ಪೋಲೀಸ್‌ ಅನ್ನೇ ರಕ್ಷಿಸಿತು ಈ ಫೋನ್

Written By:

ಫೋನ್ ಕೇವಲ ಮಾತನಾಡಲು, ಗೇಮ್ ಆಡಲು ಅಥವಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಸಿನಿಮಾ ಹಾಡು ಕೇಳಲು ಎಂದು ನೀವು ಭಾವಿಸಿದ್ದೆ ಆದರೆ ತಪ್ಪಾಗುತ್ತದೆ. ಕೆಲವೊಮ್ಮೆ ಫೋನ್ ಕೂಡ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡಿ ಮಾಲೀಕನನ್ನೇ ಉಳಿಸುವ ಸಂಭವ ಕೂಡ ಇದೆ.

ಅದು ಏನೆಂದು ನಿಮಗೆ ತಿಳಿಸುವುದೇ ಇಂದಿನ ನಮ್ಮ ಲೇಖನದ ಉದ್ದೇಶವಾಗಿದೆ. ಇದೊಂದು ಸತ್ಯ ಘಟನೆ ನೋಕಿಯಾ ಲ್ಯೂಮಿಯಾ 520 ತನ್ನ ಮಾಲೀಕನನ್ನೇ ರಕ್ಷಿಸಿದ ಪ್ರಸಂಗ ಇದಾಗಿದೆ. ಮೇ ಒಂದರಂದು 24 ವರ್ಷದ ಒಬ್ಬ ಪೋಲೀಸ್ ಅಧಿಕಾರಿ ತನ್ನ ಪೋಲೀಸ್ ಧಿರಿಸನ್ನು ತಾಯಿಯಲ್ಲಿ ಹೇಳಿ ಸ್ವಚ್ಛಮಾಡುವುದಕ್ಕಾಗಿ ತನ್ನ ಮನೆಗೆ ಹೋಗಿದ್ದ. ಆದರೆ ಅಲ್ಲಿ ನಡೆಯುತ್ತಿದ್ದ ಘಟನೆ ಆತನ ಜಂಘಾಬಲವನ್ನೇ ಉಡುಗಿಸಿತ್ತು. ತಂದೆ ಹಾಗೂ ತಾಯಿಯನ್ನು ಒತ್ತೆಯಾಳುಗಳನ್ನಾಗಿಸಿ ಆತನ ಮನೆಯನ್ನು ಕಳ್ಳರು ದೋಚುತ್ತಿದ್ದರು.

ಪೋಲೀಸ್‌ ಅನ್ನೇ ರಕ್ಷಿಸಿತು ಈ ಫೋನ್

ಪೋಲೀಸ್‌ನ ಕೈಯಲಿದ್ದ ಸಮವಸ್ತ್ರವನ್ನು ನೋಡಿ ಆತ ಪೋಲೀಸ್‌ನವನೆಂದು ಕಳ್ಳರಿಗೆ ಅರಿವಾಗುತ್ತದೆ. ಹಾಗೂ ಆತನ ಮೇಲೆ ಗುಂಡಿನ ಮಳೆಯನ್ನೇ ಹರಿಸುತ್ತಾರೆ.
ಅದೃಷ್ಟವಶಾತ್ ಈ ಗುಂಡಿನಿಂದ ಯಾರಿಗೂ ಯಾವುದೇ ಹಾನಿ ಸಂಭವಿಸಲಿಲ್ಲ ಆದರೆ ಆತನ ಜೇಬಿಗೆ ತಾಗಿದ್ದ ಒಂದು ಗುಂಡು ನೋಕಿಯಾ ಲ್ಯೂಮಿಯಾ 520 ಗೆ ಅಪ್ಪಳಿಸಿತ್ತು ಆದರೆ ಆತನಿಗೆ ಯಾವುದೇ ಗಾಯವನ್ನು ಉಂಟುಮಾಡಿರಲಿಲ್ಲ. ಆದರೆ ಆತನ ಸ್ಮಾರ್ಟ್‌ಫೋನ್‌ಗೆ ಹಾನಿ ಉಂಟುಮಾಡಿತ್ತು. ಎಲ್ಲಾ ಗುಂಡಿನ ಮಳೆಯನ್ನು ಆ ಫೋನ್ ಅನುಭವಿಸಿತ್ತು.

ಆದರೆ ಇನ್ನೂ ದುಃಖಕರ ಸಂಗತಿಯೆಂದರೆ ಆ ಕಳ್ಳರನ್ನು ಇನ್ನೂ ಸೆರೆಹಿಡಿಯದೇ ಇದ್ದದ್ದಾಗಿದೆ. ಆದರೂ ನೋಕಿಯಾ ಲ್ಯೂಮಿಯಾ 520 ಜೀವವನ್ನು ಕಾಪಾಡಿದ ಆತ್ಮೀಯ ಗೆಳೆಯನಾಗಿ ಮಾರ್ಪಾಡಾಗಿ ಲ್ಯೂಮಿಯಾ ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot