Home
ಸುದ್ದಿಜಾಲ

'ನಥಿಂಗ್ ಫೋನ್ 3' ಆಗಮನಕ್ಕೆ 2 ವರ್ಷ ಏಕೆ?..'ಕಾರ್ಲ್ ಪೀ' ಅವರ ಹೇಳಿಕೆ ವೈರಲ್!

ನಥಿಂಗ್ ಕಂಪೆನಿಯ ಬಹುನಿರೀಕ್ಷಿತ 'ನಥಿಂಗ್ ಫೋನ್ 3' ಸ್ಮಾರ್ಟ್‌ಫೋನ್ ಇನ್ನೇನು ಬಿಡುಗಡೆಯಾಗುತ್ತಿದೆ. ಈ ವೇಳೆಯಲ್ಲಿ ನಥೀಂಗ್ ಕಂಪೆನಿಯ CEO 'ಕಾರ್ಲ್ ಪೀ' ಅವರ ಪ್ರಾಮಾಣಿಕ ಮಾತುಗಳು ಸಹ ವೈರಲ್ ಆಗಿವೆ. ಹೌದು, ನಥಿಂಗ್ ಟಿವಿಯ ಇತ್ತೀಚಿನ ಸಂಚಿಕೆಯಲ್ಲಿ ಕಾರ್ಲ್ ಪೀ ಅವರು, ನಥಿಂಗ್ ಫೋನ್ (3) ಅನ್ನು ಪ್ರಾರಂಭಿಸಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿರುವುದಕ್ಕೆ ನಿಖರ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಕಾಣಿಸಿಕೊಂಡಿರುವ ಕೆಲವು ಆತಂಕಕಾರಿ ಪ್ರವೃತ್ತಿಗಳನ್ನು ಸಹ ಪ್ರಮಾಣಿಕವಾಗಿ ಹೇಳಿ ಮೊಬೈಲ್ ಲೋಕದ ಗಮನಸೆಳೆದಿದ್ದಾರೆ.

ನಥಿಂಗ್ ಫೋನ್ (3) ಅನ್ನು ಪ್ರಾರಂಭಿಸಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ. ಇದಕ್ಕೆ ಕಾರಣ, ಹಿಂದಿನ ಆವೃತ್ತಿಯ ಫೋನ್ (2), ಫೋನ್ (1) ಗೆ ಹೋಲಿಸಿದರೆ ನಥಿಂಗ್ ಫೋನ್ (3) ಅಷ್ಟೊಂದು ಗಮನಾರ್ಹ ಅಪ್‌ಗ್ರೇಡ್ ಆಗಿರಲಿಲ್ಲ ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ನಾವೀನ್ಯತೆಗಿಂತ ಅಧಿಕ ಉತ್ಪಾದನೆಯ ಸಮಸ್ಯೆ ಹೆಚ್ಚು ಪ್ರಬಲವಾಗಿದೆ ಎಂದು ಕಾರ್ಲ್‌ ಪೀ ಅವರು ಹೇಳಿದ್ದು, ಮಾರುಕಟ್ಟೆಯಲ್ಲಿ ನಿರಂತರ ಹೊಸ ಫೋನ್‌ಗಳ ಬಿಡುಗಡೆಯು ಹಲವಾರು ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಕುರಿತು ಸಹ ಹೇಳಿದ್ದಾರೆ.

ಸ್ಮಾರ್ಟ್‌ಫೋನ್ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಬೆಳವಣಿಗೆಯನ್ನು ಕಂಡಿದೆ. ಆದರೆ, ಈ ಬೆಳವಣಿಗೆಯ ಜೊತೆಗೆ ಕೆಲವು ಆತಂಕಕಾರಿ ಪ್ರವೃತ್ತಿಗಳು ಸಹ ಕಾಣಿಸಿಕೊಂಡಿವೆ. ಇತ್ತೀಚಿಗೆ ನಿರಂತರ ಹೊಸ ಫೋನ್‌ಗಳ ಬಿಡುಗಡೆಯು ಅನಗತ್ಯ ಇ-ತ್ಯಾಜ್ಯಕ್ಕೆ ಕಾರಣವಾಗುತ್ತಿದೆ, ಸಾಫ್ಟ್‌ವೇರ್ ಬೆಂಬಲವನ್ನು ಕಡಿಮೆ ಮಾಡುತ್ತಿದೆ ಮತ್ತು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಗೊಂದಲವನ್ನುಂಟುಮಾಡುತ್ತಿದೆ. ಒಟ್ಟಾರೆಯಾಗಿ, ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ನಾವೀನ್ಯತೆಗಿಂತ ಅಧಿಕ ಉತ್ಪಾದನೆಯ ಸಮಸ್ಯೆ ಹೆಚ್ಚು ಪ್ರಬಲವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಇದು ವಿಶ್ವ ಮೊಬೈಲ್ ಲೋಕದಲ್ಲಿ ಹೆಚ್ಚಿನ ಮಾತಾಗಿದೆ.

