Home
ಸುದ್ದಿಜಾಲ

Rashmika Mandanna: 'ನಥಿಂಗ್' ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡತಿ ರಶ್ಮಿಕಾ ಮಂದಣ್ಣ!

ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) 'ಪುಷ್ಪ' ಸಿನಿಮಾ ಮೂಲಕ ಇನ್ನಿಲ್ಲದ ಕ್ರೇಜ್ ಪಡೆದುಕೊಂಡರು. ಪ್ರಸ್ತು ಈ ನಟಿ ದಕ್ಷಿಣಕ್ಕಿಂತ ಉತ್ತರದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ, ಅಲ್ಲಿಯೂ ರಶ್ಮಿಕಾ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಇದಲ್ಲದೇ, ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ 'ಪುಷ್ಪ' ಚಿತ್ರದ ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಹೋದಲ್ಲಿ ಬಂದಲ್ಲಿ ಸುದ್ದಿ ಆಗುತ್ತಿದ್ದಾರೆ. ಇದೀಗ ನಥಿಂಗ್ (Nothing) ಸಬ್ ಬ್ರ್ಯಾಂಡ್ CMFಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡದ ಚೆಲುವೆಯಾಗಿರುವ ರಶ್ಮಿಕಾ, ಕ್ರಮೇಣ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದಿದ್ದಾರೆ. ಈಗ ಬಾಲಿವುಡ್ ನಲ್ಲೂ ಖ್ಯಾತಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈಗ ನಟಿ ರಶ್ಮಿಕಾ ಮಂದಣ್ಣ ಯಾರೂ ನಿರೀಕ್ಷಿಸದಂತಹ CMF ಸ್ಮಾರ್ಟ್‌ಫೋನ್ ಮತ್ತು ಆಕ್ಸೆಸರೀಸ್ ಕಿಟ್‌ನೊಂದಿಗೆ ಪೋಸ್ಟರ್‌ನಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ.

Rashmika: 'ನಥಿಂಗ್' ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡತಿ ರಶ್ಮಿಕಾ ಮಂದಣ್ಣ!

ನಥಿಂಗ್ ಕಂಪನಿಯ ಮಾಲೀಕತ್ವದ CMF ಬ್ರ್ಯಾಂಡ್ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳು ಬಿಡುಗಡೆ ಮಾಡಲಿದೆ. ಕಂಪನಿಯು ಈ ಹೊಸ ಸ್ಮಾರ್ಟ್‌ಫೋನ್ ಕುರಿತು ಹಲವಾರು ಮಾಹಿತಿ ಮತ್ತು ಟೀಸರ್‌ಗಳನ್ನು ರಿಲೀಸ್ ಮಾಡುತ್ತಿದೆ. ಇದನ್ನು CMF ಫೋನ್ 1 ಆಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕಾರ್ಲ್ ಪಿ ನಥಿಂಗ್ ಕಂಪನಿಯನ್ನು ಕಡಿಮೆ ಅವಧಿಯಲ್ಲಿ ವಿಶ್ವವಿಖ್ಯಾತ ಕಂಪನಿಯನ್ನಾಗಿ ನಿರ್ಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದಾಗ್ಯೂ, ನಟಿ ರಶ್ಮಿಕಾ ಮಂದಣ್ಣರನ್ನು CMF ಬ್ರ್ಯಾಂಡ್‌ನ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಲಾಗಿದೆ.

CMF ಬ್ರಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಆಯ್ಕೆ

ಜಾಹೀರಾತಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ದೊಡ್ಡ ವಿಷಯವೇನಿದೆ? ಎಂದು ಕೆಲವರು ಪ್ರಶ್ನಿಸಬಹುದು. ಕಾರ್ಲ್ ಪಿ ಕೇವಲ ರಶ್ಮಿಕಾ ಮಂದಣ್ಣ ಅವರನ್ನು ಜಾಹೀರಾತಿನಲ್ಲಿ ಬಳಸಿಕೊಂಡಿಲ್ಲ. ಕಾರ್ಲ್ ಪಿ ತನ್ನ CMF ಬ್ರ್ಯಾಂಡ್‌ನ ಹೊಸ ರಾಯಭಾರಿಯಾಗಿ ರಶ್ಮಿಕಾ ಮಂದಣ್ಣ ಅವರನ್ನು ಪರಿಚಯಿಸಿದ್ದಾರೆ ಎಂಬುದು ನೀವು ಗಮನಿಸಬೇಕಿದೆ.

