Home
ಸುದ್ದಿಜಾಲ

ಜುಲೈನಲ್ಲಿ Nothing Phone 3 ಫೋನ್ ಬಿಡುಗಡೆ: ಇತ್ತೀಚಿನ ಎಲ್ಲಾ ಮಾಹಿತಿ!

ಯುಕೆ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Nothing ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ Nothing Phone 3 ಅನ್ನು ಇದೇ ಜುಲೈನಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಕಂಪನಿಯು ಬಿಡುಗಡೆಯ ನಿಖರ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, Nothing ಕಂಪೆನಿಯು "ಮೊದಲ ನಿಜವಾದ ಪ್ರಮುಖ ಸ್ಮಾರ್ಟ್‌ಫೋನ್" ಜುಲೈನಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿದೆ. ಇನ್ನು ಈ ಹೊಸ ಸ್ನಾರ್ಟ್‌ಫೋನ್ ಪ್ರೀಮಿಯಂ ವಿನ್ಯಾಸ, ವರ್ಧಿತ ಕಾರ್ಯಕ್ಷಮತೆ ಮತ್ತು ಗಮನಾರ್ಹ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಜುಲೈ 2023 ರಲ್ಲಿ ಬಿಡುಗಡೆಯಾದ Nothing Phone 2 ಗೆ ಹೋಲಿಸಿದರೆ ಇದು ಗಮನಾರ್ಹ ಸುಧಾರಣೆಗಳನ್ನು ತರುವ ಸಾಧ್ಯತೆಯಿದೆ.

ನಥಿಂಗ್ ಸಂಸ್ಥಾಪಕ ಮತ್ತು ಸಿಇಒ ಕಾರ್ಲ್ ಪೀ ಅವರು ಇತ್ತೀಚೆಗೆ ದಿ ಆಂಡ್ರಾಯ್ಡ್ ಶೋ: ಐ/ಒ ಎಡಿಷನ್ ಈವೆಂಟ್‌ನಲ್ಲಿ Nothing Phone 3 ಫೋನ್ ಬೆಲೆ ಸುಮಾರು GBP 800 (ಸುಮಾರು ರೂ. 90,000) ಇರಬಹುದು ಎಂದು ಸುಳಿವು ನೀಡಿದ್ದಾರೆ. ಇದು Nothing Phone 2 ರ ಆರಂಭಿಕ ಬೆಲೆ ರೂ. 44,999 (8GB + 128GB RAM ಮತ್ತು ಸ್ಟೋರೇಜ್) ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಆದಾಗ್ಯೂ, ಕೆಲವು ಆನ್‌ಲೈನ್ ವರದಿಗಳ ಪ್ರಕಾರ, ಭಾರತದಲ್ಲಿ Nothing Phone 3 ಫೋನ್ ಬೆಲೆ ಸುಮಾರು ರೂ. 55,000 ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಲೆ ವ್ಯತ್ಯಾಸವು ಪ್ರಾದೇಶಿಕ ತೆರಿಗೆಗಳು ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ. ಬಿಡುಗಡೆಗೆ ಮುನ್ನ ಕಂಪನಿಯು ಫೋನ್‌ನ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.

Nothing Phone 3 ನಿರೀಕ್ಷಿತ ವೈಶಿಷ್ಟ್ಯಗಳು
ಮೊಬೈಲ್ ಮಾರುಕಟ್ಟೆಯಲ್ಲಿ Nothing Phone 3 ಒಂದು ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಪ್ರಮುಖ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಅನ್ನು ಒಳಗೊಂಡಿರುತ್ತದೆ ಎಂದು ವದಂತಿಗಳಿವೆ. ಏಕೆಂದರೆ, ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ. ಕ್ಯಾಮೆರಾ ವಿಭಾಗದಲ್ಲಿ, ಇದು ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಜೊತೆಗೆ ದೊಡ್ಡ ಪ್ರಾಥಮಿಕ ಸೆನ್ಸಾರ್ ಅನ್ನು ಒಳಗೊಂಡಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, 5,000mAh ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಇರುವ ಸಾಧ್ಯತೆಯಿದೆ, ಇದು ಸುದೀರ್ಘ ಬಳಕೆ ಅವಧಿಯನ್ನು ನೀಡುತ್ತದೆ. ಈ ಕುರಿತು ಅಧಿಕೃತ ಮಾಹಿತಿಯು ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

ಜುಲೈನಲ್ಲಿ Nothing Phone 3 ಫೋನ್ ಬಿಡುಗಡೆ: ಇತ್ತೀಚಿನ ಎಲ್ಲಾ ಮಾಹಿತಿ!

ಹೋಲಿಕೆಗಾಗಿ ನೋಡುವುದಾದರೆ, ಈ ಹಿಂದಿನ Nothing Phone ಸ್ಮಾರ್ಟ್‌ಫೋನ್ 2 50-ಮೆಗಾಪಿಕ್ಸೆಲ್ ಸೋನಿ IMX890 ಮುಖ್ಯ ಸೆನ್ಸಾರ್ (OIS ಮತ್ತು EIS ಬೆಂಬಲದೊಂದಿಗೆ) ಮತ್ತು 50-ಮೆಗಾಪಿಕ್ಸೆಲ್ Samsung JN1 ಅಲ್ಟ್ರಾ-ವೈಡ್ ಶೂಟರ್ (EIS ಬೆಂಬಲದೊಂದಿಗೆ) ಒಳಗೊಂಡಿರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 32-ಮೆಗಾಪಿಕ್ಸೆಲ್ ಸೋನಿ IMX615 ಮುಂಭಾಗದ ಕ್ಯಾಮೆರಾ ಸೆನ್ಸಾರ್ ಅನ್ನು ಸಹ ಹೊಂದಿದೆ. ಫೋನ್ 2 ಸ್ನಾಪ್‌ಡ್ರಾಗನ್ 8+ Gen 1 SoC ನಿಂದ ಚಾಲಿತವಾಗಿದೆ ಮತ್ತು 45W ವೈರ್ಡ್ ಮತ್ತು 5W Qi ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. Nothing Phone 3 ಈ ವೈಶಿಷ್ಟ್ಯಗಳ ಮೇಲೆ ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ, ಇದು ನಥಿಂಗ್ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ.

Best Mobiles in India

English summary
Nothing Phone 3 has been hinted at as a flagship device, with an expected price of around GBP 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+