ನೋಕಿಯಾ ವಿಂಡೋಸ್ ಫೋನ್ 8 ಯಾವಾಗ ?

By Varun
|

ನೋಕಿಯಾ ವಿಂಡೋಸ್ ಫೋನ್ 8 ಯಾವಾಗ ?
ಯೂರೋಪ್ ಖಂಡದ ಪುಟ್ಟ ರಾಷ್ಟ್ರವಾದ ಫಿನ್ ಲ್ಯಾಂಡ್ ನ ನೋಕಿಯಾ ಕಂಪನಿ ಮೊಬೈಲ್ ಕ್ಷೇತ್ರದಲ್ಲಿ ಸಾಧಿಸಿದ್ದು ಬಹಳಷ್ಟು. ಆದರೆ ಕಳೆದೆರಡು ವರ್ಷಗಳಿಂದ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಹಾಗು ಚೀನಾದ ಕಡಿಮೆ ಬಜೆಟ್ ಫೋನುಗಳಿಂದ ಹೊಡೆತ ತಿಂದಿರುವ ಅದು, ಈಗ ತನ್ನ ಸ್ಥಾನವನ್ನು ಪುನಃ ಪಡೆದುಕೊಳ್ಳಲು ಮೈಕ್ರೋಸಾಫ್ಟ್ ನ ವಿಂಡೋಸ್ 8 ತಂತ್ರಾಂಶವನ್ನುಅವಲಂಬಿಸುವ ಪರಿಸ್ಥಿತಿ ಬಂದಿದೆ.

ಅದಕ್ಕಾಗಿ ಆಪಲ್ ಐಫೋನ್ 5 ಗಿಂತಲೂ ಮುನ್ನವೆ ತನ್ನ ಹೈ ಎಂಡ್ ಸ್ಮಾರ್ಟ್ ಫೋನುಗಳಿಗೆ ವಿಂಡೋಸ್ 8 ತಂತ್ರಾಂಶದ ಅಪ್ಗ್ರೇಡ್ ಮಾಡಲು ಯೋಚಿಸಿದ್ದು, ಸೆಪ್ಟಂಬರ್ 5ರ ವೇಳೆಗೆ ಮಾಡಲಿದೆ ಎಂಬ ಸುದ್ದಿ ಬಂದಿದೆ.

ಈಗಾಗ್ಲೇ ಮೈಕ್ರೋಸಾಫ್ಟ್ ಜೊತೆ ಮಾತುಕತೆ ನಡೆಸಿರುವ ನೋಕಿಯಾ, ಆಪಲ್ ಐಫೋನ್ 5 ಬಿಡುಗಡೆಯಾಗುವ ಒಂದು ವಾರ ಮುನ್ನವೆ ಅಪ್ಗ್ರೇಡ್ ಮಾಡಲು ಯೋಚಿಸಿದೆಯಂತೆ.

ತನ್ನ ಸ್ವಂತ ತಂತ್ರಾಂಶವಾದ ಸಿಮ್ಬಿಯನ್ ಅನ್ನು ಹೋದ ವರ್ಷ ತೊರೆದ ನೋಕಿಯಾ ಇತರೆ ಮೊಬೈಲು ಕಂಪನಿಗಳ ರೀತಿ ಆಂಡ್ರಾಯ್ಡ್ ತಂತ್ರಾಂಶವನ್ನು ಒಪ್ಪಿಕೊಳ್ಳದೆ ಈ ದುಃಸ್ಥಿತಿ ಬಂದೊದಗಿದ್ದು, ಸ್ಯಾಮ್ಸಂಗ್ ಹಾಗು ಆಪಲ್ ಕಂಪನಿಗಳ ಜೊತೆ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ವಿಂಡೋಸ್ 8 ತಂತ್ರಾಂಶವೇ ಅದನ್ನು ಕಾಪಾಡಬೇಕು ಎನ್ನುವಂತೆ ಆಗಿದೆ.

ನೋಕಿಯಾ ಈ ಬಾರಿ ವಿಂಡೋಸ್ 8 ಇಟ್ಟುಕೊಂಡು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗೆಲ್ಲುತ್ತಾ ಎಂದು ಕಾದು ನೋಡಬೇಕು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X