Home
ಸುದ್ದಿಜಾಲ

ಭಾರತದ ಮಾರುಕಟ್ಟೆಗೆ ಶೀಘ್ರವೇ ಬರುತ್ತಿದೆ ಮತ್ತೊಂದು Nothing ಸ್ಮಾರ್ಟ್‌ಫೋನ್!

ಇತ್ತೀಚೆಗಷ್ಟೇ 'Nothing Phone 3a' ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಯುಕೆ ಮೂಲದ ಬ್ರ್ಯಾಂಡ್ Nothing, ತನ್ನ ಪ್ರಮುಖ ಸ್ಮಾರ್ಟ್‌ಫೋನ್ 'Nothing Phone 3' ಅನ್ನು ಬಿಡುಗಡೆ ಮಾಡಲು ತಯಾರಾಗುತ್ತಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಆಸಕ್ತರನ್ನು ಆಕರ್ಷಿಸಲು, ಕಂಪನಿಯು ಇತ್ತೀಚಿಗೆ 'Nothing Phone 3a' ಸರಣಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದೀಗ, ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡ ಫ್ಲಾಗ್‌ಶಿಪ್ ಮಾದರಿಯಾಗಿ ಹೊಸ Nothing Phone 3 ಸ್ಮಾರ್ಟ್‌ಫೋನನ್ನು ಪರಿಚಯಿಸಲು ಕಂಪನಿಯು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಪ್ರಕಾರ, ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡ ಫ್ಲಾಗ್‌ಶಿಪ್ ಮಾದರಿಯ Nothing Phone 3 ಸ್ಮಾರ್ಟ್‌ಫೋನ್ ಜುಲೈ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ನಥಿಂಗ್ ಕಂಪನಿಯ ಹಿಂದಿನ ಬಿಡುಗಡೆಗಳೊಂದಿಗೆ ಹೊಂದಿಕೆಯಾಗುತ್ತದೆ, ಏಕೆಂದರೆ ನಥಿಂಗ್ ಫೋನ್ 1 ಮತ್ತು ನಥಿಂಗ್ ಫೋನ್ 2 ಅನ್ನು ಕ್ರಮವಾಗಿ ಜುಲೈ 2022 ಮತ್ತು 2023 ರಲ್ಲಿ ಪರಿಚಯಿಸಲಾಗಿತ್ತು. ನಥಿಂಗ್ ಸಿಇಒ ಕಾರ್ಲ್ ಪೀ ಅವರು ಈ ಹಿಂದೆ Nothing Phone 3 ಅನ್ನು 2025 ರಲ್ಲಿ ಬಿಡುಗಡೆ ಮಾಡುವ ಬಗ್ಗೆ ಸೂಚನೆ ನೀಡಿದ ಕಾರಣ, ಈ ಸುದ್ದಿಗೆ ಹೆಚ್ಚಿನ ಮಹತ್ವ ಬಂದಿದೆ.

ನಥಿಂಗ್ ಫೋನ್ 3: ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ಬೆಲೆ
ಮುಂಬರಲಿರುವ Nothing Phone 3 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.77-ಇಂಚಿನ 1.5K AMOLED LTPO ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪರದೆಯು 1600 ನಿಟ್‌ಗಳ ಹೊಳಪನ್ನು ಮತ್ತು ನೇರ ಸೂರ್ಯನ ಬೆಳಕಿನಲ್ಲಿ ಉತ್ತಮ ಗೋಚರತೆಗಾಗಿ 3000 ನಿಟ್‌ಗಳ ಗರಿಷ್ಠ ಹೊಳಪನ್ನು ಒದಗಿಸಬಹುದು. ಅಲ್ಲದೆ, ಈ ಸ್ಮಾರ್ಟ್‌ಫೋನ್ AI-ಚಾಲಿತ ವೈಶಿಷ್ಟ್ಯಗಳ ಮೇಲೆ ಹೆಚ್ಚು ಒತ್ತು ನೀಡುವ ನಿರೀಕ್ಷೆಯಿದೆ, ಇದು ಅದರ ಪೂರ್ವವರ್ತಿಗಳಿಗಿಂತ ವಿಭಿನ್ನವಾಗಿರುತ್ತದೆ ಎನ್ನಲಾಗಿದೆ.

