Home
ಸುದ್ದಿಜಾಲ

ಬಾಹ್ಯಾಕಾಶಕ್ಕೆ ತಲುಪಿದ ಮಾನವರಲ್ಲದ 10 ಗಗನಯಾತ್ರಿಗಳು

By Suneel

ಗಗನಯಾತ್ರಿಗಳು ಬಿಟ್ಟರೆ ಇತರ ಜನರು ಬಾಹ್ಯಾಕಾಶಕ್ಕೆ ಹೋಗಲು ಆಗುವುದಿಲ್ಲ ಎಂಬುದು ಬಹುಶಃ ಬಹುಸಂಖ್ಯಾತರಿಗೆ ತಿಳಿದಿದೆ ಅನಿಸುತ್ತೇ. ಗಗನಯಾತ್ರಿಗಳಾಗಿ ಬಾಹ್ಯಾಕಾಶಕ್ಕೆ ಹೋದ ಮನುಷ್ಯರಲ್ಲದ ಗಗನಯಾತ್ರಿಗಳು ಯಾರು ಎಂದು ಪ್ರಶ್ನೆ ಕೇಳಿದರೆ, ಬಹುಶಃ ಯಾರಿಗೂ ಗೊತ್ತಿಲ್ಲ ಅನಿಸುತ್ತೇ.ಬಾಹ್ಯಾಕಾಶಕ್ಕೆ ಮನುಷ್ಯರಲ್ಲದ ಟಾಪ್‌ 10 ಗಗನಯಾತ್ರಿಗಳು ಹೋಗಿ ಬಂದಿದ್ದಾರೆ. ಅವರು ಬೇರೆ ಯಾರು ಅಲ್ಲ ನಮ್ಮ ಸುತ್ತಮುತ್ತಲಿನ ಪ್ರಾಣಿಗಳು.

ಓದಿರಿ: 70 ವರ್ಷದ ನಂತರ ನೀವು ಹೇಗಿರುತ್ತೀರಿ ಎಂಬುದನ್ನು ತಿಳಿಯಬೇಕೇ

ಎನ್‌ ಜೋಕಾ? ಅಂತ ಮಾತ್ರ ಅಂದುಕೊಳ್ಳಬೇಡಿ. ಯಾಕಂದ್ರೆ ಮಾನವರಲ್ಲದ ಆ ಗಗನಯಾತ್ರಿಗಳು ಹಲೋ ಎಕ್ಸ್‌ಕ್ಯೂಸ್‌ ಮಿ ನಾವೆ ಮೊದಲೂ ಬಾಹ್ಯಾಕಾಶಕ್ಕೆ ಹೋಗಿದ್ದು ಅಂತ ಧೈರ್ಯವಾಗಿ ಹೇಳುತ್ತಿವೆ. ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ಮಾನವರಲ್ಲದ ಆ 10 ಗಗನಯಾತ್ರಿಗಳು ಯಾರು ಎಂಬುದನ್ನು ತಿಳಿದುಕೊಳ್ಳಿ.

