4G ಟೆಂಡ್ ಮುಗಿಯಲಿದೆ: ಶೀಘ್ರವೇ ಶುರುವಾಗಲಿದೆ 5G ಆರ್ಭಟ..!
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ 4G ಸ್ಮಾರ್ಟ್‌ಫೋನ್‌ಗಳ ಹಾವಳಿ ಹೆಚ್ಚಾಗಿದೆ ಎನ್ನಲಾಗಿದೆ. ಅದರಲ್ಲಿಯೂ ಜಿಯೋ ಕೇವಲ 4G VoLTE ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ ಎನ್ನುವ ಕಾರಣಕ್ಕಾಗಿಯೇ ಹಲವು ಮಂದಿ 4G ಫೋನ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮೂಲಗಳ ಪ್ರಕಾರ ಈ ಟ್ರೆಂಡ್ ಶೀಘ್ರವೇ ಬದಲಾಗಲಿದೆ.
ಈಗಾಗಲೇ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಭವಿಷ್ಯದ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು, 2019ರಲ್ಲಿ ದೈತ್ಯ ಸ್ಮಾರ್ಟ್‌ಫೋನ್ ಕಂಪನಿಗಳು 5G ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಿವೆ ಎನ್ನಲಾಗಿದೆ. ಈ ಕುರಿತ ವರದಿಯು ಮುಂದಿನಂತಿದೆ.

ಮೊದಲಿಗೆ ಕ್ವಾಲ್ಕಮ್ ಫೋನ್:
ಈಗಾಗಲೇ 5G ಸಫೋರ್ಟ್ ಮಾಡುವ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿರುವ ಕ್ವಾಲ್ಕಮ್, ಇದಕ್ಕಾಗಿಯೆ ಹೊಸ ಚಿಪ್ ಸೆಟ್ ಅನ್ನು ಆವಿಷ್ಕರಿಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ 2018ರ ಅಂತ್ಯದಲ್ಲಿ ಕ್ವಾಲ್ಕಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಸ್ನಾಪ್‌ಡ್ರಾಗನ್ X50 5G ಮೊಡಮ್:
ಸ್ನಾಪ್‌ಡ್ರಾಗನ್ ಈಗಾಗಲೇ 5G ಸಪೋರ್ಟ್ ಮಾಡುವ ಮೊಡಮ್ ಅನ್ನು ಅಬಿವೃದ್ಧಿ ಪಡಿಸಿದ್ದು, ಸ್ನಾಪ್‌ಡ್ರಾಗನ್ X50 5G ಮೊಡಮ್ ಈಗಾಗಲೇ ಬಿಡುಗಡೆಯಾಗಿದೆ. ಮೊದಲಿಗೆ ಇದು ಕ್ವಾಲ್ಕಮ್ ಫೋನಿನಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಬೇರೆ ಬೇರೆ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಸಿಗಲಿದೆ.


ಯಾವ ಕಂಪನಿಗಳು:
ಕ್ವಾಲ್ಕಮ್ ಸ್ನಾಪ್‌ಡ್ರಾಗನ್ X50 5G ಮೊಡಮ್ ಪಡೆದುಕೊಳ್ಳಲು ನೋಕಿಯಾ, ಸೋನಿ,ಶಿಯೋಮಿ, ಒಪ್ಪೋ, ವಿವೋ, ಹೆಚ್‌ಟಿಸಿ, ಎಲ್‌ಜಿ, ಅಸುಸ್, ಎಜ್ ಟಿಇ ಸೇರಿದಂತೆ ಹಲವು ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಕ್ಯೂನಲ್ಲಿ ನಿಂತಿದ್ದು, ತಮ್ಮ 5G ಫೋನ್‌ಗಳಲ್ಲಿ ಈ ಮೊಡವ್ ಅಳವಡಿಸಲು ಮುಂದಾಗಿದೆ.

ಆಪಲ್, ಸ್ಯಾಮ್‌ಸಂಗ್ ಮತ್ತು ಹುವಾವೆ ಲಿಸ್ಟ್‌ನಲಿಲ್ಲ:
ಎಲ್ಲಾ ಸ್ಮಾರ್ಟ್‌ಫೋನ್ ಕಂಪನಿಗಳು ಕ್ವಾಲ್ಕಮ್ 5G ಮೊಡಮ್ ಬಳಕೆ ಮುಂದಾಗಿದ್ದರೇ ಜಗತ್ತಿನ ಟಾಪ್ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ಆಪಲ್, ಸ್ಯಾಮ್‌ಸಂಗ್ ಮತ್ತು ಹುವಾವೆ ಲಿಸ್ಟ್‌ನಲಿಲ್ಲ ಎನ್ನಲಾಗಿದ್ದು, ಇವುಗಳು ತಮ್ಮದೇ ಚಿಪ್ ಅಭಿವೃದ್ಧಿಪಡಿಸಿಕೊಳ್ಳಲಿವೆ.


Click it and Unblock the Notifications