ವಿಜ್ಞಾನಿಗಳು ಹೇಳಿದ ಈ ಶಾಕಿಂಗ್ ನ್ಯೂಸ್‌ ಕೇಳಿದ್ರೆ ಮೊಬೈಲ್ ಬಳಕೆಯನ್ನೇ ಬಿಡಬೇಕು!!

|

ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸ. ಫೋನ್​ನ್ನು ಸದಾ ಬಳಿಯೇ ಇಟ್ಟುಕೊಳ್ಳುವುದು, ಆಗಾಗ ಮೊಬೈಲ್ ಸ್ಕ್ರೀನ್ ಓಪನ್ ಮಾಡುವುದು, ನೋಟಿಫಿಕೇಶನ್​ಗಳನ್ನು ಗಮನಿಸುವುದು ಮಾಡುತ್ತಿರುವ ಗೀಳಿಗೆ ಮೊಬೈಲ್ ಬಳಕೆದಾರರು ಬಿದ್ದು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೊಸದೊಂದು ಅಧ್ಯಯನವು ಎಚ್ಚರಿಸಿದೆ. ಇತ್ತೀಚಿನ ಮಿನಿ ಕಂಪ್ಯೂಟರ್​ಗಳಾದ ಮೊಬೈಲ್​ಗಳು ಯುವಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತಿವೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಮೊಬೈಲ್ ಬಳಸುವವರು ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್​ಬುಕ್, ವಾಟ್ಸಪ್​ಗಳನ್ನು ಓಪನ್ ಮಾಡುತ್ತಾ ಅದರಲ್ಲೇ ಕಾಲ ಕಳೆಯುವುದನ್ನು ಸಹ ಮೊಬೈಲ್ ಗೀಳು ಎಂದು ಅಧ್ಯಯನ ಹೇಳಿದ್ದು, ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ. ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್​ನೆಟ್ ಸೌಲಭ್ಯವೂ ಈ ದುರಭ್ಯಾಸಕ್ಕೆ ಇನ್ನೊಂದು ಕಾರಣವಾಗಿದ್ದು, ಇವುಗಳು ಅವಾಂತರ ತರುವ ಸಾಧ್ಯತೆಗಳಿರುತ್ತವೆ ಎಂದು ಅಮೆರಿಕನ್ ವಿಜ್ಞಾನಿಗಳ ತಂಡವೊಂದು ಆತಂಕ ವ್ಯಕ್ತಪಡಿಸಿದೆ.

ವಿಜ್ಞಾನಿಗಳು ಹೇಳಿದ ಈ ಶಾಕಿಂಗ್ ನ್ಯೂಸ್‌ ಕೇಳಿದ್ರೆ ಮೊಬೈಲ್ ಬಳಕೆಯನ್ನೇ ಬಿಡಬೇಕು!

ಮೊಬೈಲ್ ಫೋನ್​ನಿಂದ ದೂರ ಇರಲಾಗದ ಸ್ಥಿತಿಯೇ ನೊಮೋಫೋಬಿಯಾವಾಗಿದ್ದು, ಇದರಿಂದ ಮೊಬೈಲ್ ಬಳಕೆದಾರರ ಮೌಲ್ಯಯುತ ಹವ್ಯಾಸಗಳು ಮತ್ತು ಪ್ರೀತಿಪಾತ್ರರಿಂದ ದೂರವಾಗುತ್ತಾರೆ. ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇಂತಹ ಹಲವು ನೊಮೋಫೋಬಿಯಾ ಲಕ್ಷಣಗಳನ್ನು ನಾವು ಗುರುತಿಸಬಹುದಾಗಿದೆ ಎಂದು ಅಧ್ಯಯನವು ತಿಳಿಸಿದೆ. ಹಾಗಾದರೆ, ಅಧ್ಯಯನ ಗುರುತಿಸಿರುವ ನೊಮೋಫೋಬಿಯಾ ಲಕ್ಷಣಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

 ನೊಮೋಫೋಬಿಯಾ ಎಂದರೇನು?

ನೊಮೋಫೋಬಿಯಾ ಎಂದರೇನು?

ಮೊಬೈಲ್ ಫೋನ್​ನಿಂದ ದೂರ ಇರಲಾಗದ ಸ್ಥಿತಿಯನ್ನೇ ನೊಮೋಫೋಬಿಯಾ ಎಂದು ಕರೆಯಲಾಗುತ್ತದೆ. ಅಂದರೆ ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸ. ಫೋನ್​ನ್ನು ಸದಾ ಬಳಿಯೇ ಇಟ್ಟುಕೊಳ್ಳುವುದು, ಆಗಾಗ ಮೊಬೈಲ್ ಸ್ಕ್ರೀನ್ ಓಪನ್ ಮಾಡುವುದು, ನೋಟಿಫಿಕೇಶನ್​ಗಳನ್ನು ಗಮನಿಸುವುದು ಮಾಡುತ್ತಿರುತ್ತಾರೆ.

