Home
ಸುದ್ದಿಜಾಲ

ನೋಕಿಯಾ ಸಂಸ್ಥೆಯ ಈ ಹೊಸ ಫೋನ್‌ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್‌!

ಜನಪ್ರಿಯ ನೋಕಿಯಾ ಮೊಬೈಲ್‌ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ ಸರಣಿಯನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ G ಸರಣಿಯಲ್ಲಿ ಇತ್ತೀಚಿಗೆ ಪರಿಚಯಿಸಿರುವ ನೋಕಿಯಾ G42 5G ಮೊಬೈಲ್‌ ಫೀಚರ್ಸ್‌ ಹಾಗೂ ಬೆಲೆಯಿಂದ ಫೋನ್‌ ಪ್ರಿಯರನ್ನು ಸೆಳೆದಿದೆ. ಆದರೆ ಈ ಮೊಬೈಲ್‌ ಇದೀಗ ಬೆಲೆ ಇಳಿಕೆ ಕಂಡು ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ನೋಕಿಯಾ ಕಂಪನಿಯ ನೋಕಿಯಾ G42 5G ಮೊಬೈಲ್‌ ಶೇ. 21% ರಷ್ಟು ಬಿಗ್ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಮೊಬೈಲ್‌ 6GB ವೇರಿಯಂಟ್‌ 15,999 ರೂ. ಗಳ ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಆಫರ್‌ ನಲ್ಲಿ ಈಗ 12,599ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ನೋಕಿಯಾ ಸಂಸ್ಥೆಯ ಈ ಹೊಸ ಫೋನ್‌ ಬೆಲೆಯಲ್ಲಿ ಈಗ ಭಾರೀ ಡಿಸ್ಕೌಂಟ್‌!

ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಆಫರ್‌ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಕೂಡಾ ಗ್ರಾಹಕರಿಗೆ ಸಿಗಲಿದೆ. ಇನ್ನು ಈ ಮೊಬೈಲ್‌ ಅನ್ನು ಪರ್ಪಲ್ ಹಾಗೂ ಗ್ರೇ ಕಲರ್‌ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಹಾಗಾದರೆ ನೋಕಿಯಾ G42 5G ಮೊಬೈಲ್‌ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ನೋಕಿಯಾ G42 5G ಡಿಸ್‌ಪ್ಲೇ ವಿನ್ಯಾಸ ಮಾಹಿತಿ :
\ನೋಕಿಯಾ G42 5G ಮೊಬೈಲ್‌ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಒಳಗೊಂಡಿದೆ. ಅಲ್ಲದೇ ಈ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿದ್ದು, 450 ನಿಟ್ಸ್ ಕನಿಷ್ಠ ಹಾಗೂ 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯ ಪಡೆದಿದೆ. ಜೊತೆಗೆ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 3 ಸೌಲಭ್ಯ ಕೂಡಾ ಪಡೆದಿದೆ.

ನೋಕಿಯಾ G42 5G ಪ್ರೊಸೆಸರ್ ಪವರ್ ಯಾವುದು :
ನೋಕಿಯಾ G42 5G ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿರುವ ಇದು, ಅಡ್ರಿನೋ 619 GPU ಸಪೋರ್ಟ್‌ ಸಹ ಹೊಂದಿದೆ. ಹಾಗೆಯೇ ಆಂಡ್ರಾಯ್ಡ್ 13 ಓಎಸ್‌ ಬೆಂಬಲ ಕುಡಾ ಪಡೆದಿರುವ ಈ ಫೋನ್‌ 6GB RAM + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಹೆಚ್ಚಿನ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್ ಸೌಲಭ್ಯ ಲಭ್ಯ ಇದೆ.

ನೋಕಿಯಾ G42 5G ಕ್ಯಾಮೆರಾ ಸೆನ್ಸಾರ್ ರಚನೆ :
ನೋಕಿಯಾ G42 5G ಮೊಬೈಲ್‌ ಮೂರು ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿದೆ. ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸೆಲ್‌ ಸೆನ್ಸರ್‌ ನಲ್ಲಿ ಇವೆ. ಇದರೊಂದಿಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇದತ ಜೊತೆಗೆ ಎಲ್‌ಇಡಿ ಫ್ಲ್ಯಾಶ್‌, ನೈಟ್ ಮೋಡ್ 2.0, AI ಪೋರ್ಟ್ರೇಟ್ ಮತ್ತು OZO 3D ಆಡಿಯೊ ಕ್ಯಾಪ್ಚರ್ ಆಯ್ಕೆ ಕಾಣಬಹುದಾಗಿದೆ.

ನೋಕಿಯಾ G42 5G ಬ್ಯಾಟರಿ ಹಾಗೂ ಇತರೆ ಆಯ್ಕೆಗಳು :
ನೋಕಿಯಾ G42 5G ಮೊಬೈಲ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 20W ಚಾರ್ಜರ್‌ ಸೌಲಭ್ಯ ಹೊಂದಿದೆ. ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಸುಮಾರು 3 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುವ ಸಾಮರ್ಥ್ಯ ಪಡೆದಿದೆ. ಹಾಗೆಯೇ 3.5 ಎಂಎಂ ಆಡಿಯೊ ಜಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, IP52 ರೇಟಿಂಗ್‌ ಇದ್ದು, 5G SA / NSA, ಡ್ಯುಯಲ್ 4G VoLTE, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1 ಕನೆಕ್ಟಿವಿಟಿ ಆಯ್ಕೆ ಪಡೆದಿದೆ.

ನೋಕಿಯಾ G42 5G ಬೆಲೆ ಮೆಮೊರಿ ಹಾಗೂ ಕಲರ್ :
ನೋಕಿಯಾ G42 5G ಮೊಬೈಲ್‌ 6GB + 128GB ಸಾಮರ್ಥ್ಯದ ಸಿಂಗಲ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಗ್ರೇ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರು ಅಮೆಜಾನ್‌ ಪ್ಲಾಟ್‌ಫಾರ್ಮ್ ಮೂಲಕ ಖರೀದಿ ಮಾಡಬಹುದು.

Best Mobiles in India

English summary
Nokia G42 5G available at big discount price on amazon. offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+