ರಶ್ಮಿಕಾ ಮಂದಣ್ಣ ಬಗ್ಗೆ ಸರ್ಚ್ ಮಾಡುತ್ತಿರುವ ವಿದೇಶಿಗರು

ಹೌದು, ಭಾರತೀಯ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕಾರ್ಲ್ ಪಿ ಒಡೆತನದ CMFನ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಲಾಗಿದೆ. ಇದರಿಂದಾಗಿ ಈಗ ವಿಶ್ವದೆಲ್ಲೆಡೆ ರಶ್ಮಿಕಾ ಮಂದಣ್ಣ ಬಗ್ಗೆ ಹಲವು ವಿದೇಶಿಗರು ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ಇಂದು ಬಿಡುಗಡೆಯಾದ ಪೋಸ್ಟರ್‌ನಲ್ಲಿ, ರಶ್ಮಿಕಾ ಮಂದಣ್ಣ ಅವರು ಕಿತ್ತಳೆ ಬಣ್ಣದ ಉಡುಪಿನಲ್ಲಿ CMF ಫೋನ್ 1 ಮೊಬೈಲ್‌ ಅನ್ನು ಹಿಡಿದಿದ್ದಾರೆ.

ಈ ಹೊಸ ಸಾಧನವು CMF ಫೋನ್‌ನೊಂದಿಗೆ ಖರೀದಿಸಲು ಲಭ್ಯವಿರುವ ಪರಿಕರಗಳ ಹೊಸ ವರ್ಗವಾಗಿದೆ. ಅದೇ ರೀತಿ, CMF ಫೋನ್ ಬಿಡುಗಡೆಗೆ ಕೇವಲ 8 ದಿನಗಳು ಬಾಕಿ ಇರುವಾಗ, ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಜಾಹೀರಾತಿನಲ್ಲಿ ಹೊಸ ಫೋನ್ ಹಿಡಿದಿರುವುದನ್ನು ತೋರಿಸಲಾಗಿದೆ.

ಡಿಜಿಟಲ್, ಪತ್ರಿಕಾ ಪ್ರಚಾರಗಳಲ್ಲಿ ರಶ್ಮಿಕಾ ಮಿಂಚಿಂಗ್

CMF ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ಡಿಜಿಟಲ್, ಪತ್ರಿಕಾ ಮತ್ತು ಟಿವಿಸಿ ಪ್ರಚಾರಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು CMF ಮಾಹಿತಿ ನೀಡಿದೆ. ಇದು CMF ಉತ್ಪನ್ನಗಳ ಹೊಸ ಭಾವನೆ ಮತ್ತು ಉತ್ತಮ ಅಂಶವನ್ನು ಪ್ರತಿನಿಧಿಸುತ್ತದೆ ಎಂದು ಕಂಪನಿ ಹೇಳಿದೆ. ಇದಲ್ಲದೇ ಮುಂಬರುವ ಸಿಎಂಎಫ್ ಫೋನ್ ಬಗ್ಗೆಯೂ ಒಂದಷ್ಟು ಮಾಹಿತಿ ಹೊರಬಿದ್ದಿದೆ.

4 ಬಣ್ಣಗಳಲ್ಲಿ ಬರಲಿದೆ ಈ ಹೊಸ ಫೋನ್

ಈ ಹೊಸ CMF ಫೋನ್ 1 ಮೊಬೈಲ್ ತೆಗೆಯಬಹುದಾದ ಹಿಂಭಾಗದ ಕವರ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಹೊಸ ಫೋನ್ 4 ಬಣ್ಣಗಳಲ್ಲಿ ಬರುತ್ತದೆ. ಕಪ್ಪು, ಕಿತ್ತಳೆ, ತಿಳಿ ಹಸಿರು ಮತ್ತು ನೀಲಿ ಕಲರ್‌ನಲ್ಲಿ ಲಾಂಚ್ ಆಗಬುಹುದು ಎಂದು ಹೇಳಲಾಗುತ್ತದೆ. ಕಪ್ಪು ಮತ್ತು ತಿಳಿ ಹಸಿರು ಬಣ್ಣಗಳು ಸಾಮಾನ್ಯ ನೋಟಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಮತ್ತೊಂದೆಡೆ, ನೀಲಿ ಮತ್ತು ಕಿತ್ತಳೆ ಬಣ್ಣದ CMF ಫೋನ್‌ಗಳು ಸಸ್ಯಾಹಾರಿ ಲೆದರ್ ಬ್ಯಾಕ್ ಫಿನಿಶ್‌ನೊಂದಿಗೆ ಬರುತ್ತವೆ ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿ, ಕಂಪನಿಯು CMF ಫೋನ್‌ನೊಂದಿಗೆ ಇತರ ಕೆಲವು ಬಿಡಿಭಾಗಗಳನ್ನು ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ. ಲ್ಯಾನ್ಯಾರ್ಡ್ ಕನೆಕ್ಟರ್, ಫೋನ್ ಸ್ಟ್ಯಾಂಡ್ ಮತ್ತು ಫೋನ್ ರೋಪ್, ಬ್ಯಾಕ್ ಕವರ್‌ನೊಂದಿಗೆ ಬರುತ್ತದೆ.