ಇಲಿಗಳು

ಇಲಿಗಳು

1950 ರಲ್ಲಿ ಹಲವು ಪ್ರಯತ್ನಗಳನ್ನು ಮಾಡಿ ಒಂದು ಇಲಿಯನ್ನು ಆಲ್ಬರ್ಟ್‌ ಸೀರೀಸ್‌ನ V2 ಲಾಂಚ್‌ ಮಾಡಿದ 5ನೇ ವಿಮಾನದಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಪ್ಯಾರಾಚೂಟ್‌ ರಿಕವರಿ ಸಿಸ್ಟಮ್‌ ಕೆಳಗೆ ಬಿದ್ದು, ಯಶಸ್ಸು ಕಾಣಲಾಗಲಿಲ್ಲ.
ಬಾಹ್ಯಾಕಾಶಕ್ಕೆ ತಲುಪಿದ ಮಾನವರಲ್ಲದ 10 ಗಗನಯಾತ್ರಿಗಳು
* ಫ್ರೆಂಚ್ ಸ್ಪೇಸ್‌ ಸೆಂಟರ್‌ 1961 ರಲ್ಲಿ ಹೆಕ್ಟಾರ್ ಎಂಬ ಹೆಸರಿನ ಇಲಿಯನ್ನು ಸ್ಪೇಸ್‌ಗೆ ಕಳುಹಿಸಿ ಅದು ಯಶಸ್ವಿಯಾಗಿ 93 ಮೈಲಿಯಷ್ಟು ಎತ್ತರಕ್ಕೆ ಹಾರಿ ಹಿಂದಿರುಗಿತು.
ಹಾಗೂ ಇದೇ ಮೊದಲ ಬಾಹ್ಯಾಕಾಶ ಭೇಟಿ ನೀಡಿದ ಇಲಿ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಗಿನಿ ಇಲಿಗಳು

ಗಿನಿ ಇಲಿಗಳು

1961 ಮಾರ್ಚ್ 9 ರಂದು ಮೊದಲ ಬಾರಿಗೆ ನಾಯಿ, ಸರೀಸೃಪಗಳು, ಗಿನಿ ಇಲಿಗಳು ಸೇರಿದ ಒಂದು ಗುಂಪನ್ನು ಸೋವಿಯತ್ ಸ್ಪುಟ್ನಿಕ್ 9 ಬಾಹ್ಯಾಕಾಶ ಸ್ಪೇಸ್ ಅನ್ನು ಕಳುಹಿಸಿ ಯಶಸ್ವಿಯಾಗಿತ್ತು.

ಹಲ್ಲಿಗಳು

ಹಲ್ಲಿಗಳು

1985 ರಲ್ಲಿ ಬಯಾನ್‌ 7 ಮಿಷನ್‌ ಹತ್ತು ಹಲ್ಲಿಗಳೊಂದಿಗೆ ಬಾಹ್ಯಾಕಾಶಕ್ಕೆ ಹೋಗಿತ್ತು.

ಕಪ್ಪೆಗಳು

ಕಪ್ಪೆಗಳು

ನಾಸಾ 1970 ರಲ್ಲಿ Orbiting Frog Otolith ಎಂಬ ಹೆಸರಿನ ಯೋಜನೆಯಲ್ಲಿ ಎರಡು ಬುಲ್ ಕಪ್ಪೆಗಳನ್ನು ಗಗನಯಾತ್ರಿಗಳಾಗಿ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಒಂದು ಸಂಶೋಧನೆ ಉದ್ದೇಶದಿಂದ ಕಳುಹಿಸಿದ್ದ ಬಾಹ್ಯಾಕಾಶ ಯೋಜನೆ ಫಲಕಾರಿಯಾಯಿತು. ಆದರೆ ಕಪ್ಪೆಗಳು ಉಳಿಯಲಿಲ್ಲ.

ಮೀನುಗಳು

ಮೀನುಗಳು

ಸ್ಕೈಲ್ಯಾಬ್‌ 3 ಸ್ಪೇಸ್‌ವಿಮಾನದಲ್ಲಿ mummichog ಮೀನುಗಳನ್ನು ಆಟೋಲಿತ್‌ ಆಗ್ರಾನ್‌ ಡಾಟಾ ಸಂಗ್ರಹಿಸುವ ಸಲುವಾಗಿ ಕಳುಹಿಸಲಾಗಿತ್ತು. ಇವುಗಳು ಸಂಶೋಧನೆಗೆ ಹೆಚ್ಚು ಅನುಕೂಲವಾದವು.

