ನೋಕಿಯಾದಿಂದ ಏಕಕಾಲದಲ್ಲಿ ಮೂರು ಹೊಸ ಸ್ಮಾರ್ಟ್‌ಫೋನ್ ಲಾಂಚ್! ಮಾರುಕಟ್ಟೆಯಲ್ಲಿ ಭಾರಿ ಸಂಚಲನ!
ನೋಕಿಯಾ ಕಂಪೆನಿ ಟೆಕ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಏಕಕಾಲದಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಫೋನ್ ಪ್ರಿಯರನ್ನು ಒಂದು ಕ್ಷಣ ದಂಗಾಗುವಂತೆ ಮಾಡಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಬಜೆಟ್ ಹಾಗೂ ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾಗಿದ್ದು, ಮಾರುಕಟ್ಟೆಯಲ್ಲಿ ದೂಳೆಬ್ಬಿಸುವ ಸೂಚನೆ ನೀಡಿದೆ.
ಹೌದು, ನೋಕಿಯಾ ಕಂಪೆನಿ ಹೊಸದಾಗಿ ನೋಕಿಯಾ G22, ನೋಕಿಯಾ C22 ಮತ್ತು ನೋಕಿಯಾ C32 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಮೂರು ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿವೆ ಎಂದು ಹೇಳಲಾಗಿದೆ. ಇದರಲ್ಲಿ ನೋಕಿಯಾ ಸಿ-ಸೀರೀಸ್ ಸ್ಮಾರ್ಟ್‌ಫೋನ್‌ಗಳು ಸುಧಾರಿತ ಇಮೇಜಿಂಗ್ ಸೆಟ್‌ಅಪ್ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ G22 ಫೀಚರ್ಸ್ ಹೇಗಿದೆ?
ನೋಕಿಯಾ G22 ಸ್ಮಾರ್ಟ್‌ಫೋನ್ ಅನ್ನು ದುರಸ್ತಿಗೆ ಅನುಕೂಲವಾಗುವಂತೆ ವಿನ್ಯಾಸವನ್ನು ಮಾಡಲಾಗಿದೆ. ಇದು ಕರ್ವ್ಡ್ ಚಾರ್ಜಿಂಗ್ ಪೋರ್ಟ್ ಅಥವಾ ಫ್ಲಾಟ್ ಬ್ಯಾಟರಿಯನ್ನುಬದಲಾಯಿಸುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ ಎಂದು ನೋಕಿಯಾ ಕಂಪೆನಿ ಹೇಳಿಕೊಂಡಿದೆ. ಇದು 100% ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಬ್ಯಾಕ್, ವರ್ಧಿತ ಬಾಸ್ ಮತ್ತು ಸ್ಪಷ್ಟವಾದ ಧ್ವನಿಯನ್ನು ನೀಡುವ OZO ಪ್ಲೇಬ್ಯಾಕ್ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 2 ವರ್ಷಗಳ ಆಂಡ್ರಾಯ್ಡ್ ಎಂ ಓಎಸ್ ಅಪ್ಡೇಟ್‌ಗಳನ್ನು ನೀಡಲಿದೆ ಎಂದು ಹೇಳಲಾಗಿದೆ.
ನೋಕಿಯಾ C22 ಫೀಚರ್ಸ್ ಹೇಗಿದೆ?
ನೋಕಿಯಾ C22 ಸ್ಮಾರ್ಟ್‌ಫೋನ್ ಪ್ರಬಲವಾದ ನಿರ್ಮಾಣ ಗುಣಮಟ್ಟದೊಂದಿಗೆ ಬರುತ್ತದೆ ಎಂದು ನೋಕಿಯಾ ಹೇಳಿದೆ. ಈ ಫೋನ್ ಐಪಿ 52 ರೇಟ್ ಹೊಂದಿದ್ದು, 2.5 ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಜೊತೆಗೆ ಗ್ಲಾಸ್ ಮತ್ತು ಕಟ್ಟುನಿಟ್ಟಾದ ಲೋಹದ ಚಾಸಿಸ್ ಅನ್ನು ಬಲವಾದ ಪಾಲಿಕಾರ್ಬೊನೇಟ್ ಯುನಿಬಾಡಿ ವಿನ್ಯಾಸದೊಳಗೆ ಇರಿಸಲಾಗಿದೆ. ಈ ಫೋನ್ ಸುಧಾರಿತ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ ಎಂದು ನೋಕಿಯಾ ಕಂಪೆನಿ ಹೇಳಿದೆ.

ನೋಕಿಯಾ C32 ಫೀಚರ್ಸ್ ಹೇಗಿದೆ?
ನೋಕಿಯಾ C32 ಸ್ಮಾರ್ಟ್‌ಫೋನ್ ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಸೆನ್ಸಾರ್ ಪ್ರೈಮೆರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ನೇರವಾದ ಸೈಡ್‌ವಾಲ್ ಹೊಂದಿದ್ದು, ಪ್ರೀಮಿಯಂ ಅನುಭವವನ್ನು ನೀಡಲಿದೆ. ಇದನ್ನು ನೋಕಿಯಾ 65W ಡ್ಯುಯಲ್ ಪೋರ್ಟ್ ವಾಲ್ ಮೂಲಕ ಚಾರ್ಜ್ ಮಾಡಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ನೋಕಿಯಾ G22 ಸ್ಮಾರ್ಟ್‌ಫೋನ್ ಬೆಲೆ 179 ಯುರೋ (ಅಂದಾಜು 15,307ರೂ)ಆಗಿದೆ. ಇನ್ನು ನೋಕಿಯಾ C22 ಬೆಲೆ 129 ಯುರೋ (ಅಂದಾಜು 11,065ರೂ)ಆಗಿದೆ. ಹಾಗೆಯೇ ನೋಕಿಯಾ C32 ಸ್ಮಾರ್ಟ್‌ಫೋನ್ ಬೆಲೆ 139 ಯುರೋ (ಅಂದಾಜು 11,931ರೂ) ಆಗದೆ. ಇನ್ನು ಸ್ಮಾರ್ಟ್‌ಫೋನ್‌ಗಳನ್ನು ಮಿಡ್ನೈಟ್ ಬ್ಲ್ಯಾಕ್ ಅಂಡ್ ಸ್ಯಾಂಡ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ನೋಕಿಯಾ ಕಂಪೆನಿ ಇತ್ತೀಚಿಗೆ ತನ್ನ ನೋಕಿಯಾ C02 ಸ್ಮಾರ್ಟ್‌ಫೋನ್ ಅನ್ನು ಸೈಲೈಂಟ್ ಆಗಿ ಬಿಡುಗಡೆ ಮಾಡಿದೆ. ಇದು unspecified ಕ್ವಾಡ್ ಕೋರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3,000mAh ಸಾಮರ್ಥ್ಯದ ರಿಮೂವೆಬಲ್ ಬ್ಯಾಟರಿಯನ್ನು ಒಳಗೊಂಡಿದೆ. ನೋಕಿಯಾ C02 ಸ್ಮಾರ್ಟ್‌ಫೋನ್ 5.45 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ FWVGA+ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.


Click it and Unblock the Notifications








