ಭಾರತದಲ್ಲಿ ಲ್ಯುಮಿಯಾ 620 ಬಿಡುಗಡೆ ಯಾವಾಗ ?

Posted By:

ನೋಕಿಯಾ ಲ್ಯುಮಿಯಾ 620 ಎಲ್ಲಿದೆ ? ಸದ್ಯ ನೋಕಿಯಾ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಈಗಾಗ್ಲೇ ನೋಕಿಯಾ ಲ್ಯುಮಿಯಾ 920 ಮತ್ತು 820 ಖರೀದಿ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿದೆ.ಈ ಹಿನ್ನೆಲೆಯಲ್ಲಿ ನೋಕಿಯಾ ಲ್ಯುಮಿಯ 620 ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದೆ.

ನೋಕಿಯಾ ಮಾಹಿತಿಗಳ ಪ್ರಕಾರ ಫಬ್ರವರಿ ಎರಡನೇ ವಾರದಲ್ಲಿ ಲ್ಯುಮಿಯಾ 620 ಬಿಡುಗಡೆಯಾಗಬೇಕಿತ್ತು. ಆದ್ರೆ ಇನ್ನೂ ಯಾಕೆ ಬಿಡುಗಡೆಯಾಗಿಲ್ಲ ಎನ್ನುವುದೇ ಈಗ ಇರುವ ಸದ್ಯದ ಕುತೂಹಲ.

ನೋಕಿಯಾ ಲ್ಯುಮಿಯ ಶ್ರೇಣಿಯ ಇನ್ನಷ್ಟು ಸ್ಮಾರ್ಟ್‌ಫೋನ್‌ ಚಿತ್ರಗಳಿಗಾಗಿ  ಗಿಜ್ಬಾಟ್‌ ಗ್ಯಾಲರಿ

ಭಾರತದಲ್ಲಿ ಲ್ಯುಮಿಯಾ 620 ಬಿಡುಗಡೆ ಯಾವಾಗ ?

ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ನೋಕಿಯಾ ಕಂಪೆನಿಯನ್ನು ಪ್ರಶ್ನಿಸಿದಾಗ ಲ್ಯೂಮಿಯ 620 ಬಗ್ಗೆ ಕೆಲವು ಎಕ್ಸ್‌ಕ್ಲೂಸಿವ್‌ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಪ್ರಕಾರ ವಿಂಡೋಸ್ 8 ಆಪರೇಟಿಂಗ್‌ ಸಿಸ್ಟಂ ಇರುವಂತಹ ಈ ಫೋನ್‌ ಭಾರತದ ಮಾರುಕಟ್ಟೆಗೆ ಫೆಬ್ರವರಿ 28ಕ್ಕೆ ಬಿಡುಗಡೆಯಾಗಲಿದೆ . ಮಾರ್ಚ್‌ ಮೊದಲ ವಾರದಲ್ಲಿ ಎಲ್ಲಾ ರಿಟೇಲ್‌ ಮಳಿಗೆಗಳಲ್ಲಿ ನೋಕಿಯಾ ಲ್ಯುಮಿಯಾ 620 ಲಭ್ಯವಾಗಲಿದೆ.

ನೋಕಿಯಾ ಲ್ಯುಮಿಯಾ ಈಗಾಗ್ಲೇ ವಿದೇಶದಲ್ಲಿ ಬಿಡುಗಡೆಯಾಗಿದ್ದು ಇಂಡೋನೆಷ್ಯಾದಲ್ಲಿ 2,849,000 ಐಡಿಆರ್‌ (15,800 ರೂಪಾಯಿ) , ಜರ್ಮನಿಯಲ್ಲಿ 269 ಯೂರೋ(19,000 ರೂಪಾಯಿ) ಬಿಡುಗಡೆಯಾಗಿದೆ. ಒಟ್ಟಿನಲ್ಲಿ ಭಾರತದಲ್ಲಿ ಎಷ್ಟು ದರವನ್ನು ನಿಗದಿ ಪಡಿಸಿದೆ ಎಂಬುದನ್ನು ಲ್ಯುಮಿಯಾ 620 ಬಿಡುಗಡೆಯಾದ ಬಳಿಕವಷ್ಟೇ ತಿಳಿಯಬೇಕಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot