Home
ಸುದ್ದಿಜಾಲ

ಹಬ್ಬದ ಪ್ರಯುಕ್ತ ನೋಕಿಯಾ C12 ಫೋನಿಗೆ ಭರ್ಜರಿ ರಿಯಾಯಿತಿ!..6000 ಒಳಗೆ ಲಭ್ಯ!

ಅಮೆಜಾನ್‌ ಪ್ಲಾಟ್‌ಫಾರ್ಮ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆನ್‌ಲೈನ್‌ ಶಾಪಿಂಗ್ ಪ್ರಿಯರನ್ನು ಸೆಳೆದಿದ್ದು, ಸಖತ್ ಜೋರಾಗಿದೆ. ಈ ತಾಣದ ಮಾರಾಟದಲ್ಲಿ ಮೊಬೈಲ್‌ಗಳು ಸಿಕ್ಕಾಪಟ್ಟೆ ಕೊಡುಗೆಯ ದರದಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಎನಿಸಿಕೊಂಡಿರುವ ನೋಕಿಯಾದ ಎಂಟ್ರಿ ಲೆವೆಲ್‌ ಫೋನ್‌ ನೋಕಿಯಾ C12 ಸೂಪರ್ ಆಫರ್‌ ಪಡೆದಿದೆ.

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ನೋಕಿಯಾ C12 ಫೋನ್ ಶೇ. 21% ರಷ್ಟು ರಿಯಾಯಿತಿ ಪಡೆದಿದೆ. 2GB RAM ಸ್ಟೋರೇಜ್ ವೇರಿಯಂಟ್‌ 5,899ರೂ. ಗಳ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಇದಕ್ಕೆ ಹೆಚ್ಚುವರಿ ಕೊಡುಗೆಗಳು ಸಹ ಲಭ್ಯ. ಲಭ್ಯ ಇರುವ ಎಲ್ಲ ಕೊಡುಗೆ ಪಡೆದುಕೊಂಡರು ಫೋನ್ ಖರೀದಿಸಿದರೆ, 5,309ರೂ. ಗೆ ಫೋನ್‌ ಲಭ್ಯ.

ಹಬ್ಬದ ಪ್ರಯುಕ್ತ ನೋಕಿಯಾ C12 ಫೋನಿಗೆ ಭರ್ಜರಿ ರಿಯಾಯಿತಿ!..6000 ಒಳಗೆ ಲಭ್ಯ!

ಇನ್ನು ನೋಕಿಯಾ C12 ಮೊಬೈಲ್‌ ಆಕ್ಟಾ ಕೋರ್ UniSoC SC9863A ಪ್ರೊಸೆಸರ್‌ ಒಳಗೊಂಡಿದ್ದು, 2GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಫೋನ್‌ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ನೋಕಿಯಾ C12 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ C12 ಡಿಸ್‌ಪ್ಲೇ ಮತ್ತು ಪ್ರೊಸೆಸರ್‌ ಹೀಗಿವೆ
ನೋಕಿಯಾ C12 ಮೊಬೈಲ್‌ 6.3 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 20:9 ರ ಆಕಾರ ಅನುಪಾತವನ್ನು ಇದು ಹೊಂದಿದೆ. ಹಾಗೆಯೇ ಈ ಮೊಬೈಲ್‌ 720 × 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಒಳಗೊಂಡಿದೆ. ಇದು ಈ ಮೊಬೈಲ್‌ ಆಕ್ಟಾ ಕೋರ್ ಆಕ್ಟಾ ಕೋರ್ UniSoC SC9863A ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ

ಮೆಮೊರಿ ಮತ್ತು ಓಎಸ್‌ ಆಯ್ಕೆ ಹೀಗಿವೆ
ನೋಕಿಯಾ C12 ಮೊಬೈಲ್‌ ಫೋನ್‌ ಸಿಂಗಲ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದ್ದು, ಅದು 2GB + 64GB ಸಾಮರ್ಥ್ಯದಲ್ಲಿ ಇದೆ. ಇನ್ನು ಬಳಕೆದಾರರು ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ಸುಮಾರು 256 GB ವರೆಗೆ ಹೆಚ್ಚಿಸಲಿ ಅವಕಾಶ ಒದಗಿಸಲಾಗಿದೆ. ಇನ್ನು ಈ ಮೊಬೈಲ್‌ ಗೂಗಲ್‌ ನ ಆಂಡ್ರಾಯ್ಡ್‌ 12 ಗೋ ಎಡಿಷನ್‌ (Android 11 Go) ಆವೃತ್ತಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲದೊಂದಿಗೆ ಕೆಲಸ ಮಾಡುತ್ತದೆ.

ಕ್ಯಾಮೆರಾ ಸೆನ್ಸಾರ್ ಮತ್ತು ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ
ನೋಕಿಯಾ C12 ಫೋನ್ ಸಿಂಗಲ್‌ ಕ್ಯಾಮೆರಾ ರಚನೆ ಯನ್ನು ಪಡೆದಿದ್ದು, ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ದಲ್ಲಿ ಇದೆ. ಅದೇ ರೀತಿ ಫೋನಿನ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಜೊತೆಗೆ LED ಫ್ಲ್ಯಾಶ್‌ ಸೌಲಭ್ಯ ವನ್ನು ಒದಗಿಸಲಾಗಿದೆ. ಇನ್ನು ಈ ಫೋನ್‌ 3000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 5W ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ..

ಫೋನಿನ ಇತರೆ ಸೌಲಭ್ಯಗಳ ಮಾಹಿತಿ
ನೋಕಿಯಾ C12 ಸ್ಮಾರ್ಟ್‌ಫೋನ್‌ IP52 ರೇಟಿಂಗ್ ಸ್ಲ್ಯಾಶ್‌ ರೆಸಿಸ್ಟೆನ್ಸ್‌ ಸೌಲಭ್ಯ ಪಡೆದಿದ್ದು, 160.6 × 74.3 × 8.75 ಎಂಎಂ ಸುತ್ತಳತೆ ಹೊಂದಿದೆ. ಜೊತೆಗೆ ಡ್ಯುಯಲ್ ಸಿಮ್, 4G, ವೈಫೈ 802.11 b/g/n, ಬ್ಲೂಟೂತ್ 5.2, ಜಿಪಿಎಸ್‌ ಸೌಲಭ್ಯ ಒಳಗೊಂಡಿದೆ. ಇನ್ನು ಈ ಫೋನ್ ಡಾರ್ಕ್ ಸಯಾನ್, ಲೈಟ್ ಮಿಂಟ್ ಮತ್ತು ಚಾರ್ಕೋಲ್ ಕಲರ್ ಆಯ್ಕೆ ಪಡೆದಿದೆ.

Best Mobiles in India

English summary
Nokia c12 available best offer price on amazon india, check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+