ಭಾರತದ ಮಾರುಕಟ್ಟೆಗೆ ಶೀಘ್ರವೇ ಬರುತ್ತಿದೆ ಮತ್ತೊಂದು Nothing ಸ್ಮಾರ್ಟ್‌ಫೋನ್!

Nothing Phone 3 ಸ್ಮಾರ್ಟ್‌ಫೋನಿನ ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡಿದರೆ, ಈ Nothing Phone 3 ಸ್ಮಾರ್ಟ್‌ಫೋನ್ 50MP ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಸಂವೇದಕ, ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇರಬಹುದು. ಮುಂಭಾಗದಲ್ಲಿ, ಸಾಧನವು 50MP ಸಾಮರ್ಥ್ಯದ ಸೆಲ್ಫಿ ಶೂಟರ್ ಅನ್ನು ಹೊಂದಿರಬಹುದು. ಹೆಚ್ಚಾಗಿ, ಈ Nothing Phone 3 ಫೋನ್ 5300mAh ಬ್ಯಾಟರಿಯನ್ನು ಹೊಂದಿದ್ದು, 50W ವೇಗದ ಚಾರ್ಜಿಂಗ್ ಮತ್ತು 20W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು ಎನ್ನಲಾಗಿದೆ.

ಜೊತೆಗೆ ಈ Nothing Phone 3 ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.5 ಅನ್ನು ಕಾರ್ಯನಿರ್ವಹಿಸುವ ನಿರೀಕ್ಷೆಯಲ್ಲಿದೆ. ಇನ್ನು ಈ ಹಿಂದಿನ Nothing Phone 2 ನಂತೆಯೇ, ಮುಂಬರುವ ಈ Nothing Phone 3 ಸ್ಮಾರ್ಟ್‌ಫೋನ್ ಕೂಡ ಭಾರತೀಯ ಮಾರುಕಟ್ಟೆಯಲ್ಲಿ 45,000 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಬಹುದು ಎಂದು ಊಹಿಸಲಾಗಿದೆ. ಆದರೆ, Nothing ಕಂಪನಿಯು ಈ ವರೆಗೂ ಯಾವುದೇ ಅಧಿಕೃತ ವಿವರಗಳನ್ನು ಪ್ರಕಟಿಸಿಲ್ಲ. ಈ ಕುರಿತ ಮತ್ತಷ್ಟ್ ಅಪ್‌ಡೇಟ್‌ಗಳನ್ನು ಮುಂದೆ ನೋಡೋಣ.

'Nothing Phone 3a' ಸರಣಿಯ ಸ್ಮಾರ್ಟ್‌ಫೋನ್‌ಗಳು
ಈ ತಿಂಗಳ ಆರಂಭದಲ್ಲಿ, Nothing Phone (3a) ಸರಣಿಯ ಅಡಿಯಲ್ಲಿ Nothing Phone (3a) ಮತ್ತು Nothing Phone (3a) ಪ್ರೊ ಎರಡು ಸ್ಮಾರ್ಟ್‌ಫೋನ್‌ಗಳನ್ನು 24,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಎಸೆನ್ಷಿಯಲ್ ಬಟನ್ ಜೊತೆಗೆ ಆಕರ್ಷಕ ವಿನ್ಯಾಸ, ಗೂಗಲ್‌ನೊಂದಿಗೆ ಅಭಿವೃದ್ಧಿಪಡಿಸಿದ ಅಲ್ಟ್ರಾ XDR ಡಿಸ್ಪ್ಲೇ ತಂತ್ರಜ್ಞಾನ, AI-ಚಾಲಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಕ್ಯಾಮೆರಾ ವ್ಯವಸ್ಥೆಯ ಜೊತೆಗೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿವೆ.

Best Mobiles in India

English summary
Nothing Phone 3: Following the release of the Nothing Phone 3a series, the UK-based smartphone brand Nothing is gearing up to unveil its flagship model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+