ನೋಕಿಯಾ ಕಂಪೆನಿಯಿಂದ 4G ಬೆಂಬಲಿಸುವ ಎರಡು ಹೊಸ ಫೋನ್ ಬಿಡುಗಡೆ!
ಮೊಬೈಲ್ ಮಾರುಕಟ್ಟೆಯ ಎವರ್‌ಗ್ರೀನ್ ಬ್ರ್ಯಾಂಡ್ ನೋಕಿಯಾ ತನ್ನ ಎರಡು ಹೊಸ 4G ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಸದ್ಯ ಈ ಫೀಚರ್‌ಗಳನ್ನು ನೋಕಿಯಾ 6300 ಮತ್ತು ನೋಕಿಯಾ 8000 ಎಂದು ಹೆಸರಿಸಲಾಗಿದೆ. ಇನ್ನು ಈ ಎರಡೂ ಫೀಚರ್ ಫೋನ್‌ಗಳು ಕೈಯೋಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ನೋಕಿಯಾ 6300 ಫೀಚರ್‌ಫೋನ್ 2.4 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ನೋಕಿಯಾ 8000 2.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.

ಹೌದು, ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ ತನ್ನ ನೋಕಿಯಾ 6300 ಮತ್ತು ನೋಕಿಯಾ 8000 4G ಫೀಚರ್ ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಈ ಡಿವೈಸ್‌ಗಳನ್ನು ಪ್ರಸ್ತುತ ಆಯ್ದ ಮಾರುಕಟ್ಟೆಗಳಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಈ ಎರಡು ಫೀಚರ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ 6300
ನೋಕಿಯಾ 6300 4G ಪ್ರಮಾಣಿತ ಸಂಖ್ಯಾ ಕೀಪ್ಯಾಡ್‌ನೊಂದಿಗೆ 2.4-ಇಂಚಿನ ಕ್ಯೂವಿಜಿಎ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 210 ಪ್ರೊಸೆಸರ್ ಹೊಂದಿದ್ದು, ಕೈಯೋಸ್ ಔಟ್-ಆಫ್-ದಿ-ಬಾಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು 512MB RAM ಅನ್ನು ಒಳಗೊಂಡಿದೆ. ಈ ಫೋನ್ 1500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಪ್ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲ, ಎಫ್‌ಎಂ ರೇಡಿಯೋ, ಎಲ್‌ಟಿಇ ಕ್ಯಾಟ್ 4, ವೈಫೈ, ಬ್ಲೂಟೂತ್, ಎ-ಜಿಪಿಎಸ್ ಮತ್ತು ಡ್ಯುಯಲ್ ನ್ಯಾನೋ ಸಿಮ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಫೋನ್ ಬ್ಯಾಕ್‌ಸೈಡ್ VGA ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಕೂಡ ಇದೆ. ಈ ಫೋನ್ ಸಯಾನ್ ಗ್ರೀನ್, ಲೈಟ್ ಚಾರ್ಕೋಲ್ ಮತ್ತು ಪೌಡರ್ ವೈಟ್ ಸೇರಿದಂತೆ ಮೂರು ಮೋಜಿನ ಬಣ್ಣಗಳಲ್ಲಿ ಬರುತ್ತದೆ.

ನೋಕಿಯಾ 8000
ನೋಕಿಯಾ 8000 4G ಫೀಚರ್ ಫೋನ್ 2.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್ ಸೆನ್ಸಾರ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 210, ಪ್ರೊಸೆಸರ್ ಅನ್ನು ಹೊಂದಿದೆ. ಹಾಗೇಯೆ 512MB RAM ಮತ್ತು 4GB ಸ್ಟೊರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಇನ್ನು ಈ ಫೋನ್ 1500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎಫ್‌ಎಂ ರೇಡಿಯೋ, ಎಲ್‌ಟಿಇ ಕ್ಯಾಟ್ 4, ವೈಫೈ, ಬ್ಲೂಟೂತ್, ಎ-ಜಿಪಿಎಸ್ ಮತ್ತು ಡ್ಯುಯಲ್ ನ್ಯಾನೋ ಸಿಮ್ ಅನ್ನು ಬೆಂಬಲಿಸಲಿದೆ. ಈ ನೋಕಿಯಾ ಫೋನ್ ಕೈಯೋಸ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಬಳಕೆದಾರರು ಕೈಒಎಸ್ ವೆಬ್ ಸ್ಟೋರ್‌ನಲ್ಲಿ ವಾಟ್ಸಾಪ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇತರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದು ಓನಿಕ್ಸ್, ಒಪಲ್, ಸಿಟ್ರಿನ್ ಮತ್ತು ಟೋಪಾಜ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ಈ ಎರಡೂ ನೋಕಿಯಾ 4G ಫೀಚರ್ ಫೋನ್‌ಗಳು ಆಯ್ದ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿವೆ. ಇದರಲ್ಲಿ ನೋಕಿಯಾ 6300 4G ಬೆಲೆ 49 ಯೂರೋ (ಸುಮಾರು 4,317 ರೂ), ಹಾಗೂ ನೋಕಿಯಾ 8000 4G 79 ಯೂರೋ (ಅಂದಾಜು 6,957 ರೂ.) ಬೆಲೆಯನ್ನು ಹೊಂದಿವೆ. ಸದ್ಯ ಈ ಫೀಚರ್‌ಫೋನ್‌ಗಳು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications