Subscribe to Gizbot

ನೋಕಿಯಾ ಲೂಮಿಯಾ 510 ಮುಂದಿನವಾರ ಮಾರುಕಟ್ಟೆಗೆ

Posted By: Vijeth

ನೋಕಿಯಾ ಲೂಮಿಯಾ 510 ಮುಂದಿನವಾರ ಮಾರುಕಟ್ಟೆಗೆ
ಜಾಗತಿಕ ದಿಗ್ಗಜ ಮೋಬೈಲ್‌ ತಯಾರಿಕಾ ಸಂಸ್ಥೆಯಾದಂತಹ ನೋಕಿಯಾ ಇಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ತನ್ನಯ ನೂತನ ವಿಂಡೋಸ್‌ ಚಾಲಿತ ಲೂಮಿಯಾ 510 ಸ್ಮಾರ್ಟ್‌ಫೋನ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಂದಹಾಗೆ ನೋಕಿಯಾ ತನ್ನಯ ನೂತನ ಲೂಮಿಯಾ 510 ಸ್ಮಾರ್ಟ್‌ಫೋನ್‌ ಅನ್ನು ಈ ಹಿಂದೆ ಬಿಡುಗಡೆ ಮಾಡಿದ್ದಂತಹ ಲೂಮಿಯಾ 610 ಬೆಲೆ ಗಿಂತಲೂ ಕಡಿಮೆ ಬೆಲೆಯಲ್ಲಿ ಅಂದರೆ ರೂ.11,000 ಸಾವಿರಕ್ಕಿಂತಲೂ ಕಡಿಮೆ ದರದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಅಂದಹಾಗೆ ನೂತನ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಕುರಿತಾಗಿ ತಿಳಿದು ಕೊಳ್ಳೋಣ. ಲೂಮಿಯಾ 510 ನಲ್ಲಿ 4-ಇಂಚಿನ ದರ್ಶಕ ದೊಂದಿಗೆ WVGA (480×800) ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದ್ದು, 5-MP ಕ್ಯಾಮೆರಾ, 800MHz ಸಿಂಗಲ್‌ ಕೋರ್‌ ಪ್ರೊಸೆಸರ್‌ 4GB ಆಂತರಿಕ ಮೆಮೊರಿ ಹಾಗೂ 256MB RAM ಒಳಗೊಂಡಿದೆ. ಅಲ್ಲದೆ 7GB ಸ್ಕೈಟೈವ್‌ ಸ್ಟೋರೇಜ್‌ ಕೂಡ ಹೊಂದಿದ್ದು. 1,300mAh ಬ್ಯಾಟರಿ ಇದೆ. ಅಂದಹಾಗೆ ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಇಲ್ಲ.

ಇಷ್ಟೇ ಅಲ್ಲ ನೋಕಿಯಾ ತನ್ನಯ ನೂತನ ಸ್ಮಾರ್ಟ್‌ಫೋನ್‌ ನೊಂದಿಗೆ ಅನ್‌ಲಿಮಿಟೆಡ್‌ ನೋಕಿಯಾ ಮ್ಯೂಸಿಕ್‌ ಹಾಗೂ ನೋಕಿಯಾ ಮಿಕ್ಸೆಡ್‌ ರೇಡಿಯೋದ ಸಬ್‌ಸ್ಕ್ರಿಪ್ಷನ್‌ ಕೂಡ ನೀಡಲಿದೆ. ಹಾಗೂ ಬಳಕೆದಾರರು ಫೋಟೋಗ್ರಫಿಗೆ ಸಂಬಂಧಿಸಿದ ಕ್ಯಾಮೆರಾ ಎಕ್ಸಟ್ರಾ ಆಪ್ಸ್‌ಗಳನ್ನು ಕೂಡಾ ಡೌನ್ಲೋಡ್‌ ಮಾಡಿಕೊಳ್ಳ ಬಹುದಾಗಿದೆ. ವಿಂಡೋಸ್‌ ಫೋನ್‌ 7.8 ಆಪರೇಟಿಂಗ್‌ ಸಿಸ್ಟಂನೊಂದಿಗೆ ನೂತನ ಲೂಮಿಯಾ 510 ಮುಂದಿನ ವಾರದ ಓಳಗಾಗಿ ಮಾರುಕಟ್ಟೆಗೆ ಲಭ್ಯವಾಗಲಿದೆ.

ಟಾಪ್‌ 5 ವಿಂಡೋಸ್‌ ಚಾಲಿತ ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot