ನೋಕಿಯಾದ ಹೊಸ ಹ್ಯಾಂಡ್‌ಸೆಟ್‌ ಫೋನ್‌ನ ಫೀಚರ್ಸ್‌ ಬಹಿರಂಗ!

|

ಟೆಕ್‌ ಜಗತ್ತಿನ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ನೋಕಿಯಾ ಹೊಸ ಫೊನ್‌ ಬಿಡುಗಡೆ ಮಾಡುವುದಕ್ಕೆ ಸಿದ್ದತೆ ನಡೆಸಿದೆ. MWC2020 ರ ಸಮ್ಮೇಳನದಲ್ಲಿ ನೊಕೀಯಾ ಕಂಪೆನಿಯ ಮೊಬೈಲ್‌, ಸ್ಮಾರ್ಟ್‌ಫೊನ್‌ಗಳು ಬಿಡುಗಡೆಯಾಗಬೇಕಿತ್ತು. ಆದರೆ ಇತರ ಹಲವಾರು ಕಂಪನಿಗಳಂತೆ, MWC 2020 ನಿಂದ ತನ್ನ ಭಾಗವಹಿಸುವಿಕೆಯನ್ನು ನೋಕಿಯಾ ವಾಪಸ್‌ ತೆಗೆದುಕೊಂಡಿದ್ದು, ತನ್ನ ಫೋನ್‌ಗಳನ್ನು ಪ್ರದರ್ಶಿಸಲು ಎಚ್‌ಎಂಡಿ ಗ್ಲೋಬಲ್ ಈಗ ಪ್ರತ್ಯೇಕ ಕಾರ್ಯಕ್ರಮಗಳನ್ನು ನಡೆಸಲಿದೆ.

ಹೌದು

ಹೌದು, ಕೊರೋನಾ ವೈರಸ್‌ ಭೀತಿ ಹಿನ್ನೆಲೆ ಈಗಾಗ್ಲೆ MWC2020ರ ಸಮ್ಮೆಳನದಿಂದ ದೂರ ಉಳಿದಿರುವ ನೋಕಿಯಾ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಬಿಡುಗಡೆಗೂ ಮುನ್ನವೆ ಹೊಸ ಮೊಬೈಲ್‌ನ ಫೀಚರ್ಸ್‌ ಬಹಿರಂಗಗೊಂಡಿದೆ. ಸದ್ಯ ನೋಕಿಉಆ ಫೋನ್‌ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ದಿನಾಂಕ ಘೋಷಣೆ ಮಾಡಿಲ್ಲವಾದರೂ ಹೊಸ ವಿನ್ಯಾಸದ ಮೊಬೈಲ್‌ ಇದಾಗಿರಲಿದೆ ಅನ್ನೊದು ಬಹಿರಂಗವಾಗಿದೆ.

ಲೀಕ್‌

ಸದ್ಯ ಲೀಕ್‌ ಮಾಹಿತಿ ಪ್ರಕಾರ ನೋಕಿಯಾ ಬಿಡುಗಡೆ ಮಾಡಲಿರುವ ಹೊಸ ಹ್ಯಾಡ್‌ಸೆಟ್‌ 123.8x52.4x13.1 ಮಿಮೀ ಅಳತೆಯನ್ನು ಹೊಂದಿದ್ದು, ಇದು ಸುಮಾರು 88 ಗ್ರಾಂ ತೂಕವಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇದು ಕ್ಯಾಂಡಿ ಬಾರ್ ವಿನ್ಯಾಸವನ್ನು ಹೊಂದಿರುವ ಫೋನ್‌ ಆಗಿದ್ದು, 2.4-ಇಂಚಿನ ಡಿಸ್ಪ್ಲೇ ಹೊಂದಿದೆ. ಬಜೆಟ್‌ ಬೆಲೆಯ ಹ್ಯಾಡ್‌ಸೆಟ್‌ ಆಗಿದ್ದು ಇದು ಹೊಸ ಆವೃತ್ತಿಯಲ್ಲಿ ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗ್ಗೆ ಲಗ್ಗೆ ಹಾಕಲಿದೆ.

