Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನೋಕಿಯಾ T21 ಟ್ಯಾಬ್‌!..8,200mAh ಬ್ಯಾಟರಿ ಸಾಮರ್ಥ್ಯ!

ನೋಕಿಯಾ ಕಂಪೆನಿ ಟೆಕ್‌ ವಲಯದಲ್ಲಿ ಎವರ್‌ಗ್ರೀನ್‌ ಮೊಬೈಲ್‌ ಬ್ರ್ಯಾಂಡ್‌ ಎಂದೇ ಖ್ಯಾತಿ ಪಡೆದಿದೆ. ಫೋನ್‌ ಮಾತ್ರವಲ್ಲದೆ ನೋಕಿಯಾ ಕಂಪೆನಿ ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ ಸೇರಿದಂತೆ ಸ್ಮಾರ್ಟ್‌ ಟ್ಯಾಬ್‌ ಮಾರುಕಟ್ಟೆಯಲ್ಲಿ ಕೂಡ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ಇದೀಗ ನೋಕಿಯಾ ಕಂಪೆನಿ ಟ್ಯಾಬ್‌ ಮಾರುಕಟ್ಟೆಯಲ್ಲಿ ಹೊಸ ನೋಕಿಯಾ T21 ಟ್ಯಾಬ್ಲೆಟ್‌ ಅನ್ನು ಲಾಂಚ್‌ ಮಾಡಿದೆ. 8,200mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಈ ಟ್ಯಾಬ್‌ ಯುವಜನರ ಆಶಯಕ್ಕೆ ತಕ್ಕಂತೆ ವಿನ್ಯಾಸವನ್ನು ಪಡೆದಿದೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ ಹೊಸದಾಗಿ ನೋಕಿಯಾ T21 ಟ್ಯಾಬ್ಲೆಟ್ ಪರಿಚಯಿಸಿದೆ. ಗ್ರೇ ಬಣ್ಣದ ಆಯ್ಕೆಯಲ್ಲಿ ಮಾತ್ರ ಲಾಂಚ್‌ ಆಗಿರುವ ಈ ಟ್ಯಾಬ್‌ 400 ನಿಟ್ಸ್‌ ಬ್ರೈಟ್‌ನೆಸ್‌ ನೀಡುವ ಡಿಸ್‌ಪ್ಲೇ ಹೊಂದಿದೆ. ಇದು ಸಿಂಗಲ್‌ ರಿಯರ್‌ ಕ್ಯಾಮೆರಾ ದೊಂದಿಗೆ ಎಲ್‌ಇಡಿ ಫ್ಲ್ಯಾಷ್‌ ಅನ್ನು ಕೂಡ ಒಳಗೊಂಡಿರಲಿದೆ. ಇದಲ್ಲದೆ ಈ ಸ್ಮಾರ್ಟ್‌ಟ್ಯಾಬ್‌ ಡಸ್ಟ್‌ ಮತ್ತು ವಾಟರ್‌ ಪ್ರೂಫ್‌ಗಾಗಿ IP52 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಟ್ಯಾಬ್‌ ಏನೆಲ್ಲಾ ವಿಶೇಷತೆ ಒಳಗೊಂಡಿದೆ? ಇದರ ಫೀಚರ್ಸ್‌ ಏನಿದೆ? ಇದರ ಬೆಲೆ ಎಷ್ಟಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ನೋಕಿಯಾ T21 ಟ್ಯಾಬ್‌ ಡಿಸ್‌ಪ್ಲೇ ರಚನೆ ಹೇಗಿದೆ?

ನೋಕಿಯಾ T21 ಟ್ಯಾಬ್‌ ಡಿಸ್‌ಪ್ಲೇ ರಚನೆ ಹೇಗಿದೆ?

ನೋಕಿಯಾ T21 ಟ್ಯಾಬ್‌ 10.36 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2000 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡಲಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್‌ ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೆ ರಚನೆಯ ಅನುಪಾತ 5:3 ರಷ್ಟಿದ್ದು, SGS ಲೋ ಬ್ಲೂ ಲೈಟ್‌ ಪ್ರಮಾಣೀಕರಣವನ್ನು ಪಡೆದಿದೆ.

ಪ್ರೊಸೆಸರ್‌ ಯಾವುದು? ಕಾರ್ಯವೈಖರಿ ಏನು?

ಪ್ರೊಸೆಸರ್‌ ಯಾವುದು? ಕಾರ್ಯವೈಖರಿ ಏನು?

ನೋಕಿಯಾ T21 ಟ್ಯಾಬ್‌ ಯುನಿಸೋಕ್‌ T612 ಆಕ್ಟಾ-ಕೋರ್ ಪ್ರೊಸೆಸರ್‌ ವೇಗವನ್ನು ಪಡೆದಿದ್ದು, ಪೂರಕವಾಗಿ ಮಾಲಿ-G57 GPU ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಮತ್ತು 128GB ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಲಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ನೋಕಿಯಾ T21 ಟ್ಯಾಬ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಆಟೋಫೋಕಸ್ ಲೆನ್ಸ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ ಅನ್ನು ಬೆಂಬಲಿಸಲಿದೆ. ಇನ್ನು ಟ್ಯಾಬ್‌ನಲ್ಲಿ ವೀಡಿಯೊ ಕರೆ ಮತ್ತು ಸೆಲ್ಫಿ ತೆಗೆದುಕೊಳ್ಳಲು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ನೋಕಿಯಾ T21 ಟ್ಯಾಬ್‌ 8,200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್‌ ಸಂಪೂರ್ಣ ಚಾರ್ಜ್‌ನಲ್ಲಿ 3 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0, ವೈಫೈ, ಹೆಡ್‌ಫೋನ್ ಜ್ಯಾಕ್, ಜಿಪಿಎಸ್‌, ಯುಎಸ್‌ಬಿ ಟೈಪ್‌ ಸಿ, ಬೆಂಬಲವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ T21 ಟ್ಯಾಬ್‌ ಪ್ರಸ್ತುತ ಇಂಡೋನೇಷ್ಯಾದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಕೇವಲ ಗ್ರೇ ಬಣ್ಣದ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದರ ಬೆಲೆ 3299000 ಇಂಡೋನೇಷಿಯನ್ ರೂಪಾಯಿ (ಅಂದಾಜು 17,192ರೂ)ಆಗಿದೆ. ಈ ಡಿವೈಸ್‌ ಡಿಸೆಂಬರ್‌ ತಿಂಗಳಿನಲ್ಲಿ ಸೇಲ್‌ ಆಗುವ ಸಾಧ್ಯತೆಯಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಭಾರತಕ್ಕೂ ಕೂಡ ಎಂಟ್ರಿ ನೀಡುವ ನಿರೀಕ್ಷೆಯಿದೆ.

Best Mobiles in India

English summary
Nokia T21 tablet with 8,200mAh battery launched:Price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+