CMF Phone 1ನ ವಿಶೇಷತೆಗಳು

CMF ಫೋನ್ 1 50MP ಪ್ರಾಥಮಿಕ ಸೆನ್ಸಾರ್ ಜೊತೆಗೆ ಡ್ಯುಯಲ್ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ. ಮುಂಭಾಗದಲ್ಲಿ 16MP ಸೆಲ್ಫಿ ಶೂಟರ್ ಅನ್ನು ಹೊಂದಿರಲಿದೆ. ಕ್ಯಾಮೆರಾವು f/1.8 ದ್ಯುತಿರಂಧ್ರವನ್ನು ಹೊಂದಿದೆ. 2x ಇನ್-ಸೆನ್ಸಾರ್ ಜೂಮ್‌ನೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ, CMF ಫೋನ್ 1 ಸೆಕೆಂಡರಿ ಪೋಟ್ರೇಟ್ ಸಂವೇದಕವನ್ನು ಪಡೆದಿದೆ. ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 33W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯಬಹುದು.

CMF Phone 1ನ ಪ್ರೊಸೆಸರ್ ಏನು?

CMF ಫೋನ್ 1 6.67-ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ದರ ಮತ್ತು 2,000 its ಷ್ಠ ಬ್ರೈಟ್‌ನೆಸ್ ಪಡೆದಿದೆ. ಈ ಫೋನ್‌ನಲ್ಲಿ MediaTekನ ಡೈಮೆನ್ಸಿಟಿ 7300 5G ಚಿಪ್‌ಸೆಟ್ ಲಭ್ಯವಿರುತ್ತದೆ. ಈ ಫೋನ್‌ನಲ್ಲಿ 8GB RAM ಅನ್ನು ಒದಗಿಸಲಾಗಿದೆ. ಜೊತೆಗೆ 8GB ವರೆಗೆ ವಿಸ್ತರಿಸಬಹುದು. CMF ಫೋನ್ 1 ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 20,000 ರೂ.ಗಿಂತ ಕಡಿಮೆಯಿರಬಹುದು ಎನ್ನಲಾಗಿದೆ.

CMF Buds Pro 2, CMF Watch Pro 2 ಲಾಂಚ್

ನಥಿಂಗ್ ಕಂಪನಿಯು ತನ್ನ ಮುಂದಿನ ಜನರೇಶನ್‌ನ ಅಪ್‌ಡೇಟ್ ಈವೆಂಟ್ ಅನ್ನು ಜುಲೈ 8ರಂದು ಹೋಸ್ಟ್ ಮಾಡುವುದಾಗಿ ಘೋಷಿಸಿದೆ. ಈ ಈವೆಂಟ್‌ನಲ್ಲಿ CMF Buds Pro 2 ಮತ್ತು CMF Watch Pro 2 ಅನ್ನು ಬಿಡುಗಡೆ ಮಾಡಲಿದೆ. ಜೊತೆಗೆ, ತನ್ನ ಉಪ-ಬ್ರಾಂಡ್ CMF ಅಡಿಯಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ CMF ಫೋನ್ 1 ಅನ್ನು ಅನಾವರಣಗೊಳಿಸಲಿದೆ. ಇದು ನಥಿಂಗ್ ಬ್ರ್ಯಾಂಡ್‌ನ ಕೈಗೆಟುಕುವ ದರದಲ್ಲಿ ಲಭ್ಯವಿರುವ ನಥಿಂಗ್ ಫೋನ್ 2aಗಿಂತ ಅಗ್ಗವಾಗಿರಲಿದೆ.

Best Mobiles in India

English summary
Nothing has announced Rashmika Mandanna, popular Indian actress, as the brand ambassador for CMF products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+