ಭಾರತದಲ್ಲಿ ಹೊಸ ಸ್ಮಾರ್ಟ್ ಟ್ಯಾಬ್ ಪರಿಚಯಿಸಿದ ನೋಕಿಯಾ! ಬೆಲೆ ಎಷ್ಟಿದೆ?
ನೋಕಿಯಾ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್ ಟ್ಯಾಬ್ಲೆಟ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ನವೀನ ಮಾದರಿಯ ಫೀಚರ್ಸ್ ಹಾಗೂ ಆಕರ್ಷಕ ವಿನ್ಯಾಸಕ್ಕೆ ನೋಕಿಯಾ ಟ್ಯಾಬ್ಲೆಟ್‌ಗಳು ಪ್ರಸಿದ್ಧಿ ಪಡೆದುಕೊಂಡಿವೆ. ಸದ್ಯ ಇದೀಗ ನೋಕಿಯಾ ಕಂಪೆನಿ ತನ್ನ ಹೊಸ ಟ್ಯಾಬ್ಲೆಟ್ ನೋಕಿಯಾ T10 ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದು ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗುವ ಟ್ಯಾಬ್ಲೆಟ್ ಆಗಿದೆ. ಇನ್ನು ಈ ಟ್ಯಾಬ್ಲೆಟ್ OZO ಆಡಿಯೊ ಬೆಂಬಲದೊಂದಿಗೆ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಒಳಗೊಂಡಿದೆ.

ಹೌದುಮ ನೋಕಿಯಾ ಕಂಪೆನಿ ಭಾರತದಲ್ಲಿ ಹೊಸ ನೋಕಿಯಾ T10 ಟ್ಯಾಬ್ಲೆಟ್ ಅನ್ನು ಪರಿಚಯಿಸಿದೆ. ಇದು ಆಕ್ಟಾ-ಕೋರ್ UniSoC T606 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್ ಟ್ಯಾಬ್ಲೆಟ್ 5250mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಟ್ಯಾಬ್ಲೆಟ್ ಓಷನ್ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ನೋಕಿಯಾ T10 ಟ್ಯಾಬ್ಲೆಟ್ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?
ನೋಕಿಯಾ T10 ಟ್ಯಾಬ್ಲೆಟ್ 8 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1280 × 800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 16:10 ರಚನೆಯ ಅನುಪಾತವನ್ನು ಪಡೆದಿದೆ. ಈ ಡಿಸ್‌ಪ್ಲೇ 72.4% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದಲ್ಲದೆ 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ.

ಪ್ರೊಸೆಸರ್ ಕಾರ್ಯವೈಖರಿ ಏನು?
ನೋಕಿಯಾ T10 ಟ್ಯಾಬ್ಲೆಟ್ ಆಕ್ಟಾ-ಕೋರ್ ಯುನಿಸೋಕ್ T606 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಯುನಿಸೋಕ್ ಅನ್ನು 12nm ಪ್ರಕ್ರಿಯೆಯಲ್ಲಿ ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಮಾಲಿ G57 GPU ಸಪೋರ್ಟ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ರನ್ ಆಗಲಿದೆ. ಇದಲ್ಲದೆ ನೋಕಿಯಾ ಕಂಪೆನಿಯು ಎರಡು ಆಂಡ್ರಾಯ್ಡ್ ಆವೃತ್ತಿ ಅಪ್ಡೇಟ್‌ಗಳ ಭರವಸೆಯನ್ನು ನೀಡಿದೆ. ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ ಸೆಟ್‌ಅಪ್ ಏನಿದೆ?
ನೋಕಿಯಾ T10 ಟ್ಯಾಬ್ಲೆಟ್ ಎಲ್ಇಡಿ ಫ್ಲ್ಯಾಷ್ ಹೊಂದಿರುವ 8ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸಿಂಗಲ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ವೀಡಿಯೊ ಕರೆಗಳಿಗಾಗಿ, 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ನೋಕಿಯಾ T10 ಟ್ಯಾಬ್ಲೆಟ್ 5250mAh ಸಾಮರ್ಥ್ಯದ ಬ್ಯಾಟರಿ ಯೂನಿಟ್ ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್ಲೆಟ್‌ನಲ್ಲಿ ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಪೋರ್ಟ್ ಅನ್ನು ಬಳಸಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಬೆಂಬಲವನ್ನು ಪಡೆದಿದೆ. ಇದು ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು OZO ಆಡಿಯೊಗೆ ಬೆಂಬಲವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ನೋಕಿಯಾ T10 ಟ್ಯಾಬ್ಲೆಟ್ ವೈಫೈ ಓನ್ಲಿ ಮತ್ತು ವೈಫೈ ಪ್ಲಸ್ ಲೈಟ್ ಆಯ್ಕೆಯಲ್ಲಿ ಬರಲಿದೆ. ಸದ್ಯ ಭಾರತದಲ್ಲಿ ನೋಕಿಯಾ T10 (ವೈಫೈ ಮಾತ್ರ) 3GB + 32GB ಇಂಟರ್ ಸ್ಟೋರೇಜ್ ಆಯ್ಕೆಗೆ 11,799ರೂ. ಬೆಲೆಯನ್ನು ಹೊಂದಿದೆ. ಅಲ್ಲದೆ 4GB + 64GB ಇಂಟರ್ ಸ್ಟೋರೇಜ್ ಆಯ್ಕೆಯು 12,799 ರೂ.ಬೆಲೆಯಲ್ಲಿ ದೊರೆಯಲಿದೆ.ಇನ್ನು ನೋಕಿಯಾ ಕಂಪೆನಿ ಶೀಘ್ರದಲ್ಲೇ ನೋಕಿಯಾ T10 ನ ವೈಫೈ + LTE ರೂಪಾಂತರವನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ.


Click it and Unblock the Notifications