ಬದಲಾಯ್ತು ನೋಕಿಯಾ ಲೋಗೋ! ಜನರ ಮನಗೆದ್ದಿದ್ದ ಲೋಗೋ ಬದಲಾಗಿದ್ದು ಯಾಕೆ?
ನೋಕಿಯಾ ಕಂಪೆನಿ ಎಂದ ತಕ್ಷಣ ಮೊದಲಿಗೆ ನೆನಪು ಬರುವುದೇ ಅದರ ನೀಲಿ ಬಣ್ಣದ ಲೋಗೋ. ಐಕಾನಿಕ್ ನೀಲಿ ಬಣ್ಣದ ಲೋಗೋ ಮೂಲಕ ಇಡೀ ವಿಶ್ವದೆಲ್ಲೆಡೆ ಗಮನಸೆಳೆದಿದ್ದ ನೋಕಿಯಾ ಕಂಪೆನಿ ಇದೀಗ ತನ್ನ ಬ್ರ್ಯಾಂಡ್ ಗುರುತಿನ ಲೋಗೋವನ್ನು ಬದಲಾಯಿಸುತ್ತಿರುವುದಾಗಿ ಘೋಷಣೆ ಮಾಡಿದೆ.
ಹೌದ, ಟೆಕ್ ವಲಯದ ಎವರ್‌ಗ್ರೀನ್ ಬ್ರಾಂಡ್ ನೋಕಿಯಾ ಕಂಪೆನಿ ಸುಮಾರು 60 ವರ್ಷಗಳ ಪ್ರಯಾಣದಲ್ಲಿ ಇದೇ ಮೊದಲ ಬಾರಿಗೆ ಬ್ರ್ಯಾಂಡ್ ಲೋಗೋವನ್ನು ಬದಲಾಯಿಸುವ ಕೆಲಸಕ್ಕೆ ನೋಕಿಯಾ ಕೈ ಹಾಕಿದೆ. ಹಾಗಾದ್ರೆ ನೋಕಿಯಾ ಕಂಪೆನಿಯ ಹೊಸ ಲೋಗೋ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ ಕಂಪೆನಿ ನೀಲಿ ಬಣ್ಣದ ಲೋಗೋ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅದರಲ್ಲೂ ನೋಕಿಯಾ ಕಂಪೆನಿಯ ಫೀಚರ್ ಫೋನ್‌ಗಳನ್ನು ಸ್ವಿಚ್ ಆನ್ ಮಾಡಿದ ತಕ್ಷಣ ನೀಲಿ ಬಣ್ಣದಲ್ಲಿ ಮೂಡಿ ಬರುತ್ತಿದ್ದ ನೋಕಿಯಾ ಲೋಗೋ ಎಲ್ಲರ ಮನಸ್ಸಿನಲ್ಲಿ ಅಳಿಯದೇ ಅಚ್ಚೊತ್ತಿದೆ. ಅಂತಹ ಲೋಗೋವನ್ನು ಇದೀಗ ಬದಲಾಯಿಸುತ್ತಿರುವುದಾಗಿ ನೋಕಿಯಾ ಕಂಪೆನಿ ಅನೌನ್ಸ್ ಮಾಡಿದ್ದೆ ತಡ ಟೆಕ್ ವಲಯದಲ್ಲಿ ಹೊಸ ಕಂಪನವೇ ಸೃಷ್ಟಿಯಾಗಿದೆ. ನೋಕಿಯಾ ತನ್ನ ಹೊಸ ಲೋಗೋ ಮೂಲಕ ಏನನ್ನೂ ಸೂಚಿಸಲು ಮುಂದಾಗಿದೆ ಅನ್ನೊದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಹೇಗಿದೆ ನೋಕಿಯಾದ ಹೊಸ ಲೋಗೋ?
ನೋಕಿಯಾ ಕಂಪೆನಿಯ ಹೊಸ ಲೋಗೋ NOKIA ಪದವನ್ನು ರೂಪಿಸುವ ಐದು ವಿಭಿನ್ನ ಆಕಾರಗಳನ್ನು ಒಳಗೊಂಡಿದೆ. ಹಳೆಯ ಲೋಗೋದಲ್ಲಿದ್ದ ಐಕಾನಿಕ್ ನೀಲಿ ಬಣ್ಣವನ್ನು ಬಳಕೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಇನ್ನು ನೋಕಿಯಾ ತನ್ನ ಹೊಸ ಲೋಗೋವನ್ನು ವಾರ್ಷಿಕ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನ ಮುನ್ನಾದಿನದಂದು ಘೋಷಣೆ ಮಾಡಿದೆ. ಈ ಮೂಲಕ ಹೊಸ ಲೋಗೋದೊಂದಿಗೆ ಬಳಕೆದಾರರಿಗೆ ಇನ್ನಷ್ಟು ಹತ್ತಿರುವಾಗುವ ಪ್ರಯತ್ನಕ್ಕೆ ನೋಕಿಯಾ ಕಂಪೆನಿ ಮುಂದಾಗಿದೆ.

ಇನ್ನು ನೋಕಿಯಾ ಕಂಪೆನಿ ತನ್ನ ಸೇವಾ ಪೂರೈಕೆದಾರ ವ್ಯವಹಾರವನ್ನು ಇನ್ನಷ್ಟು ಬೆಳೆಸುವ ಗುರಿಯನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ನೋಕಿಯಾ ಕಂಪೆನಿ ಮಾಡಿಕೊಳ್ಳುತ್ತದೆ. ಇದರ ಮೊದಲ ಯತ್ನವೇ ಲೋಗೋ ಬದಲಾವಣೆ ಎಂಬ ಟಾಕ್ ಟೆಕ್ ವಲಯದಿಂದ ಕೇಳಿ ಬಂದಿದೆ. ಇದಲ್ಲದೆ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಖಾಸಗಿ 5G ನೆಟ್‌ವರ್ಕ್‌ಗಳು ಮತ್ತು ಸ್ವಯಂಚಾಲಿತ ಕಾರ್ಖಾನೆಗಳಿಗೆ ಗೇರ್‌ಗಳನ್ನು ಮಾರಾ ಮಾಡಲು ನೋಕಿಯಾದ ಜೊತೆಗೆ ಪಾಲುದಾರಿಕೆಯನ್ನು ಪಡೆದುಕೊಂಡಿವೆ ಎನ್ನಲಾಗಿದೆ.
ಇದಲ್ಲದೆ ನೋಕಿಯಾ ಕಂಪೆನಿ ಇತ್ತೀಚಿಗೆ ನೋಕಿಯಾ C02 ಸ್ಮಾರ್ಟ್‌ಫೋನ್ ಅನ್ನು ಸೈಲೆಂಟ್ ಆಗಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ unspecified ಕ್ವಾಡ್ ಕೋರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3,000mAh ಸಾಮರ್ಥ್ಯದ ರಿಮೂವೆಬಲ್ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 5.45 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ FWVGA+ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 18:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಹೊಂದಿದೆ.

ಇದರೊಂದಿಗೆ ನೋಕಿಯಾ C02 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್ ಮೋಡ್, ಟೈಮ್ ಲ್ಯಾಪ್ಸ್, ಬ್ಯೂಟಿಫಿಕೇಶನ್ ಸಪೋರ್ಟ್ ಮತ್ತು ಎಲ್‌ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿದೆ ಎಂದು ನೋಕಿಯಾ ಕಂಪನಿ ತಿಳಿಸಿದೆ.


Click it and Unblock the Notifications








