Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ನೋಕಿಯಾ C32! ಬೆಲೆ ಎಷ್ಟು? ಫೀಚರ್ಸ್‌ ಹೇಗಿದೆ?

ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರ್ಯಾಂಡ್‌ ನೋಕಿಯಾ ಕಂಪೆನಿ ಹೊಸ ಮೊಬೈಲ್‌ ಲಾಂಚ್‌ ಮಾಡಿದೆ. ನೋಕಿಯಾ C32 ಹೆಸರಿನ ಸ್ಮಾರ್ಟ್‌ಫೋನ್‌ ಇದೀಗ ಭಾರತಕ್ಕೆ ಎಂಟ್ರಿ ನೀಡಿದೆ. ಇನ್ನು ನೋಕಿಯಾ C32 ಸ್ಮಾರ್ಟ್‌ಫೋನ್‌ ಒಂದು ವರ್ಷದ ಬದಲಿ ಗ್ಯಾರಂಟಿಯೊಂದಿಗೆ ಬಿಡುಗಡೆಯಾಗಿದ್ದು, ಟೆಕ್‌ ವಲಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.

ಹೌದು, ನೋಕಿಯಾ C32 ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಾಗಲಿದ್ದು, ಮೂರು ವಿವಿಧ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಮೂರು ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ ನೋಕಿಯಾ C32! ಬೆಲೆ ಎಷ್ಟು? ಫೀಚರ್ಸ್‌ ಹೇಗಿದೆ?

ನೋಕಿಯಾ C32 ಫೀಚರ್ಸ್‌ ಹೇಗಿದೆ?

ನೋಕಿಯಾ C32 ಸ್ಮಾರ್ಟ್‌ಫೋನ್‌ 6.55 ಇಂಚಿನ 2.5D ಕರ್ವ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600 x 700 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 60Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಹೊಂದಿದೆ.

ನೋಕಿಯಾ C32 ಪ್ರೊಸೆಸರ್‌ ಯಾವುದು?

ನೋಕಿಯಾ C32 ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ 1.6Ghz Unisoc SC9863A ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಇಂಟರ್‌ ಸ್ಟೊರೇಜ್‌ ಅನ್ನು ಹೊಂದಿದೆ. ಇದರಲ್ಲಿ ವರ್ಚುವಲ್ RAM ಅನ್ನು ಬಳಸಿಕೊಂಡು 7GB ವರೆಗೆ ವಿಸ್ತರಿಸುವುದಕ್ಕೆ ಅವಕಾಶ ಕೂಡ ಸಿಗಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ನೋಕಿಯಾ C32! ಬೆಲೆ ಎಷ್ಟು? ಫೀಚರ್ಸ್‌ ಹೇಗಿದೆ?

ನೋಕಿಯಾ C32 ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ನೋಕಿಯಾ C32 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ AI-ಬೆಂಬಲಿತ ಪ್ರೈಮೆರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ನೋಕಿಯಾ C32 ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ನೋಕಿಯಾ C32 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 10W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 3 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಜಿಪಿಎಸ್, ಯುಎಸ್‌ಬಿ 2.0 ಮತ್ತು ಬ್ಲೂಟೂತ್ ವಿ5.2 ಸಂಪರ್ಕವನ್ನು ಬೆಂಬಲಿಸುತ್ತದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಸಹ ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ನೋಕಿಯಾ C32! ಬೆಲೆ ಎಷ್ಟು? ಫೀಚರ್ಸ್‌ ಹೇಗಿದೆ?

ಭಾರತದಲ್ಲಿ ನೋಕಿಯಾ C32 ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನೋಕಿಯಾ C32 ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 4GB + 64GB ರೂಪಾಂತರದ ಆಯ್ಕೆಗೆ 8,999ರೂ.ಬೆಲೆಯನ್ನು ಹೊಂದಿದೆ. ಆದರೆ 4GB + 128GB ರೂಪಾಂತರದ ಆಯ್ಕೆಯು 9,499ರೂ. ಬೆಲೆಯನ್ನು ಪಡೆದುಕೊಂಡಿದೆ. ಪ್ರಸ್ತುತ ಭಾರತದಲ್ಲಿ ನೋಕಿಯಾ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಲು ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ಗ್ರಾಹಕರು 6 ತಿಂಗಳ ಅವಧಿಗೆ ತಿಂಗಳಿಗೆ 1,584ರೂ. ರಿಂದ ಪ್ರಾರಂಭವಾಗುವ ನೋ ಕಾಸ್ಟ್‌ EMI ಆಯ್ಕೆಯಲ್ಲಿಯು ಸಹ ಖರೀದಿಸಬಹುದು. ಇನ್ನು ಈ ಸ್ಮಾರ್ಟ್‌ಫೋನ್‌ ಒಂದು ವರ್ಷದ ಗ್ಯಾರಂಟಿ ರಿಪ್ಲೇಸ್‌ಮೆಂಟ್‌ ಆಯ್ಕೆಯನ್ನು ಸಹ ಹೊಂದಿದೆ.

Best Mobiles in India

English summary
Nokia C32 With 5,000mAh Battery Launched in India: Price and specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+