ಓಜೊ 3ಡಿ ಕ್ಯಾಮೆರಾ: ನೋಕಿಯಾ ಕಂಪೆನಿ ಪ್ರಚಂಡ ಸಾಧನೆ

Written By:

ಫಿನ್‌ಲ್ಯಾಂಡ್ ನೋಕಿಯಾ ಕಂಪೆನಿ ಮತ್ತೊಮ್ಮೆ ಮೈಕೊಡವಿ ನಿಂತಿದೆ. ಜಗತ್ತಿನ ಅತಿದೊಡ್ಡ ಮೊಬೈಲ್ ತಯಾರಿಕಾ ಕಂಪೆನಿ 3ಡಿ ಚಲನ ಚಿತ್ರಗಳು ಮತ್ತು ಗೇಮ್ಸ್ ತಯಾರಿಸುವ ವಿಶೇಷ ಕ್ಯಾಮೆರಾವನ್ನು ಸಿದ್ಧಪಡಿಸಿದ್ದು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಬಳಸಿ ವೀಕ್ಷಿಸುವುದು ಮತ್ತು ಆಡುವುದನ್ನೂ ಮಾಡಬಹುದಾಗಿದೆ.

ಲಾಸ್ ಏಂಜಲೀಸ್‌ನಲ್ಲಿರುವ ಈವೆಂಟ್‌ನಲ್ಲಿ ಈ ಡಿವೈಸ್ ಅನ್ನು ಕಂಪೆನಿ ಪ್ರಸ್ತುತಪಡಿಸಿದ್ದು, 360 ಡಿಗ್ರಿಯಲ್ಲಿ ಎಂಟು ಸೆನ್ಸಾರ್ ಮೂಲಕ ಹಾಗೂ ಮೈಕ್ರೋಫೋನ್‌ಗಳನ್ನು ಬಳಸಿ ವೀಡಿಯೊ ಮತ್ತು ಆಡಿಯೊವನ್ನು ಸೆರೆಹಿಡಿಯುತ್ತದೆ. ಭವಿಷ್ಯದ ಬೆಳವಣಿಗೆಗಾಗಿ ತನ್ನ ಹೊಸ ಅವತರಣಿಕೆಗಳಲ್ಲಿ ಒಂದಾಗಿರುವ ನೋಕಿಯಾದ ಡಿಜಿಟಲ್ ಮೀಡಿಯಾ ಸಲ್ಯುಶನ್ ಬ್ಯುಸಿನೆಸ್‌ನ ಪ್ರಥಮ ಕಾಣಿಕೆ ಇದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಡಿವೈಸ್ ಕುರಿತ ಇನ್ನಷ್ಟು ವಿವರ ಮಾಹಿತಿಯನ್ನು ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಜೊ 3ಡಿ ಕ್ಯಾಮೆರಾ
  

ಓಜೊ 3ಡಿ ಕ್ಯಾಮೆರಾ

ಲಾಸ್‌ ಏಂಜಲೀಸ್‌ನಲ್ಲಿ ನಡೆದ ಈವೆಂಟ್ ಒಂದರಲ್ಲಿ ಕಂಪೆನಿ ಈ ಡಿವೈಸ್ ಓಜೊ 3ಡಿ ಕ್ಯಾಮೆರಾವನ್ನು ಪ್ರಸ್ತುತಪಡಿಸಿದೆ.

3ಡಿ ಚಲನ ಚಿತ್ರ ಮತ್ತು ಗೇಮ್ಸ್‌
  

3ಡಿ ಚಲನ ಚಿತ್ರ ಮತ್ತು ಗೇಮ್ಸ್‌

3ಡಿ ಚಲನ ಚಿತ್ರ ಮತ್ತು ಗೇಮ್ಸ್‌ಗಾಗಿ ಈ ವಿಶೇಷ ಕ್ಯಾಮೆರಾವನ್ನು ಸಿದ್ಧಪಡಿಸಲಾಗಿದೆ.

ಸಿದ್ಧಹಸ್ತ
  

ಸಿದ್ಧಹಸ್ತ

360 ಡಿಗ್ರಿಗಳಲ್ಲಿ ವೀಡಿಯೊ ಮತ್ತು ಆಡಿಯೊವನ್ನು ತೆಗೆಯುವಲ್ಲಿ ಇದು ಸಿದ್ಧಹಸ್ತ ಎಂದೆನಿಸಿದ್ದು ಎಂಟು ಸೆನ್ಸಾರ್‌ಗಳು ಮತ್ತು ಮೈಕ್ರೋಫೋನ್‌ಗಳನ್ನು ಇದು ಒಳಗೊಂಡಿದೆ.