ನೊಮೋಫೋಬಿಯಾಕ್ಕೆ ಕಾರಣವೇನು?

ನೊಮೋಫೋಬಿಯಾಕ್ಕೆ ಕಾರಣವೇನು?

ಇಂದಿನ ವಿಭಕ್ತ ಕುಟುಂಬ ಪದ್ಧತಿಯೇ ನೊಮೋಫೋಬಿಯಾಕ್ಕೆ ಮೂಲಕಾರಣ ಎಂದು ಹೇಳಲಾಗಿದೆ. ಆಕರ್ಷಕ ದೃಶ್ಯಗಳು, ಖುಷಿ ನೀಡುವ ವಿಡಿಯೋ ಗೇಮ್‌ಗಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ಸೇರಿದಂತ ಎಲ್ಲರನ್ನೂ ಆಕರ್ಷಿಸಿ, ನೊಮೋಫೋಬಿಯಾಕ್ಕೆ ನಾಂದಿ ಹಾಡುತ್ತಿದೆ ಎನ್ನಲಾಗಿದೆ.

ನೊಮೋಫೋಬಿಯಾ ಲಕ್ಷಣಗಳು ಯಾವುದು?

ನೊಮೋಫೋಬಿಯಾ ಲಕ್ಷಣಗಳು ಯಾವುದು?

ಒಂಟಿಯಾಗಿರಲು ಬಯಸುವುದು, ಟಾಯ್ಲೆಟ್​ಗೂ ಮೊಬೈಲ್ ಒಯ್ಯುವುದು, ಎಚ್ಚರವಾದ ಕೂಡಲೇ ಮೊಬೈಲ್ ನೋಟಿಫಿಕೇಶನ್ ಗಮನಿಸುವುದು, ರಾತ್ರಿಯೂ ಮೊಬೈಲ್ ಇಟ್ಟುಕೊಂಡು ಮಲಗುವುದು, ನಿದ್ರಾಹೀನತೆಯಿಂದ ಬಳಲುವುದು, ಮೊಬೈಲ್ ಇಲ್ಲದಿದ್ದರೆ ಏನನ್ನೋ ಕಳೆದುಕೊಂಡವರಂತೆ ವರ್ತಿಸುವುದು ನೊಮೋಫೋಬಿಯಾ ರೋಗದ ಲಕ್ಷಣಗಳಾಗಿವೆ.

ನೊಮೋಫೋಬಿಯಾ ಪರಿಣಾಮಗಳೇನು?

ನೊಮೋಫೋಬಿಯಾ ಪರಿಣಾಮಗಳೇನು?

ಸಂಪರ್ಕ ಕ್ರಾಂತಿಯ ಭಾಗವೆಂದು ಭಾವಿಸಿದ, ಮಿನಿ ಕಂಪ್ಯೂಟರ್​ಗಳಾದ ಮೊಬೈಲ್ ಫೋನ್​ಗಳು ಯುವಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತಿವೆ. ಈ ಮೊಬೈಲ್‌ ಗೀಳಿನಿಂದ ಮಾರಣಾಂತಿಕ ಟ್ಯೂಮರ್ ಬೆಳೆಯುವ ಸಾಧ್ಯತೆ ಕೂಡ ಇದೆಯಂತೆ. ಇಂತಹ ಹಲವು ದುಷ್ಪರಿಣಾಮಗಳನ್ನು ಹಲವು ಅಧ್ಯಯನಗಳು ಈ ಕೆಳಗಿನ ರೀತಿಯಲ್ಲಿ ತಿಳಿಸಿವೆ.

ಕಲಿಕಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ

ಕಲಿಕಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ

ಕೇವಲ 2 ನಿಮಿಷದ ಕರೆಯು 16 ವರ್ಷದೊಳಗಿನ ಮಕ್ಕಳ ಮಿದುಳಿನ ಕಾರ್ಯನಿರ್ವಾಹಕ ಚಟುವಟಿಕೆಯನ್ನು ಬದಲಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೋ ತರಂಗಗಳು ಮಿದುಳಿನಲ್ಲಿ ವ್ಯಾಪಿಸಿ ಕಲಿಕಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.

ಭಾಗಶಃ ಕ್ಯಾನ್ಸರ್​ಗೆ ಕಾರಣ

ಭಾಗಶಃ ಕ್ಯಾನ್ಸರ್​ಗೆ ಕಾರಣ

ವಿಶ್ವ ಆರೋಗ್ಯ ಸಂಸ್ಥೆಯು ಮೊಬೈಲ್ ವಿಕಿರಣ ಭಾಗಶಃ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಕಿರಿಯರು ಶೇಕಡಾ 60ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮಿದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ. ಈ ವಿಕಿರಣಗಳು ಭಾಗಶಃ ಕ್ಯಾನ್ಸರ್​ಗೆ ಕಾರಣವಾಗುತ್ತವೆ.

