆಲ್, ಮುಂದಿನ ದಿನಗಳಲ್ಲಿ 5G ನೆಟ್‌ವರ್ಕ್ ಸಂಬಂಧಿಸಿದಂತೆ ಸಂಶೋಧನೆಯನ್ನು ನಡೆಸಲಿದ್ದು, ಉತ್ತಮ ನೆಟ್‌ವರ್ಕ್, ವೆಚ್ಚ ಕಡಿಮೆಗೊಳಿಸುವ ಮುಂತಾದ ವಿಷಯಗಳ ಕುರಿತು ಈ ಸಂಸ್ಥೆಗಳು ಗಮನಹರಿಸಲಿವೆ,


Click it and Unblock the Notifications








