ಬೆಂಗಳೂರಿನಲ್ಲಿ ನಾಳೆ ನಥಿಂಗ್ ಈವೆಂಟ್: ಮೊದಲ 100 ಜನರಿಗೆ ಉಚಿತ ಡಿವೈಸ್!
ನಥಿಂಗ್ ಸ್ಮಾರ್ಟ್‌ಫೋನ್ ಪ್ರಿಯರು ಬಹು ನಿರೀಕ್ಷಿತ ಫ್ಲ್ಯಾಗ್‌ಶಿಪ್ 'ನಥಿಂಗ್ ಫೋನ್ 3' ಮಾರಾಟವು ಇದೇ 15 ರಿಂದ ಆರಂಭವಾಗಲಿದೆ. ಆದರೆ, ಇದಕ್ಕೂ ಮುಂಚೆ, ನಥಿಂಗ್ ಕಂಪನಿಯು ದೇಶದಲ್ಲಿ ವಿಶೇಷ ಡ್ರಾಪ್ ಈವೆಂಟ್ ಅನ್ನು ಘೋಷಿಸಿದೆ. ಈ ಈವೆಂಟ್‌ನಲ್ಲಿ ಗ್ರಾಹಕರು ನಥಿಂಗ್ ಫೋನ್ 3 ಸಾಧನವನ್ನು ಪ್ರಾಯೋಗಿಕವಾಗಿ ಅನುಭವಿಸಲು ಮತ್ತು ಅಧಿಕೃತ ಮಾರಾಟಕ್ಕೆ ಮುಂಚೆ ಫೋನ್ ಖರೀದಿಸಲು ಅವಕಾಶ ಪಡೆಯುತ್ತಾರೆ. ಇದಕ್ಕಿಂತಲೂ ಸಹಿಸುದ್ದಿ ಎಂದರೆ, ಈ ಈವೆಂಟ್‌ನಲ್ಲಿ ಮೊದಲ 100 ಜನರಿಗೆ ಉಚಿತ ಆಡಿಯೋ ಡಿವೈಸ್ ನೀಡಲಾಗುತ್ತಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ನಥಿಂಗ್ ಫೋನ್ 3 ಡ್ರಾಪ್ ಈವೆಂಟ್: ಕೊಡುಗೆಗಳು
ನಥಿಂಗ್ ಕಂಪನಿಯು ಜುಲೈ 12 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಯುಬಿ ಸಿಟಿಯಲ್ಲಿ 'ನಥಿಂಗ್ ಫೋನ್ 3' ಈವೆಂಟ್ ಅನ್ನು ಆಯೋಜಿಸಿದೆ. ಇದು ಭಾರತಕ್ಕೆ ವಿಶೇಷವಾದ ಡ್ರಾಪ್ ಈವೆಂಟ್ ಆಗಿದ್ದು, ಪ್ರವೇಶವು ಮೊದಲು ಬಂದವರಿಗೆ ಮೊದಲು ಸೇವೆ ನೀಡುವ ಆಧಾರದ ಮೇಲೆ ಇರುತ್ತದೆ.
ಈ ಈವೆಂಟ್‌ನಲ್ಲಿ ಅತಿಥಿಗಳು ಕಸ್ಟಮ್ ಸಂಗ್ರಹಯೋಗ್ಯ ಮಗ್‌ಗಳಲ್ಲಿ ಉಚಿತ ರಿಫ್ರೆಶ್‌ಮೆಂಟ್‌ಗಳು ಮತ್ತು ಬರಿಸ್ತಾ ಶೈಲಿಯ ಕಾಫಿಯೊಂದಿಗೆ ವಿಶ್ರಾಂತಿ ಪಡೆಯಬಹುದು ಮತ್ತು "ಮ್ಯೂಸಿಕ್, ಲೈಟ್ ಮತ್ತು ಹೆಚ್ಚಿನ ವಿಶೇಷ ವಾತಾವರಣ"ವನ್ನು ಅನುಭವಿಸಬಹುದು ಎಂದು ಕಂಪೆನಿಯು ತಿಳಿಸಿದೆ.
ಈ ನಥಿಂಗ್ ಫೋನ್ 3 ಇಂಡಿಯಾ ಡ್ರಾಪ್ ಈವೆಂಟ್‌ನಲ್ಲಿ, ಅತಿಥಿಗಳಿಗೆ ಹೊಸ ಫ್ಲ್ಯಾಗ್‌ಶಿಪ್ ಫೋನ್ ಅನ್ನು ಪ್ರಾಯೋಗಿಕವಾಗಿ ಬಳಸಲು ಮತ್ತು ಖರೀದಿಗೆ ವ್ಯಾಪಕವಾಗಿ ಲಭ್ಯವಾಗುವ ಮೊದಲು ಅದರ ವೈಶಿಷ್ಟ್ಯಗಳನ್ನು ಅನುಭವಿಸಲು ಅವಕಾಶ ನೀಡಲಾಗುತ್ತದೆ.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ, ಅತಿಥಿಗಳು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಬರುವ ಮೊದಲು ಫೋನ್ ಖರೀದಿಸಲು ಅವಕಾಶ ಹೊಂದಿದ್ದಾರೆ.
ಜೊತೆಗೆ, ಅಥಿತಿಗಳು ಸವಾಲಿನಲ್ಲಿ ಭಾಗವಹಿಸುವ ಮೂಲಕ ರೂ. 21,999 ಮೌಲ್ಯದ ನಥಿಂಗ್ ಹೆಡ್‌ಫೋನ್ 1 ಗೆ ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ. ಮತ್ತು ಮುಂಗಡವಾಗಿ ಆರ್ಡರ್ ಮಾಡುವ ಅಗತ್ಯವನ್ನು ನಿವಾರಿಸುತ್ತದೆ ಎಂದು ಕಂಪನಿಯು ತಿಳಿಸಿದೆ.
ನಥಿಂಗ್ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಾಗಿ ಡ್ರಾಪ್ ಈವೆಂಟ್ ಅನ್ನು ಆಯೋಜಿಸುತ್ತಿರುವುದು ಹೊಸದಲ್ಲ. ಕಳೆದ ವರ್ಷ, ನಥಿಂಗ್ ಭಾರತದಲ್ಲಿ ನಥಿಂಗ್ ಫೋನ್ 2a ನ ಸೀಮಿತ ಡ್ರಾಪ್ ಅನ್ನು ಘೋಷಿಸಿತ್ತು. ಮಾರ್ಚ್‌ನಲ್ಲಿ, ನಥಿಂಗ್ ಫೋನ್ 3a ಸರಣಿಯ ಲಾಂಚ್ ಪಾರ್ಟಿಯನ್ನು ಆಯೋಜಿಸಿ, ಸಮುದಾಯದ ಸದಸ್ಯರನ್ನು ಮೊದಲು ಫೋನ್‌ಗಳನ್ನು ಅನುಭವಿಸಲು ಮತ್ತು ಖರೀದಿಸಲು ಆಹ್ವಾನಿಸಿತ್ತು.
ನಥಿಂಗ್ ಫೋನ್ 3 ಸಾಧನವು ಜುಲೈ 15 ರಿಂದ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ಆದರೆ, ಕಂಪನಿಯ ಈ ಭಾರತ-ವಿಶೇಷ ಡ್ರಾಪ್ ಈವೆಂಟ್ ನಲ್ಲಿ ಗ್ರಾಹಕರು ಫ್ಲ್ಯಾಗ್‌ಶಿಪ್ ಹ್ಯಾಂಡ್‌ಸೆಟ್‌ನ ಪ್ರಾಯೋಗಿಕ ಅನುಭವವನ್ನು ಪಡೆಯಲು ಮತ್ತು ಅಧಿಕೃತ ಮಾರಾಟಕ್ಕೂ ಮುಂಚೆ ಫೋನ್ ಖರೀದಿಸಲು ಅವಕಾಶ ದೊರೆತಿರುವುದು ನಿಮಗೆ ಅತ್ಯುತ್ತಮ ಅವಕಾಶ ಎನ್ನಬಹುದು.
ಭಾರತ ಸೇರಿದಂತೆ ವಿಶ್ವದ ಮೊಬೈಲ್ ಮಾರುಕಟ್ಟೆಯು ಕಾತರದಿಂದ ನಿರೀಕ್ಷಿಸುತ್ತಿದ್ದ ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್ ಇತ್ತೀಚಿಗಷ್ಟೇ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇದು ನಥಿಂಗ್ ಕಂಪನಿಯ ಮೊದಲ ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದ್ದು, ವೈಯಕ್ತಿಕ ತಂತ್ರಜ್ಞಾನಕ್ಕೆ ಹೊಸ ಆಯಾಮವನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.
ನಥಿಂಗ್ ತನ್ನ ಐಕಾನಿಕ್ ವಿನ್ಯಾಸವನ್ನು ಮತ್ತಷ್ಟು ವಿಕಸನಗೊಳಿಸಿ ಹೊಸ ಗ್ಲಿಫ್ ಮ್ಯಾಟ್ರಿಕ್ಸ್ ಜೊತೆಗಿನ ಸೌಂದರ್ಯ, ಪ್ರೀಮಿಯಂ ವಸ್ತುಗಳು ಮತ್ತು ಗಮನಾರ್ಹ ಕಾರ್ಯಕ್ಷಮತೆಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ₹62,999 (ಕೊಡುಗೆ ಸೇರಿದಂತೆ) ಎಂದು ನಿಗದಿಪಡಿಸಲಾಗಿದೆ. ನಥಿಂಗ್ ಫೋನ್ 3 ಫೋನ್ ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








