ಮೇ 1 ಕ್ಕೆ ನೋಕಿಯಾ XL ಭಾರತದಲ್ಲೂ ಲಭ್ಯ

Written By:

ಇತರ ಫೋನ್‌ಗಳಿಗೆ ಹೋಲಿಸಿದಾಗ ಆಮೆ ಗತಿಯಲ್ಲಿ ಮುಂದುವರಿಯುತ್ತಿರುವ ನೋಕಿಯಾ ಹ್ಯಾಂಡ್‌ಸೆಟ್‌ಗಳು ಗ್ರಾಹಕರ ಮನ ಸೆಳೆಯುವ ಪ್ರಯತ್ನವನ್ನು ಪುನಃ ಮಾಡಲು ವೇದಿಕೆಯನ್ನು ಸಜ್ಜುಗೊಳಿಸಿದೆ.

ನೋಕಿಯಾ X ಶ್ರೇಣಿಗಳ ಫೋನ್ ಅನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಎಲ್ಲರೂ ಹೇಳುತ್ತಿದ್ದದ್ದು ಒಂದೇ ಮಾತು ಅದೆಂದರೆ ನೋಕಿಯಾ ತನ್ನ ಅಂದಿನ ಚಾರ್ಮ್ ಅನ್ನು ಉಳಿಸುವ ಸನ್ನಾಹದಲ್ಲಿದೆ ಇದೆ ಎಂದು. ತನ್ನ ಎಂದಿನ ಉನ್ನತ ಗ್ರಾಹಕರನ್ನು ಪುನಃ ಆಕರ್ಷಿಸುವ ಕಲೆಯನ್ನು ಪುನಃ ಪ್ರದರ್ಶಿಸಲಿದೆ ಎಂದಾಗಿತ್ತು. ಆದರೆ ಇದಾವುದಕ್ಕೆ ಸೊಪ್ಪು ಹಾಕದೇ ನೋಕಿಯಾ X ಶ್ರೇಣಿಯು ಮಾರುಕಟ್ಟೆಗೆ ಬಂದಿತು ಮತ್ತು ಆಂಡ್ರಾಯ್ಡ್ ರನ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿತು ಕೂಡ.

ಮೇ 1 ಕ್ಕೆ ನೋಕಿಯಾ XL ಭಾರತದಲ್ಲೂ ಲಭ್ಯ

ಮೈಕ್ರೋಸಾಫ್ಟ್‌ನ ಸೇವೆಗಳು ಮತ್ತು ಗೂಗಲ್‌ನ ಆಂಡ್ರಾಯ್ಡ್ ಓಎಸ್ ಆವೃತ್ತಿಗಳ ಎರಡು ಅತ್ಯದ್ಭುತ ಹಾರ್ಡ್‌ವೇರ್‌ ಅನ್ನು ಇದು ಒಳಗೊಂಡಿದೆ. ನೋಕಿಯಾ X ಮೊದಲ ಆಂಡ್ರಾಯ್ಡ್ ಆಧಾರಿತ ಫೋನ್ ಆಗಿದ್ದು ಭಾರತದ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಲಭ್ಯವಾಗಿರುವಂಥದ್ದಾಗಿದೆ. ಕಂಪೆನಿ ಈ ಫೋನ್‌ನ ಬೆಲೆಯನ್ನು ಕೊಂಚ ಕಡಿಮೆಗೊಳಿಸಿದ್ದು ಈಗ ರೂ 7,000 ದಲ್ಲಿ ಗ್ರಾಹಕರ ಕೈ ಸೇರುತ್ತಿದೆ.

ನೋಕಿಯಾ X ಬೆನ್ನಲ್ಲೇ ಮತ್ತೊಂದು ಸುಧಾರಿತ ಪ್ರಯತ್ನವೆಂಬಂತೆ ಕಂಪೆನಿ ಈಗ ನೋಕಿಯಾ XL ಅನ್ನು ಮೇ ಒಂದರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸ್ಪರ್ಧೆಯನ್ನು ನೋಡಿಕೊಂಡೇ ನೋಕಿಯಾ ತನ್ನ XL ಶ್ರೇಣಿಯನ್ನು ಭಾರತಕ್ಕೆ ಬಿಡುಗಡೆಗೊಳಿಸುವ ಸನ್ನಾಹದಲ್ಲಿದೆ.

ಅಂದರೆ ಮೇ ಮೊದಲ ವಾರದಲ್ಲೇ ಫೋನ್ ಪ್ರಿಯರ ಕೈಗೆ ಈ ಫೋನ್ ಸೇರಲಿದ್ದು ಇದರ ದರ ವದಂತಿಗಳ ಪ್ರಕಾರ ರೂ 12,000 ದಿಂದ ರೂ 13,000 ಎಂದಾಗಿದೆ. ಇನ್ನೇನು ನಿಮ್ಮ ಕೈ ಸೇರಲಿರುವ ಫೋನ್‌ನ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ತಿಳಿಸಲು ನಾವು ಕೂಡ ಉತ್ಸುಕರಾಗಿದ್ದೇವೆ.

ನೋಕಿಯಾ XL ಹೆಸರೇ ಹೇಳುವಂತೆ 5- ಇಂಚಿನ WVGA ಡಿಸ್‌ಪ್ಲೇಯನ್ನು ಹೊಂದಿದ್ದು 800 X 480 ಪಿಕ್ಸೆಲ್ ರೆಸಲ್ಯೂಶನ್ ಇದಕ್ಕಿದೆ. ಡ್ಯುಯೆಲ್ ಕೋರ್ ಪ್ರೊಸೆಸರ್ ಕ್ವಾಲ್‌ಕೋಮ್ ಸ್ನ್ಯಾಪ್‌ಡ್ರಾಗನ್ S4 SoC, 768MB ರ್‌ಯಾಮ್ ಇದರಲ್ಲಿದೆ. 4ಜಿಬಿ ಆಂತರಿಕ ಮೆಮೊರಿ ಪೋನ್‌ನಲ್ಲಿದ್ದು ಇದನ್ನು 32 ಜಿಬಿವರೆಗೆ ವಿಸ್ತರಿಬಹುದಾಗಿದೆ. ಇದನ್ನು ವಿಸ್ತರಿಸಲು ನಿಮಗೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಸಾಕು.

ಫೋನ್ ಮುಂಭಾಗದಲ್ಲಿ ಕ್ಯಾಮೆರಾವನ್ನು ಹೊಂದಿದ್ದು 5- ಮೆಗಾಪಿಕ್ಸೆಲ್ ಸಾಮರ್ಥ್ಯ ಇದಕ್ಕಿದೆ. ಇದು ಆಟೋ ಫೋಕಸ್ ಮತ್ತು ಸಿಂಗಲ್ LED ಫ್ಯ್ಯಾಶ್ ಅನ್ನು ನೀಡಲಿದೆ. ಮತ್ತೆ ಎಂದಿನಂತೆ ಡ್ಯುಯೆಲ್ ಸಿಮ್, 3ಜಿ, ವೈಫೈ, ಬ್ಲೂಟೂತ್ ಮತ್ತು 2,000mAh ಬ್ಯಾಟರಿ ಅಳವಡಿತವಾಗಿದೆ. ಇದರ ತೂಕ 190 ಗ್ರಾಮ್ ಆಗಿದ್ದು 10.9mm ಥಿಕ್‌ನೆಸ್ ಫೋನ್‌ಗಿದೆ.

ಗೂಗಲ್ ಪ್ಲೇ ಸ್ಟೋರ್ ಹೊರತಾಗಿ ನೋಕಿಯಾ ಸ್ಟೋರ್ ಫೋನ್‌ನಲ್ಲಿದೆ. ನೋಕಿಯಾ XL ನಲ್ಲಿ 75% ದಷ್ಟು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot