4k ಸ್ಕ್ರೀನ್ ಹೊಂದಿರುವ ನೋಕಿಯಾ ಸ್ಮಾರ್ಟ್‌ಟಿವಿ 43 ಬಿಡುಗಡೆ!
ಟೆಕ್ ವಲಯದಲ್ಲಿ ನಾನಾ ಮಾದರಿಯ ಸ್ಮಾರ್ಟ್‌ಟಿವಿಗಳು ಲಬ್ಯವಿವೆ. ಹಲವು ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನ ಜನಪ್ರಿಯ ಕಂಪೆನಿಗಳು ಪರಿಚಯಿಸಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ವಿಭಿನ್ನ ಸ್ಮಾರ್ಟ್‌ಟಿವಿಗಳು ಲಭ್ಯವಿದ್ದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರಾಂಡ್ ಕಂಪೆನಿಯ ಸ್ಮಾರ್ಟ್‌ಟಿವಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ನೋಕಿಯಾ ಕಂಪೆನಿ ಕೂಡ ಒಂದಾಗಿದ್ದು, ಸ್ಮಾರ್ಟ್‌ಟಿವಿ ವಲಯದಲ್ಲಿ ಹಲವು ವಿಶೇಷ ಸ್ಮಾರ್ಟ್‌ಟಿವಿಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ.

ಹೌದು, ನೋಕಿಯಾ ಕಂಪೆನಿ ತನ್ನ ಹೊಸ ನೋಕಿಯಾ ಸ್ಮಾರ್ಟ್ ಟಿವಿ 43 ಇಂಚಿನ ಮಾದರಿಯನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈಗಾಗಲೇ 43 ಇಂಚಿನ ಮಾದರಿಯು 55 ಇಂಚಿನ ಮಾದರಿಯೊಂದಿಗೆ 2019 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಈ ಹೊಸ ಸ್ಮಾರ್ಟ್‌ಟಿವಿ ಈಗಾಗಲೇ ಬಿಡುಗಡೆ ಆಗ ಬೇಕಿತ್ತು. ಆದರೆ ಕರೋನವೈರಸ್ ಲಾಕ್‌ಡೌನ್ ಕಾರಣದಿಂದಾಗಿ ಬಿಡುಗಡೆ ಆಗುವುದು ವಿಳಂಬವಾಗಿದೆ. ಇನ್ನು ಈ ಹೊಸ ನೋಕಿಯಾ ಸ್ಮಾರ್ಟ್ ಟಿವಿ 43-ಇಂಚನ್ನು ಫ್ಲಿಪ್ಕಾರ್ಟ್ ಪರವಾನಗಿ ಒಪ್ಪಂದದ ಭಾಗವಾಗಿ ತಯಾರಿಸಿದೆ. ಇನ್ನು ಹೊಸ ಸ್ಮಾರ್ಟ್‌ಟಿವಿ ವಿನ್ಯಾಶ ಹೇಗಿದೆ, ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ಈ ನೋಕಿಯಾ ಸ್ಮಾರ್ಟ್‌ಟಿವಿ 43 ಇಂಚಿನ ಮಾದರಿಯು ಜೆಬಿಎಲ್ ಆಡಿಯೋ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಒಳಗೊಂಡಿದ್ದು, ಇಂಟರ್‌ಬಿಲ್ಟ್ Chromecast ಹೊಂದಿದೆ. ಇನ್ನು ಈ ಹೊಸ ನೋಕಿಯಾ ಸ್ಮಾರ್ಟ್ ಟಿವಿ 3,840x2,160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, 43 ಇಂಚಿನ 4K UHD ಎಲ್ಇಡಿ ಫ್ಲಾಟ್ ಸ್ಕ್ರೀನ್ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 300 ನಿಟ್ಸ್ ಬ್ರೈಟ್‌ನೆಸ್, 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 16: 9 ರಚನೆಯ ಅನುಪಾತವನ್ನ ಹೊಂದಿದೆ.

ಇದಲ್ಲದೆ ಈ ಸ್ಮಾರ್ಟ್‌ಟಿವಿ 178 ಪದವಿ ಕೋನ. ಇನ್ನು ಇದರಲ್ಲಿ ವಿ-ಆಕಾರದ ದ್ರವ ಕ್ರೋಮ್ ಪೀಠದ ಸ್ಟ್ಯಾಂಡ್ ಕೂಡ ಇದೆ, ಮತ್ತು ಎಲ್ಲಾ ಕಡೆ ಸ್ಲಿಮ್ ಬೆಜೆಲ್ಗಳಿವೆ. ನೋಕಿಯಾ ಸ್ಮಾರ್ಟ್ ಟಿವಿ 43-ಇಂಚು 2GHz CA53 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 2.25GB RAM ಮತ್ತು 16GB ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ OTT ಅಪ್ಲಿಕೇಶನ್‌ಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್ ಟಿವಿ ಗೂಗಲ್ ಪ್ಲೇ ಸ್ಟೋರ್, 2.4GHz ವೈ-ಫೈ, ಮತ್ತು ಬ್ಲೂಟೂತ್ 5.0 ಬೆಂಬಲಿಸಲಿದೆ.

ಅಲ್ಲದೆ ಈ ಸ್ಮಾರ್ಟ್‌ಟಿವಿ 24W output ಹೊಂದಿರುವ ಎರಡು ಸ್ಪೀಕರ್‌ಗಳನ್ನ ಹೊಂದಿದ್ದು, ಜೆಬಿಎಲ್ ಆಡಿಯೋ, ಡಾಲ್ಬಿ ಆಡಿಯೋ, ಡಿಟಿಎಸ್ ಟ್ರುಸರೌಂಡ್ ಬೆಂಬಲವನ್ನು ನೀಡುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಮೂರು ಎಚ್‌ಡಿಎಂಐ ಪೋರ್ಟ್, ಎರಡು ಯುಎಸ್‌ಬಿ ಪೋರ್ಟ್, ಡಿಜಿಟಲ್ ಆಡಿಯೊ ಔಟ್‌ಪುಟ್, RF ಕನೆಕ್ಟಿವಿಟಿ ಇನ್‌ಫುಟ್ ಮತ್ತು ಅನಲಾಗ್ ಆಡಿಯೊ ಇನ್‌ಪುಟ್ ಅನ್ನು ಪ್ಯಾಕ್ ಮಾಡಲಿದೆ. ಇದಲ್ಲದೆ ಈ ರಿಮೋಟ್‌ಗೆ ಎರಡು ಎಎಎ ಬ್ಯಾಟರಿಗಳನ್ನ ಹೊಂದಿವೆ.

ಸದ್ಯು ನೋಕಿಯಾ ಸ್ಮಾರ್ಟ್ ಟಿವಿ 43 ಇಂಚಿನ ಮಾದರಿಯ ಭಾರತದಲ್ಲಿ, 31,999 ಬೆಲೆಯನ್ನ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದ್ದು, ಮೊದಲ ಮಾರಾಟವನ್ನು ಜೂನ್ 8 ರಂದು ನಡೆಯಲಿದೆ. ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸಿದರೆ 5% ಅನಿಯಮಿತ ಕ್ಯಾಶ್ಬ್ಯಾಕ್, ನೀಡಲಿದೆ. ಸದ್ಯ ಈ ಸ್ಮಾರ್ಟ್‌ಟಿವಿ ಬ್ಯಾಕ್ ಕಲರ್ ಮಾದರಿಯಲ್ಲಿ ಲಭ್ಯವಾಗಲಿದೆ.


Click it and Unblock the Notifications