ಮೌಲ್ಯಯುತ ಹವ್ಯಾಸಗಳು ದೂರ!

ಮೌಲ್ಯಯುತ ಹವ್ಯಾಸಗಳು ದೂರ!

ಮೊಬೈಲ್ ಗೀಳಿನಿಂದ ಮೌಲ್ಯಯುತ ಹವ್ಯಾಸಗಳು ಮತ್ತು ಪ್ರೀತಿಪಾತ್ರರಿಂದ ದೂರವಾಗುತ್ತಾರೆ. ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ. ಕುಟುಂಬ ಸದಸ್ಯರ ಚಿತ್ರಗಳು ಕೆಲವೊಮ್ಮೆ ಅಂತರ್ಜಾಲದಲ್ಲಿ ಸಿಲುಕಿ, ಅಶ್ಲೀಲ ಸೈಟ್​ಗಳಿಗೆ ಪ್ರವೇಶಹೊಂದಿ ಅವಾಂತರ ತರುವ ಸಾಧ್ಯತೆಗಳಿರುತ್ತವೆ.

ನಿದ್ರಾಹೀನತೆಗೂ ಕಾರಣ

ನಿದ್ರಾಹೀನತೆಗೂ ಕಾರಣ

ಮೊಬೈಲ್ ಬಳಕೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಗಳಿಲ್ಲದೆ ಸ್ಥೂಲಕಾಯ ಉಂಟಾಗುತ್ತದೆ. ಆನ್​ಲೈನ್ ಗೇಮ್‌ಗಳು ಯುವಕರ ಪ್ರಾಣಕ್ಕೆ ಕಂಟಕವಾಗಬಹುದು. ಮೊಬೈಲ್ ಕಾಣಿಸದಿದ್ದರೆ ಏನನ್ನೋ ಕಳೆದುಕೊಂಡವರಂತೆ ವರ್ತಿಸುವುದು ಮಾನಸಿಕ ಅಸಮತೋಲನಕ್ಕೆ ಕಾರಣವಂತೆ.

ಟ್ಯೂಮರ್ ಬೆಳೆಯುವ ಸಾಧ್ಯತೆ!

ಟ್ಯೂಮರ್ ಬೆಳೆಯುವ ಸಾಧ್ಯತೆ!

ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ನಡೆಸಿದ ಅಧ್ಯಯನವೊಂದು ಮಕ್ಕಳ ಮೇಲೆ ಮೊಬೈಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಮೊಬೈಲ್ ಬಳಸುವವರ ಮಿದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯೂಮರ್ ಬೆಳೆಯುವ ಸಾಧ್ಯತೆಯನ್ನು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಯನ ತೋರಿಸಿದೆ.

ನೊಮೋಫೋಬಿಯಾದಿಂದ ಮುಕ್ತವಾಗುವುದು ಹೇಗೆ ?

ನೊಮೋಫೋಬಿಯಾದಿಂದ ಮುಕ್ತವಾಗುವುದು ಹೇಗೆ ?

ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಹೊಸ ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಕುಟುಂಬದ ಸದಸ್ಯರೊಡನೆ ಹೆಚ್ಚು ಬೆರೆಯುವ ಮೂಲಕ ನೊಮೋಫೋಬಿಯಾದಿಂದ ಮುಕ್ತವಾಗಬಹುದಾಗಿದೆ. ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ ಸೇರಿದಂತರ ಒಳಾಂಗಣ ಕ್ರೀಡೆಗಳು ಸಹ ಗೀಳಿನಿಂದ ಹೊರಬರಲು ಸಹಾಯವಾಗುತ್ತವೆ.

ನೊಮೋಫೋಬಿಯಾದಿಂದ ಮುಕ್ತಗೊಳ್ಳುವ ಮಾರ್ಗಗಳು!

ನೊಮೋಫೋಬಿಯಾದಿಂದ ಮುಕ್ತಗೊಳ್ಳುವ ಮಾರ್ಗಗಳು!

ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ, ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಬೇಡ, ಮೊಬೈಲ್​ನಲ್ಲಿ ಓಪನ್ ಸ್ಪೀಕರ್ ಹಾಕಿ ಮಾತನಾಡಿ, ಯಾವಾಗಲೂ ಇಂಟರ್​ನೆಟ್ ಬಳಸಬೇಡಿ. ನೋಟಿಫಿಕೇಶನ್​ಗಳನ್ನು ಆಫ್ ಮಾಡಿ, ಸಾಮಾಜಿಕ ಜಾಲ ತಾಣಗಳಾದ ಫೇಸ್​ಬುಕ್, ವಾಟ್ಸಪ್​ಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿ ಮತ್ತು ಮೊಬೈಲ್ ಮೇಲೆ ಅವಲಂಬಿತವಾಗದಿರಿ.

Most Read Articles
Best Mobiles in India

English summary
Nomophobia, also called “the disease of the XXI century”, is the irrational fear of being without cell phone. It is a disorder suffered by half of the. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X