ಪ್ರಥಮ ಕಾಣಿಕೆ
  

ಪ್ರಥಮ ಕಾಣಿಕೆ

ಭವಿಷ್ಯದ ಬೆಳವಣಿಗೆಯನ್ನು ಕೇಂದ್ರೀಕರಿಸುತ್ತಾ ನೋಕಿಯಾ ಡಿಜಿಟಲ್ ಮೀಡಿಯಾ ಸಲ್ಯೂಶನ್ಸ್ ಬ್ಯುಸಿನೆಸ್‌ನ ಪ್ರಥಮ ಕಾಣಿಕೆ ಇದಾಗಿದೆ.

ಮೊಬೈಲ್ ವ್ಯವಹಾರ
  

ಮೊಬೈಲ್ ವ್ಯವಹಾರ

ಕಳೆದ ವರ್ಷ ತನ್ನ ಮೊಬೈಲ್ ವ್ಯವಹಾರವನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿದ ಫೋನ್ ಕ್ಷೇತ್ರದಲ್ಲಿ ನೋಕಿಯಾ ನಿರ್ಬಂಧನೆಗೆ ಒಳಗಾಗಿದೆ. 15.6 ಬಿಲಿಯನ್ ಯೂರೊ ಸ್ವಾಧೀನತೆಯನ್ನು ಮೈಕ್ರೋಸಾಫ್ಟ್ ನೋಕಿಯಾದೊಂದಿಗೆ ಮಾಡಿಕೊಂಡಿದೆ.

ವರ್ಚುವಲ್ ರಿಯಾಲಿಟಿ
  

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ ಅನುಭವ ಜನರ ಸಂವಹನ ವಿಧಾನವನ್ನೇ ಮಾರ್ಪಡಿಸಲಿದ್ದು ಅವರನ್ನು ಕಥೆಗಳಿಗೆ, ಮನೋರಂಜನೆಗೆ, ಜಗತ್ತಿನ ಈವೆಂಟ್‌ಗಳಿಗೆ ವಿಶೇಷವಾಗಿ ಸಂಪರ್ಕಪಡಿಸಲಿದೆ.

ಗೋಪ್ರೊ ಕಂಪೆನಿ
  

ಗೋಪ್ರೊ ಕಂಪೆನಿ

16 ಕ್ಯಾಮೆರಾಗಳು ಮತ್ತು ಗೂಗಲ್‌ನ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಗೋಪ್ರೊ ಕಂಪೆನಿ ಕೂಡ ಇಂತಹುದೇ ವ್ಯವಸ್ಥೆಯನ್ನು ಪ್ರಸ್ತುತಪಡಿಸಿತ್ತು.

ಭಿನ್ನ ಯೋಜನೆ
  

ಭಿನ್ನ ಯೋಜನೆ

ಫೇಸ್‌ಬುಕ್, ಸ್ಯಾಮ್‌ಸಂಗ್ ಕಂಪೆನಿಗಳೂ ಕೂಡ ವರ್ಚುವಲ್ ರಿಯಾಲಿಟಿ ಮಾರುಕಟ್ಟೆಯನ್ನು ಪ್ರವೇಶಿಸುವ ಭಿನ್ನ ಯೋಜನೆಗಳೊಂದಿಗೆ ಮುಂದೆ ಬಂದಿವೆ.

ಮೈಕ್ರೋಸಾಫ್ಟ್‌
  

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಮುಂದಿನ ವರ್ಷ ಫೋನ್ ಕ್ಷೇತ್ರಕ್ಕೆ ನೋಕಿಯಾ ಕಾಲಿಡುವ ಯೋಜನೆಯಲ್ಲಿದೆ.

ನೋಕಿಯಾ ಫೋನ್ ವ್ಯವಹಾರ
  

ನೋಕಿಯಾ ಫೋನ್ ವ್ಯವಹಾರ

ಹ್ಯಾಂಡ್‌ಸೆಟ್ ವಿನ್ಯಾಸ ಮತ್ತು ಪರವಾನಗಿ ವ್ಯವಹಾರದ ಮೂಲಕ ನೋಕಿಯಾ ಫೋನ್ ವ್ಯವಹಾರಕ್ಕೆ ಭರ್ಜರಿ ಪ್ರವೇಶವನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Finland's Nokia, once the world's largest phone maker, has unveiled a spherical camera designed for making 3D movies and games that can be watched and played with virtual reality headsets.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot