2,000 ಅಗ್ಗ! ಇಂದು Nothing Phone 2a Plus ಸೇಲ್: ಆಫರ್ ಕೂಡ ಇದೆ
ನಥಿಂಗ್ (Nothing) ಕಂಪನಿಯ ಬಹುನಿರೀಕ್ಷಿತ ನಥಿಂಗ್ ಫೋನ್ 2a ಪ್ಲಸ್ (Nothing Phone 2a Plus) ಸ್ಮಾರ್ಟ್‌ಫೋನ್ ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಮಧ್ಯಮ ಶ್ರೇಣಿಯ ಫೋನ್ ಆಗಿದ್ದು, ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಮೊಬೈಲ್ ಪ್ರಿಯರ ಗಮನ ಸೆಳೆದಿರುವ ಈ ಫೋನ್ ಇಂದು (ಆಗಸ್ಟ್ 7) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಸೈಟ್ ಮೂಲಕ ಮೊದಲ ಮಾರಾಟ ಪ್ರಾರಂಭಿಸಲಿದೆ. ತನ್ನ ಸ್ಟೈಲಿಶ್ ಲುಕ್ ಹಾಗೂ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ SoC ಪ್ರೊಸೆಸರ್‌ನೊಂದಿದೆ ಕಾರ್ಯನಿರ್ವಹಿಸಲಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಸೈಟ್‌ನಲ್ಲಿ ನಥಿಂಗ್ ಫೋನ್ (2a) ಪ್ಲಸ್ Nothing Phone (2a) Plus ಸ್ಮಾರ್ಟ್‌ಫೋನ್ ಇಂದು (ಆಗಸ್ಟ್ 7) ಮಾರಾಟ ಪ್ರಾರಂಭ ಮಾಡಲಿದೆ. ಈ ಫೋನ್ 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಇದು 50 ಮೆಗಾಪಿಕ್ಸಲ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಪಡೆದಿದೆ. ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ.

Nothing Phone 2a Plus ಫೋನಿನ ಬೆಲೆ ಮತ್ತು ಆಫರ್‌ಗಳು
- 8GB RAM + 256GB ಸ್ಟೋರೇಜ್ ಬೆಲೆ = ರೂ. 27,999
- 12GB RAM + 256GB ಸ್ಟೋರೇಜ್ ಬೆಲೆ = ರೂ. 29,999
ನಥಿಂಗ್ ಫೋನ್ 2a ಪ್ಲಸ್ ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್‌ಗಳನ್ನು ಗ್ರೇ ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ನೀವು Flipkart ಮೂಲಕ Nothing Phone 2a Plus ಅನ್ನು ಖರೀದಿಸಬಹುದು. ಇತರ ಚಿಲ್ಲರೆ ಪಾಲುದಾರರ ಮೂಲಕವೂ ಖರೀದಿಸಲು ಲಭ್ಯವಿದೆ.
8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಇದೆ. ಆದರೆ, ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ, ಈ ಫೋನ್ ಕೇವಲ 25,999 ರೂ.ಗಳಲ್ಲಿ ಲಭ್ಯವಾಗಲಿದೆ. 2,000 ರೂ.ಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. 12GB RAM ಮತ್ತು 256GB ಸ್ಟೋರೇಜ್ ಬೆಲೆ 29,999 ರೂ. ಆಗಿದೆ. ಇದು ಕೂಡ 2,000 ರೂ.ಗಳ ಡಿಸ್ಕೌಂಟ್‌ನೊಂದಿಗೆ 27,999 ರೂ.ಗಳಲ್ಲಿ ಲಭ್ಯವಿದೆ.
ನಥಿಂಗ್ ಫೋನ್ 2a ಪ್ಲಸ್ ಫೋನಿನ ಫೀಚರ್ಸ್
ಡಿಸ್‌ಪ್ಲೇ: ನಥಿಂಗ್ ಫೋನ್ 2a ಪ್ಲಸ್ ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 2412 x 1084 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. 120Hz ರಿಫ್ರೆಶ್ ದರ ಹಾಗೂ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಇದಲ್ಲದೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ಸಪೋರ್ಟ್ ಪಡೆದಿದ್ದು, ಅಲ್ಲದೇ ಈ ಡಿಸ್‌ಪ್ಲೇಯು OLED ಸ್ಕ್ರೀನ್ ಹೊಂದಿದೆ.
ಪ್ರೊಸೆಸರ್: ನಥಿಂಗ್ ಫೋನ್ 2a ಪ್ಲಸ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಜೊತೆಗೆ ರನ್ ಆಗಲಿದೆ. 8GB RAM ಮತ್ತು 256GB ಸ್ಟೋರೇಜ್ ಹಾಗೂ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಅಯ್ಕೆಯಲ್ಲಿ ಲಭ್ಯವಿದೆ.
ಕ್ಯಾಮೆರಾ: ನಥಿಂಗ್ ಫೋನ್ 2a ಪ್ಲಸ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡಿದೆ. ದ್ವಿತೀಯ ಕ್ಯಾಮೆರಾ ಸಹ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದೆ.
ಬ್ಯಾಟರಿ: ನಥಿಂಗ್ ಫೋನ್ 2a ಪ್ಲಸ್ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 50W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಹೊಂದಿದೆ.


Click it and Unblock the Notifications








