ಸೈಲೆಂಟ್ ಆಗಿ ಮಾರುಕಟ್ಟೆಗೆ ಬಂತು ನೋಕಿಯಾ C02 ಫೋನ್! ಫೀಚರ್ಸ್ ಏನಿದೆ?
ನೋಕಿಯಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಇದ್ದು ಇರುತ್ತದೆ. ಇದಕ್ಕೆ ಅನುಗುಣವಾಗಿ ನೋಕಿಯಾ ಕಂಪೆನಿ ಕೂಡ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಟೆಕ್ ವಲಯದಲ್ಲಿ ಸೈಲೆಂಟ್ ಆಗಿ ತನ್ನ ಹೊಸ ನೋಕಿಯಾ C02 ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.
ಹೌದು, ನೋಕಿಯಾ C02 ಸ್ಮಾರ್ಟ್‌ಫೋನ್ ಸೈಲೈಂಟ್ ಆಗಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು unspecified ಕ್ವಾಡ್ ಕೋರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3,000mAh ಸಾಮರ್ಥ್ಯದ ರಿಮೂವೆಬಲ್ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ C02 ಡಿಸ್‌ಪ್ಲೇ ವಿನ್ಯಾಸ
ನೋಕಿಯಾ C02 ಸ್ಮಾರ್ಟ್‌ಫೋನ್ 5.45 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ FWVGA+ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 18:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಹೊಂದಿದೆ.
ನೋಕಿಯಾ C02 ಪ್ರೊಸೆಸರ್ ಯಾವುದು?
ನೋಕಿಯಾ C02 ಸ್ಮಾರ್ಟ್‌ಫೋನ್ unspecified ಕ್ವಾಡ್ ಕೋರ್ SoC ಪ್ರೊಸೆಸರ್ ವೇಗವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 (Go ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM +32GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ನೋಕಿಯಾ C02 ಕ್ಯಾಮೆರಾ ಯಾವುದು?
ನೋಕಿಯಾ C02 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್ ಮೋಡ್, ಟೈಮ್ ಲ್ಯಾಪ್ಸ್, ಬ್ಯೂಟಿಫಿಕೇಶನ್ ಸಪೋರ್ಟ್ ಮತ್ತು ಎಲ್‌ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿದೆ ಎಂದು ನೋಕಿಯಾ ಕಂಪನಿ ತಿಳಿಸಿದೆ.
ನೋಕಿಯಾ C02 ಬ್ಯಾಟರಿ ಬ್ಯಾಕ್‌ಅಪ್ ಏನಿದೆ?
ನೋಕಿಯಾ C02 ಸ್ಮಾರ್ಟ್‌ಫೋನ್ 5W ಚಾರ್ಜಿಂಗ್ ಬೆಂಬಲಿಸುವ 3,000mAh ಸಾಮರ್ಥ್ಯದ ರಿಮೂವಬಲ್ ಬ್ಯಾಟರಿಯನ್ನು ಒಳಗೊಂಡಿದೆ. ಇದು 5Q ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 4.2, ಮೈಕ್ರೋ-ಯುಎಸ್‌ಬಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಬೆಂಬಲಿಸಲಿದೆ. ಇದು ಮಾಸ್ಕ್‌ಗಳೊಂದಿಗೆ ಫೇಸ್ ಅನ್‌ಲಾಕಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.

ನೋಕಿಯಾ C02 ಬೆಲೆ ಮತ್ತು ಲಭ್ಯತೆ
ನೋಕಿಯಾ C02 ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಈಗಾಗಲೇ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿರುವುದರಿಂದ ಬೆಲೆ ಹಾಗೂ ಲಭ್ಯತೆ ವಿವರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇನ್ನು ಸ್ಮಾರ್ಟ್‌ಫೋನ್ ಚಾರ್ಕೋಲ್ ಗ್ರೇ ಮತ್ತು ಡಾರ್ಕ್ ಸಯಾನ್ ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.
ಇದಲ್ಲದೆ ನೋಕಿಯಾ ಕಂಪೆನಿ ಇತ್ತೀಚಿಗೆ ನೋಕಿಯಾ X30 5G ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ನೋಕಿಯಾ X30 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5GSoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 OS ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








