ನೋಕಿಯಾ G42 5G ಫೋನಿನ ಹೊಸ ಸ್ಟೋರೇಜ್ ಆವೃತ್ತಿ ಬಿಡುಗಡೆ: ಬೆಲೆ ಕೇವಲ 9999ರೂ
ಭಾರತದಲ್ಲಿ ನೋಕಿಯಾ G42 5G ಸ್ಮಾರ್ಟ್ಫೋನಿನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 128GB ಸ್ಟೋರೇಜ್ ಆವೃತ್ತಿಯೊಂದಿಗೆ ಹೊಸ 4GB RAM (2GB ಹೆಚ್ಚುವರಿ ವರ್ಚುವಲ್ RAM) ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ಫೋನ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 480+ 8nm ಪ್ರೊಸೆಸರ್ ವೇಗದೊಂದಿಗೆ ಬರಲಿದೆ.
ಹೌದು, ನೋಕಿಯಾ G42 5G ಸ್ಮಾರ್ಟ್ಫೋನ್ ಹೊಸ ಸ್ಟೋರೇಜ್ ವೇರಿಯೆಂಟ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇಷ್ಟು ದಿನ ಕೇವಲ 6GB RAM ಆಯ್ಕೆಯಲ್ಲಿ ಲಭ್ಯವಿದ್ದ ಈ ಸ್ಮಾರ್ಟ್ಫೋನ್ ಹೊಸ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್ಫೋನ್ ಅತ್ಯಾಕರ್ಷಕ ಫೀಚರ್ಸ್ನೊಂದಿಗೆ ಗ್ರಾಹಕರ ಗಮನವನ್ನು ಸೆಳೆದಿದೆ. ಹಾಗಾದ್ರೆ ನೋಕಿಯಾ G42 5G ಸ್ಮಾರ್ಟ್ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Nokia G42 5G ಫೀಚರ್ಸ್ ಹೇಗಿದೆ?
ನೋಕಿಯಾ G42 5G ಸ್ಮಾರ್ಟ್ಫೋನ್ 6.56 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್ಪ್ಲೇಯು 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು, 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಡಿಸ್ಪ್ಲೇ 450 ನಿಟ್ಸ್ ಬ್ರೈಟ್ನೆಸ್ ನಿಡಲಿದೆ. ಈ ಡಿಸ್ಪ್ಲೇ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ನೀಡಲಿದೆ.
Nokia G42 5G ಪ್ರೊಸೆಸರ್ ಯಾವುದು?
Nokia G42 5G ಸ್ಮಾರ್ಟ್ಫೋನ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 480+ 8nm SoC ಪ್ರೊಸೆಸರ್ ವೇಗದೊಂದಿಗೆ ಬರಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM (2GB ವರ್ಚುವಲ್ RAM) ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

Nokia G42 5G ಕ್ಯಾಮೆರಾ ಸೆಟಪ್ ಎಷ್ಟು?
Nokia G42 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ FF ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
Nokia G42 5G ಬ್ಯಾಟರಿ ಮತ್ತು ಇತರೆ
Nokia G42 5G ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA / NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS/ GLONASS/ Beidou, USB ಟೈಪ್-C 2.0 ಬೆಂಬಲಿಸಲಿದೆ. LED ಫ್ಲ್ಯಾಷ್, ನೈಟ್ ಮೋಡ್ 2.0, AI ಪೋರ್ಟ್ರೇಟ್ ಮತ್ತು OZO 3D ಆಡಿಯೋ ಕ್ಯಾಪ್ಚರ್ ಅನ್ನು ಹೊಂದಿದೆ.
Nokia G42 5G ಬೆಲೆ ಮತ್ತು ಲಭ್ಯತೆ
Nokia G42 5G ಸ್ಮಾರ್ಟ್ಫೋನ್ 4GB RAM (2GB ವರ್ಚುವಲ್ RAM) ಮತ್ತು 128GB ಸ್ಟೋರೇಜ್ ಆಯ್ಕೆಯು ಕೇವಲ 9999ರೂ ಬೆಲೆಗೆ ದೊರೆಯಲಿದೆ. ಇದನ್ನು ನೀವು ಪರ್ಪಲ್ ಮತ್ತು ಸೋ ಗ್ರೇ ಬಣ್ಣಗಳಲ್ಲಿ ಬರುತ್ತದೆ. ಇನ್ನು ಸ್ಮಾರ್ಟ್ಫೋನ್ Amazon.in ಮತ್ತು HMD.com ನಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದ್ದು, ಮಾರ್ಚ್ 8 ರಂದು ಮಹಿಳಾ ದಿನದಂದು ಭಾರತದಲ್ಲಿ ಮಾರಾಟವಾಗಲಿದೆ.


Click it and Unblock the Notifications








