ನೋಕಿಯಾದ ಪ್ರಥಮ ಆಂಡ್ರಾಯ್ಡ್ ಟ್ಯಾಬ್ಲೆಟ್ ನೋಕಿಯಾ ಎನ್1

By Shwetha
|

"ಪ್ರಥಮ ನೋಕಿಯಾ ಬ್ರ್ಯಾಂಡ್ ಆಂಡ್ರಾಯ್ಡ್ ಟ್ಯಾಬ್ಲೆಟ್ ನೋಕಿಯಾ ಎನ್1 ಇದೀಗ ಅಧಿಕೃತವಾಗಿ ಜನವರಿ 7 ರಂದು ಬೀಜಿಂಗ್‌ನಲ್ಲಿ ಲಾಂಚ್ ಆಗಲಿದೆ.

ಫಿನ್ನಿಶ್ ಸಂಸ್ಥೆಯು ಅಧಿಕೃತ ಘೋಷಣೆಯನ್ನು ಈಗಾಗಲೇ ಮಾಡಿದ್ದು, ಚೀನಾದ ಸಾಮಾಜಿಕ ತಾಣವಾದ ವೈಬೋದಲ್ಲಿ ಇದೀಗ ಈ ಮಾಹಿತಿಯನ್ನು ದೃಢಪಡಿಸಿದೆ.

ನೋಕಿಯಾ ಲಾಂಚ್ ಮಾಡಲಿದೆ ನೋಕಿಯಾ ಎನ್1 ಟ್ಯಾಬ್ಲೆಟ್

ನವೆಂಬರ್‌ನಲ್ಲಿ ಪ್ರಥಮ ಬಾರಿಗೆ ಘೋಷಣೆಯಾಗಿದ್ದ ನೋಕಿಯಾ ಎನ್1 ಮೊಟ್ಟ ಮೊದಲು ಚೈನಾದಲ್ಲಿ ಲಾಂಚ್ ಆಗುತ್ತದೆ ಎಂಬ ಮಾಹಿತಿಯನ್ನು ದೃಢಪಡಿಸಿತ್ತು. ತನ್ನ ಟ್ಯಾಬ್ಲೆಟ್ ತಯಾರಿಕೆ, ವಿತರಣೆ ಮತ್ತು ಮಾರಾಟವನ್ನು ಬ್ರ್ಯಾಂಡ್ ಪರವಾನಿಗೆ ಸಂಸ್ಥೆಯಾದ ಓಇಎಮ್‌ನೊಂದಿಗೆ ಮಾಡಿಕೊಂಡಿದ್ದು ಟ್ಯಾಬ್ಲೆಟ್‌ನ ಸಂಪೂರ್ಣ ಜವಬ್ದಾರಿಯನ್ನು ಈ ಸಂಸ್ಥೆಯೇ ವಹಿಸಿಕೊಂಡಿದೆ. ನೋಕಿಯಾ ಎನ್1 ಬೆಲೆ ರೂ 15,400 ಆಗಿದ್ದು ಇತರ ಮಾರುಕಟ್ಟೆಗಳಲ್ಲಿ ಇದನ್ನು ದೊರೆಯುವಂತೆ ನಿರ್ಮಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಮೈಕ್ರೋಸಾಫ್ಟ್‌ನ ಒಗ್ಗೂಡುವಿಕೆಯ ನಂತರ ನೋಕಿಯಾ ಎನ್1 ಕಂಪೆನಿಯ ಪ್ರಥಮ ಮೊಬೈಲ್ ಉತ್ಪನ್ನವಾಗಿದ್ದು ನೋಕಿಯಾ ತನ್ನ ಮೊಬೈಲ್ ಉತ್ಪನ್ನಗಳಿಗೆ ತನ್ನದೇ ಬ್ರ್ಯಾಂಡ್ ಅನ್ನು ಬಳಸುವಂತಿಲ್ಲ ಎಂಬುದನ್ನು ದೃಢಪಡಿಸಿದೆ. ಬೇರೆಯದೇ ಬ್ರ್ಯಾಂಡ್ ಅಡಿಯಲ್ಲಿ ನೋಕಿಯಾ ಶೀಘ್ರವೇ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿದೆ.

ನೋಕಿಯಾ ಎನ್1, 7.9 ಇಂಚಿನ (2048x1536 ಪಿಕ್ಸೆಲ್) ಐಪಿಎಸ್ LED ಬ್ಯಾಕ್‌ಲಿಟ್ ಡಿಸ್‌ಪ್ಲೇಯನ್ನು ಹೊಂದಿದ್ದು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಫೋನ್ ಹೊಂದಿದೆ. ಇದು 64 ಬಿಟ್ 2.3GHz ಇಂಟೆಲ್ ಆಟಮ್ Z3580 ಪ್ರೊಸೆಸರ್ ಜೊತೆಗೆ VR G6430 GPU ಅನ್ನು ಹೊಂದಿದೆ. ಫೋನ್‌ನಲ್ಲಿ 2 ಜಿಬಿ LPDDR3 RAM ಇದ್ದು, 32 ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಡಿವೈಸ್ ಪಡೆದುಕೊಂಡಿದೆ.

Best Mobiles in India

English summary
This article tells about Nokia N1 Android Tablet's Launch Date Confirmed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X