Home
ಸುದ್ದಿಜಾಲ

ನೋಕಿಯಾ ಪ್ರೊಫೆಷನಲ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್‌ P3600 ಬಿಡುಗಡೆ!

ಮೊಬೈಲ್‌ ಮಾರುಕಟ್ಟೆಯ ಎವರ್‌ಗ್ರೀನ್‌ ಬ್ರಾಂಡ್‌ ನೋಕಿಯಾ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಸೇರಿದಂತೆ ಇತರೆ ಪ್ರಾಡಕ್ಟ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ನೋಕಿಯಾ ಪ್ರೊಫೆಷನಲ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ P 3600 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ ಎಸ್‌ಬಿಸಿ ಮತ್ತು ಆಪ್ಟ್‌ಎಕ್ಸ್‌ ಅಡಾಪ್ಟಿವ್‌ ಕೊಡೆಕ್‌ ಬೆಂಬಲವನ್ನು ಒಳಗೊಂಡಿದೆ.

ನೋಕಿಯಾ

ಹೌದು, ನೋಕಿಯಾ ಸಂಸ್ಥೆ ತನ್ನ ಹೊಸ ನೋಕಿಯಾ ಪ್ರೊಫೆಷನಲ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ P 3600 ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತಗೊಳಿಸಿದೆ. ಇನ್ನು ಈ ಇಯರ್‌ಫೋನ್ಸ್‌ ಒಂದೇ ಬಣ್ಣದ ಆಯ್ಕೆಯಲ್ಲಿ ನೀಡಲಾಗುತ್ತದೆ. ಇದಲ್ಲದೆ ಚಾರ್ಜಿಂಗ್ ಕೇಸ್‌ನೊಂದಿಗೆ 24 ಗಂಟೆಗಳವರೆಗೆ ವಿಸ್ತರಿಸಬಹುದಾದ ಆರು ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಈ TWS ಇಯರ್‌ಫೋನ್ಸ್‌ IPX 4 ವಾಟರ್‌ ಪ್ರೂಪ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ

ನೋಕಿಯಾ ಪ್ರೊಫೆಷನಲ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್‌ P3600 ಇಯರ್‌ಫೋನ್‌ 8mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಸಮತೋಲಿತ ಆರ್ಮೇಚರ್ ಹೊಂದಿರುವ ಡ್ಯುಯಲ್-ಡ್ರೈವರ್ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಇಯರ್‌ಫೋನ್ಸ್‌ 20Hz ನಿಂದ 20,000Hz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಶ್ರೇಣಿಯನ್ನು ಒಳಗೊಂಡಿದೆ. ಜೊತೆಗೆ ಬ್ಲೂಟೂತ್ 5.2 ಬೆಂಬಲಿಸಲಿದೆ. ಇದಲ್ಲದೆ ಇದು ಎಚ್‌ಎಸ್‌ಪಿ, ಎಚ್‌ಎಫ್‌ಪಿ, ಎವಿಆರ್‌ಸಿಪಿ ಮತ್ತು ಎ2 ಡಿಪಿ ಪ್ರೊಫೈಲ್‌ಗಳನ್ನು ಬೆಂಬಲಿಸುತ್ತದೆ.

ನೋಕಿಯಾ

ಇನ್ನು ಈ ನೋಕಿಯಾ ಪ್ರೊಫೆಷನಲ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ P3600 ನೊಂದಿಗೆ ಬೆಂಬಲಿತ ಆಡಿಯೊ ಸ್ವರೂಪಗಳು ಎಸ್‌ಬಿಸಿ ಮತ್ತು ಆಪ್ಟ್‌ಎಕ್ಸ್ ಅಡಾಪ್ಟಿವ್ ಅನ್ನು ಒಳಗೊಂಡಿವೆ. ಈ ಎರಡೂ ಇಯರ್‌ಬಡ್ಸ್‌ ತಲಾ 45mAh ಬ್ಯಾಟರಿಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ 400mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅಲ್ಲದೆ P3600 ಇಯರ್‌ಫೋನ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ ಆರು ಗಂಟೆಗಳವರೆಗೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ 24 ಗಂಟೆಗಳವರೆಗೆ ಇರುತ್ತದೆ ಎಂದು ನೋಕಿಯಾ ಹೇಳಿದೆ. ಕಂಪನಿಯ ಪ್ರಕಾರ, ಟಿಡಬ್ಲ್ಯೂಎಸ್ ಇಯರ್‌ಫೋನ್‌ಗಳನ್ನು ಸುಮಾರು ಎರಡು ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.

ನೋಕಿಯಾ

ಇದಲ್ಲದೆ ನೋಕಿಯಾ ಪ್ರೊಫೆಷನಲ್ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ P3600 ಉತ್ತಮ ಧ್ವನಿ ಕರೆಗಳಿಗಾಗಿ ಸ್ಪಷ್ಟ ಧ್ವನಿ ಕ್ಯಾಪ್ಚರ್ ತಂತ್ರಜ್ಞಾನವನ್ನು ಹೊಂದಿದೆ. ಇದು ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ಗಾಗಿ ಹೊಂದುವಂತೆ ಮಾಡಲಾಗಿದೆ. ಗೇಮಿಂಗ್ ಮೋಡ್ ಕೂಡ ಇದೆ, ಅದು ಸುಪ್ತತೆಯನ್ನು ಕಡಿಮೆ ಮಾಡುತ್ತದೆ. ಇನ್ನು P3600 TWS ಇಯರ್‌ಫೋನ್‌ ಬೆಲೆ ಅಥವಾ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೋಕಿಯಾ ಕಂಪೆನಿ ಹಂಚಿಕೊಂಡಿಲ್ಲ. ಆದರೆ ಕಂಪೆನಿಯ ವೆಬ್‌ಸೈಟ್‌ನಲ್ಲಿ "ಶೀಘ್ರದಲ್ಲೇ ಬರಲಿದೆ" ಎಂದು ಪಟ್ಟಿ ಮಾಡಲಾಗಿದೆ.

Best Mobiles in India

English summary
Nokia Professional True Wireless Earphones P3600 With 6-Hour Battery Life Launched.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+