ಇನ್ನು

ಇನ್ನು ಈ ಹೊಸ ಮೊಬೈಲ್‌ 8MB RAM, 16MB ROM, ಸ್ಟೋರೇಜ್‌ ಅನ್ನು ಹೊಂದಿದ್ದು, 0.3-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಫೋನ್‌ 1,200 mAh ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಅನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಬಿಟ್ಟುಕೊಟ್ಟಿಲ್ಲ. ಇಂದಿನ ಜಮಾನಕ್ಕೆ ತಕ್ಕಂತೆ ವಿನ್ಯಾಸವನ್ನ ಫೋನ್‌ ಹೊಂದಿರಲಿದೆ ಅನ್ನೊದು ಮಾತ್ರ ಖಚಿತವಾಗಿದೆ.

ನೋಕಿಯಾ

ಇದಲ್ಲದೆ ನೋಕಿಯಾ ಕಂಪೆನಿ ಪ್ರೀಮಿಯಂ ನೋಕಿಯಾ 8.2, ಮಿಡ್‌ರೇಂಜ್‌ ಆವೃತ್ತಿಯ ನೋಕಿಯಾ 5.2, ಮತ್ತು ಎಂಟ್ರಿ ಲೆವೆಲ್‌ ನೋಕಿಯಾ 1.3 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಈಗಾಗ್ಲೆ ಎಚ್‌ಎಂಡಿ ಗ್ಲೋಬಲ್ ತನ್ನ ‘ನೋಕಿಯಾ ಕ್ಲಾಸಿಕ್ಸ್' ಆವೃತ್ತಿಯ ಹಳೆಯ ನೋಕಿಯಾ ಫೋನ್‌ಗಳಲ್ಲಿ ಒಂದನ್ನು ರಿಬ್ರ್ಯಾಂಡ್‌ ಮಾಡುವ ವದಂತಿಗಳೂ ಕೂಡ ಕೇಳಿ ಬಂದಿದ್ದು, ಹೊಸ ಮಾದರಿಯಲ್ಲಿ ಯಾವ ಸ್ಮಾರ್ಟ್‌ಫೋನ್‌ ಬರಲಿದೆ ಅನ್ನೊ ಕುತೂಹಲವಿದೆ.

ಸ್ಮಾರ್ಟ್‌ಫೋನ್‌

ಇನ್ನು ನೋಕಿಯಾ 8.2 ಸ್ಮಾರ್ಟ್‌ಫೋನ್‌ 5G ಮಾದರಿಯ ಸ್ಮಾರ್ಟ್‌ಫೋನ್ ಎಂಬ ಮಾಹಿತಿ ಕೇಳಿಬಂದಿತ್ತು. ಇದಾದ ನಂತರ ಸ್ಮಾರ್ಟ್‌ಫೋನ್‌ ವಲಯದಲ್ಲಿ ಸಾಕಷ್ಟು ಸಂಚಲನ ಕೂಡ ಸೃಷ್ಟಿಯಾಗಿತ್ತು. ಆದರೆ ಲಭ್ಯ ಮೂಲಗಳ ಪ್ರಕಾರ, ನೋಕಿಯಾ 8.2 ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್‌ ಹೊಂದಿದ್ದು, ಇದು ಇಂಟರ್‌ಸ್ಟೋರೇಜ್‌ 5G ಚಿಪ್‌ನೊಂದಿಗೆ ಬರಲಿದ್ದು, 8GB RAM, 256GB ಇಂಟರ್‌ ಸ್ಟೋರೇಜ್‌ ಮತ್ತು 32 ಮೆಗಾಪಿಕ್ಸೆಲ್ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
A new Nokia feature phone ‘TA-1212’ has been spotted on China’s TENAA certification website. Here’s what you need to know about the new Nokia phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X