Home
ಸುದ್ದಿಜಾಲ

ನಥಿಂಗ್‌ ಫೋನ್‌ (2) ಸುಂಟರಗಾಳಿಯಲ್ಲ ಸುನಾಮಿ ಎಬ್ಬಿಸೋದು ಪಕ್ಕಾ! ಲಾಂಚ್‌ ಯಾವಾಗ?

ಮೊಬೈಲ್‌ ಮಾರುಕಟ್ಟೆಯಲ್ಲಿ ನಥಿಂಗ್‌ ಫೋನ್‌ ಮತ್ತೊಮ್ಮೆ ಬಿರುಗಾಳಿಯನ್ನೇ ಸೃಷ್ಟಿಸಿದೆ. ಹೊಸ ಮಾದರಿಯಲ್ಲಿ ಎಂಟ್ರಿ ನೀಡುವ ಮೂಲಕ ಭಾರಿ ಹಲ್‌ಚಲ್‌ ಕ್ರಿಯೆಟ್‌ ಮಾಡಿದ್ದ ನಥಿಂಗ್‌ ಈ ಭಾರಿ ಹೊಸತನದಲ್ಲಿ ನಥಿಂಗ್‌ ಫೋನ್‌ (2) ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಇದೇ ಜುಲೈ 11 ರಂದು ಬಿಡುಗಡೆ ಆಗೋದು ಪಕ್ಕಾ ಆಗಿದೆ.

ಹೌದು, ನಥಿಂಗ್‌ ಫೋನ್‌ (2) ಫೋನ್ ಅಧಿಕೃತವಾಗಿ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಿ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಲಾಂಚ್‌ ಈವೆಂಟ್ ಜುಲೈ ಎರಡನೇ ವಾರದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ತನ್ನ ಆಕರ್ಷಕ ವಿನ್ಯಾಸದಿಂದಲೇ ಸೌಂಡ್‌ ಮಾಡಿದ್ದ ನಥಿಂಗ್ ತನ್ನ ಹೊಸ ಫೋನ್‌ನ ವಿನ್ಯಾಸ ಹೇಗಿರಲಿದೆ ಅನ್ನೊ ಕುತೂಹಲವನ್ನು ಹುಟ್ಟುಹಾಕಿದೆ. ಹಾಗಾದ್ರೆ ನಥಿಂಗ್ ಫೋನ್ (2) ಫೀಚರ್ಸ್‌ ನಿರೀಕ್ಷೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಥಿಂಗ್‌ ಫೋನ್‌ (2) ಸುಂಟರಗಾಳಿಯಲ್ಲ ಸುನಾಮಿ ಎಬ್ಬಿಸೋದು ಪಕ್ಕಾ! ಲಾಂಚ್‌ ಯಾವಾಗ?

ನಥಿಂಗ್ ಫೋನ್ (2) ವಿನ್ಯಾಸದ ಬಗ್ಗೆ ನಿರೀಕ್ಷೆ ಏನು?
ನಥಿಂಗ್ ಫೋನ್ (1) ತನ್ನ ಆಕರ್ಷಕ ವಿನ್ಯಾಸದ ಮೂಲಕವೇ ಸಿಕ್ಕಾಪಟ್ಟೆ ಸೌಂಡ್‌ ಮಾಡಿತ್ತು. ಇದೇ ಕಾರಣಕ್ಕೆ ನಥಿಂಗ್ ಫೋನ್ (2) ಕೂಡ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ನಥಿಂಗ್ ಫೋನ್ (2) ವಿನ್ಯಾಸದ ಬಗ್ಗೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ. ನಥಿಂಗ್‌ ಫೋನ್ (1) ನಲ್ಲಿ ಹಿಂಭಾಗದಲ್ಲಿ LED ಗಳೊಂದಿಗಿನ ಗ್ಲಿಫ್ ಇಂಟರ್ಫೇಸ್ ಸಾಕಷ್ಟು ಗಮನಸೆಳೆದಿತ್ತು. ಇದೇ ಮಾದರಿಯಲ್ಲಿಯೇ ನಥಿಂಗ್ ಫೋನ್ (2) ಕೂಡ ಬರಲಿದೆ ಅನ್ನೊದನ್ನ ಕಂಪನಿಯ CEO ಕಾರ್ಲ್ ಪೀ ಅವರು ಇನ್ನು ಬಹಿರಂಗಪಡಿಸಿಲ್ಲ.

ನಥಿಂಗ್ ಫೋನ್ (2) ಫೀಚರ್ಸ್‌ ನಿರೀಕ್ಷೆ ಏನು?
ನಥಿಂಗ್ ಫೋನ್ (2) ಸ್ಮಾರ್ಟ್‌ಫೋನ್‌ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆನ್ಸಾರ್‌ಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಸ್ಮಾರ್ಟ್‌ಫೋನ್ ಮೂರು ವರ್ಷಗಳ ಆಂಡ್ರಾಯ್ಡ್ ಓಎಸ್ ಅಪ್‌ಗ್ರೇಡ್‌ಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಸ್ವೀಕರಿಸಲು ಅರ್ಹವಾಗಿದೆ ಎಂದು ಹೇಳಲಾಗಿದೆ.

ಇನ್ನು ಸ್ಮಾರ್ಟ್‌ಫೋನ್‌ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚಿನ ನಥಿಂಗ್ ಓಎಸ್ ಬಿಲ್ಡ್ ಬಳಕೆದಾರರಿಗೆ ವೇಗವಾದ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ನಥಿಂಗ್ ಫೋನ್ (2) ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಹೊಸತನದ ಅನುಭವ ನಿರೀಕ್ಷಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಸುಮಾರು 40,000ರೂ.ಗಳ ಬೆಲೆಯಲ್ಲಿ ಬರುವ ಸಾದ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ನ ಟೀಸರ್‌ಗಳು ಈಗಾಗಲೇ ಬಹಿರಂಗವಾಗಿದ್ದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ನಥಿಂಗ್‌ ಕಂಪೆನಿ ಕಳೆದ ವರ್ಷ ಪರಿಚಯಿಸಿದ್ದ ನಥಿಂಗ್ ಫೋನ್ (1) ಭಾರತದಲ್ಲಿ 32,999ರೂ. ಬೆಲೆಯಲ್ಲಿ ದೊರೆಯಲಿದೆ.

ಇನ್ನು ಕಳೆದ ವರ್ಷ ಬಿಡುಗಡೆಯಾಗಿದ್ದ ನಥಿಂಗ್‌ ಫೋನ್‌(1) ಗ್ಲಿಫ್ ಇಂಟರ್‌ಫೇಸ್ ಅನ್ನು ಸಹ ನೀಡುತ್ತದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ಗೆ ನ್ಯೂ ನೋಟಿಫಿಕೇಶನ್‌ ಅಥವಾ ಕರೆ ಬಂದಾಗ ಲೈಟ್‌ ಆನ್‌ ಆಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 10 ಗ್ಲಿಫ್ ಪ್ಯಾಟರ್ನ್‌ಗಳನ್ನು ಒದಗಿಸುತ್ತದೆ.ಇನ್ನು ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ.ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ರೂಪಾಂತರಗಳ ಆಯ್ಕೆಯಲ್ಲಿ ಬರಲಿದೆ. ಇದು ವೈಟ್‌ ಮತ್ತು ಬ್ಲಾಕ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Nothing Phone (2) is expected launch in India on July 11
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+