ಟರ್ಟಲ್ಸ್ & ಆಮೆಗಳು

ಟರ್ಟಲ್ಸ್ & ಆಮೆಗಳು

ಟರ್ಟಲ್ಸ್‌ಗಳು ಸ್ಪೇಸ್‌ಗೆ ಕಾಲಿಟ್ಟ ಮೊದಲ ಪ್ರಾಣಿಗಳಾಗಿವೆ. 1968 ರಲ್ಲಿ ಸೋವಿಯತ್‌ ಸ್ಪೇಸ್‌ ಸೆಂಟರ್‌ ಜಾಂಡ್‌ ಸ್ಪೇಸ್‌ ಕ್ರ್ಯಾಫ್ಟ್‌ ಮೂಲಕ ಮೊಟ್ಟಮೊದಲು ಎರಡು ಟರ್ಟಲ್ಸ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

 ಬೆಕ್ಕುಗಳು

ಬೆಕ್ಕುಗಳು

1963 ಸೆಪ್ಟಂಬರ್‌ನಲ್ಲಿ ಫ್ರೆಂಚ್‌ ಫೆಲಿಕ್ಸ್‌ ಸ್ಫೇಸ್‌ವಿಮಾನದಲ್ಲಿ ಈ ಬೆಕ್ಕುಗಳನ್ನು ಕಳುಹಿಸಿ ಈ ಬೆಕ್ಕುಗಳು ಸುರಕ್ಷಿತವಾಗಿ ಹಿಂದಿರುಗಿದವು.

ಸ್ಪೈಡರ್‌ಗಳು

ಸ್ಪೈಡರ್‌ಗಳು

ಸ್ಕೈಲ್ಯಾಬ್‌ 3 ಮಿಷನ್‌ನಲ್ಲಿ ಯೂರೋಪಿಯನ್‌ ಗಾರ್ಡೆನ್‌ನ ಅನಿತಾ ಹಾಗೂ ಅರಬೆಲ್ಲಾ ಹೆಸರಿನ ಎರಡು ಸ್ಪೈಡರ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಆದರೆ ಇವುಗಳು ಡಿಹೈಡ್ರೇಶನ್‌ನಿಂದ ಸಾವಿಗೀಡಾಗಿ ಇವುಗಳ ದೇಹ ಇನ್ನು ಸಹ ಸ್ಮಿತ್‌ಸೋನಿಯನ್‌ನಲ್ಲಿ ಪ್ರದರ್ಶನವಾಗುತ್ತಿವೆ.

ಕೋತಿಗಳು

ಕೋತಿಗಳು

1940 ರಿಂದಲು ಸಹ ಹಲವು ದೇಶಗಳು ಕೋತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿವೆ. ಕೆಲವು ಯಾಶಸ್ವಿಯಾಗಿವೆ. ಆದರೆ 1961 ರಲ್ಲಿ ಹಾಮ್‌ ಎಂಬ ಕೋತಿ ಮಾತ್ರ ಮೊದಲು ಬಾಹ್ಯಾಕಾಶ ತಲುಪಿದ ಕೋತಿಯಾಗಿದೆ.

ನಾಯಿಗಳು

ನಾಯಿಗಳು

ಲೈಕಾ ಎಂಬ ಸ್ಪೇಸ್‌ ಗಗನಯಾತ್ರಿನಾಯಿ ಮಾನವನಲ್ಲದ ಗಗನಯಾತ್ರಿಯಾಗಿ ಹೆಚ್ಚು ಪ್ರಖ್ಯಾತವಾಗಿದೆ. ಇದು ಮೊಟ್ಟಮೊದಲು ಬಾಹ್ಯಾಕಾಶ ತಲುಪಿದ ನಾಯಿಯಾಗಿದೆ. ಇದು 1957 ರಲ್ಲಿ ನವೆಂಬರ್ 3 ರಂದು ರಾಕೆಟ್‌ ಸ್ಪಟ್ನಿಕ್‌ 2 ರಲ್ಲಿ ಹಾರಾಟ ನೆಡೆಸಿತು.

Best Mobiles in India

English summary
In this article we can found that non human Astronauts are visited space. This is considered as One of the interesting facts which is giving super knowledge about space non human Astronauts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+