Home
ಸುದ್ದಿಜಾಲ

ಟೀಸರ್‌ನಲ್ಲಿ ಮೋಡಿ ಮಾಡಿದ ನೋಕಿಯಾ.. ಭಾರತದಲ್ಲಿ ಬರಲಿದೆ ಹೊಸ ನೋಕಿಯಾ 5G ಫೋನ್‌!

ನೋಕಿಯಾ ಕಂಪೆನಿ ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರ್ಯಾಂಡ್‌ ಅಂತಾನೇ ಖ್ಯಾತಿ ಪಡೆದಿದೆ. ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಇತರೆ ಬ್ರ್ಯಾಂಡ್‌ಗಳಿಗೆ ಟಫ್‌ ಫೈಟ್‌ ನೀಡುತ್ತಿದೆ. ಇದೀಗ ತನ್ನ 5G ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸಲು ಮುಂದಾಗಿದ್ದು, ಸಧ್ಯದಲ್ಲೇ ಭಾರತದಲ್ಲಿ ಹೊಸ ಫೋನ್‌ ಪರಿಚಯಿಸಲು ಮುಂದಾಗಿದೆ.

ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಲಾಂಚ್‌ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ಹೆಸರು ಹಾಗೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ, ಆದರೆ ಹೊಸ 5G ಫೋನ್‌ನ ಟೀಸರ್‌ ವೀಡಿಯೊ ಬಿಡುಗಡೆ ಮಾಡಿದೆ. ಈ ಟೀಸರ್‌ ವೀಡಿಯೋ ನೋಡಿದರೆ ಇದು ಮಿಡ್‌ ರೇಂಜ್‌ನಲ್ಲಿ ಬರುವ ಸ್ಮಾರ್ಟ್‌ಫೋನ್‌ ಆಗಿರಲಿದೆ ಎನ್ನಲಾಗಿದೆ. ಹಾಗಾದ್ರೆ ನೋಕಿಯಾದ ಹೊಸ ಟೀಸರ್‌ ವೀಡಿಯೊದಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೀಸರ್‌ನಲ್ಲಿ ಮೋಡಿ ಮಾಡಿದ ನೋಕಿಯಾ.. ಭಾರತದಲ್ಲಿ ಬರಲಿದೆ ಹೊಸ ನೋಕಿಯಾ 5G ಫೋನ್‌!

ನೋಕಿಯಾ ಕಂಪೆನಿ ಭಾರತದಲ್ಲಿ ಹೊಸ 5G ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ಘೋಷಿಸುವ ಟೀಸರ್ ವೀಡಿಯೊವನ್ನು X (ಟ್ವಿಟರ್‌)ನಲ್ಲಿ ಶೇರ್‌ ಮಾಡಿದೆ. ಅಷ್ಟೇ ಅಲ್ಲ ಈ ಸ್ಮಾರ್ಟ್‌ಫೋನ್‌ ಇದೇ ಸೆಪ್ಟೆಂಬರ್ 6 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಕುರಿತಾಗಿ ಯಾವುದೇ ಒಂದು ವಿಚಾರವನ್ನು ಕೂಡ ಬಹಿರಂಗಪಡಿಸಿಲ್ಲ. ಇನ್ನು ಟೀಸರ್‌ ವೀಡಿಯೋದಲ್ಲಿ ಸ್ಮಾರ್ಟ್‌ಫೋನ್‌ನ ಬಾಗಿದ ಮೂಲೆಗಳನ್ನು ಕಾಣಬಹುದಾಗಿದೆ ಅಷ್ಟೇ.

ಇತ್ತೀಚಿಗೆ ನೋಕಿಯಾ ಕಂಪೆನಿ ಯುಎಸ್‌ನಲ್ಲಿ ಹೊಸ 5G ಫೋನ್‌ ನೋಕಿಯಾ G310 5G ಅನ್ನು ಬಿಡುಗಡೆ ಮಾಡಿತ್ತು. ಇದೇ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಹೊಸ ಅವತಾರದಲ್ಲಿ ಬರಬಹುದು ಎಂಬ ನಿರೀಕ್ಷೆಯನ್ನು ಇಡಲಾಗಿದೆ. ಇನ್ನು ನೋಕಿಯಾ G310 5G ಸ್ಮಾರ್ಟ್‌ಫೋನ್‌ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಫೋನ್ 720 x 112 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.

ಇನ್ನು ನೋಕಿಯಾ G310 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ 8nm ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ ನಲ್ಲಿ ರನ್‌ ಆಗಲಿದೆ. ಹಾಗೆಯೇ 4GB RAM ಮತ್ತು 128GB ಇಂಟರ್ ಸ್ಟೋರೇಜ್‌ ನೊಂದಿಗೆ ಬರಲಿದೆ. ಇದು ಮೈಕ್ರೋ SD ಕಾರ್ಡ್ ಬೆಂಬಲವನ್ನು ಸಹ ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ ಟ್ರಿಪಲರ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ.

ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 20W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52-ರೇಟ್ ಆಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 802.11 b/g/n/ac, ಬ್ಲೂಟೂತ್ 5.1, GPS/AGPS, USB OTG, ಮೈಕ್ರೋ-USB ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ. ಹೆಚ್ಚುವರಿಯಾಗಿ, ಈ ಸ್ಮಾರ್ಟ್‌ಫೋನ್‌ ಆಟೋ-ರಿಪೇರಿಗಾಗಿ ಕಂಪನಿಯ "ಕ್ವಿಕ್‌ಫಿಕ್ಸ್" ಟೆಕ್ನಾಲಜಿಯನ್ನು ಒಳಗೊಂಡಿದೆ.

ಸದ್ಯ ನೋಕಿಯಾ ಕಂಪೆನಿ ಟೀಸರ್‌ ವೀಡಿಯೋ ಕೂಡ ಇದೇ ಮಾದರಿಯ ಮೊಬೈಲ್‌ ಲುಕ್‌ ಅನ್ನು ಒಳಗೊಂಡಿದೆ. ಆದರಿಂದ ಭಾರತದಲ್ಲಿ ನೋಕಿಯಾ G310 5G ಸ್ಮಾರ್ಟ್‌ಫೋನ್‌ ಹೊಸ ಸ್ವರೂಪದಲ್ಲಿ ಹೊಸ ಹೆಸರಿನೊಂದಿಗೆ ಎಂಟ್ರಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮಿಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ 5G ಮೊಬೈಲ್‌ಗಳ ಮಾರುಕಟ್ಟೆ ಸಾಕಷ್ಟು ಬೇಡಿಕೆ ಕ್ರಿಯೆಟ್‌ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ನೋಕಿಯಾದ ಹೊಸ 5G ಮೊಬೈಲ್‌ ಬಗ್ಗೆ ಕೂಡ ಇನ್ನಿಲ್ಲದ ಕುತೂಹಲ ಗರಿಗೆದರುವಂತೆ ಮಾಡಿದೆ.

Best Mobiles in India

English summary
Nokia has released a teaser, announcing the launch of a new Nokia 5G phone in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+