ಕಂಪನಿಗಳು "ಸುಸ್ಥಿರತೆ" ಬಗ್ಗೆ ಮಾತನಾಡುತ್ತಿವೆಯಾದರೂ, ಅನಗತ್ಯವಾಗಿ ಹೊಸ ಸಾಧನಗಳನ್ನು ನಿರಂತರವಾಗಿ ಬಿಡುಗಡೆ ಮಾಡುವುದು ಅವರ ಈ ಹೇಳಿಕೆಗಳಿಗೆ ವಿರುದ್ಧವಾಗಿದೆ. ನಿಜವಾದ ಸುಸ್ಥಿರತೆ ಎಂದರೆ "ಸಂಯಮ"ವನ್ನು ಅಳವಡಿಸಿಕೊಳ್ಳುವುದು. ಮರುಬಳಕೆಯ ವಸ್ತುಗಳನ್ನು ಬಳಸುವುದಕ್ಕಿಂತಲೂ, ಹೊಸ ಉತ್ಪನ್ನಗಳನ್ನು ಅನಗತ್ಯವಾಗಿ ಪ್ರಾರಂಭಿಸುವುದನ್ನು ನಿಲ್ಲಿಸುವುದು ಹೆಚ್ಚು ಪರಿಸರ ಸ್ನೇಹಿಯಾಗಿದೆ ಎಂದು ಪೀ ಒತ್ತಿ ಹೇಳುತ್ತಾರೆ. ಅನಗತ್ಯ ಬಿಡುಗಡೆಗಳು ಕೇವಲ ಇ-ತ್ಯಾಜ್ಯವನ್ನು ಹೆಚ್ಚಿಸುವುದಲ್ಲದೆ, ಹಳೆಯ ಸಾಧನಗಳಿಗೆ ಸಾಫ್ಟ್‌ವೇರ್ ಬೆಂಬಲವನ್ನು ಕಡಿಮೆ ಮಾಡುತ್ತದೆ ಎಂದು ಒತ್ತಿ ಹೇಳಿದ್ದಾರೆ.

'ನಥಿಂಗ್ ಫೋನ್ 3' ಆಗಮನಕ್ಕೆ 2 ವರ್ಷ ಏಕೆ?..'ಕಾರ್ಲ್ ಪೀ' ಅವರ ಹೇಳಿಕೆ ವೈರಲ್!

ಕಂಪನಿಗಳು ತಮ್ಮ ಸಂಪನ್ಮೂಲಗಳನ್ನು ಹೊಸ ಮಾದರಿಗಳ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್‌ಗೆ ಹರಿಸುತ್ತವೆ. ಇದು ಗ್ರಾಹಕರು ಹೊಸ ಫೋನ್‌ಗಳನ್ನು ಖರೀದಿಸಲು ಒತ್ತಾಯಿಸುವ ಒಂದು ಬಲವಂತದ ಅಪ್‌ಗ್ರೇಡ್ ಚಕ್ರವನ್ನು ಸೃಷ್ಟಿಸುತ್ತದೆ. ಇದರಿಂದ ಹಳೆಯ ಸಾಧನಗಳಿಗೆ ಸಾಫ್ಟ್‌ವೇರ್ ಬೆಂಬಲವನ್ನು ಕಡಿಮೆ ಮಾಡುತ್ತದೆ ಎಂದು ಕಾರ್ಲ್‌ಪೀ ಅಭಿಪ್ರಾಯಪಟ್ಟಿದ್ದಾರೆ. ಈ ಸತ್ಯವು ಅವರ ಒಂದು ನಿರ್ಣಾಯಕ ನಿರ್ಧಾರಕ್ಕೆ ಸಹ ಕಾರಣವಾಗಿದೆ. ಪ್ರತಿ ವರ್ಷ ಹೊಸ ಫೋನ್ ಬಿಡುಗಡೆ ಮಾಡುವುದು ನಿಜವಾಗಿಯೂ ಅಗತ್ಯವಿಲ್ಲ ಎಂಬ ಸಮರ್ಥನೆಯ ಜೊತೆಗೆ ನಥಿಂಗ್ ಫೋನ್ (3) ಪ್ರಾರಂಭಿಸಿರುವ ಬಗ್ಗೆ ತಿಳಿಸಿದ್ದಾರೆ.

ನಥಿಂಗ್ ಫೋನ್ (3) ಗಾಗಿ ಎರಡು ವರ್ಷಗಳ ಅಭಿವೃದ್ಧಿ ಚಕ್ರವು ಕೇವಲ ಒಂದು ಸ್ಮಾರ್ಟ್ ಉತ್ಪನ್ನ ನಿರ್ಧಾರವಲ್ಲ. ಇದು 2025 ರಲ್ಲಿ "ನಾವೀನ್ಯತೆ" ಎಂದರೆ ಏನು ಎಂಬುದರ ಕುರಿತು ಆಳವಾದ ಸಂಭಾಷಣೆಯನ್ನು ಪ್ರಾರಂಭಿಸುತ್ತದೆ. ನಥಿಂಗ್‌ನ ಈ ವಿಧಾನವು ಹೆಚ್ಚು ಸಮರ್ಥನೀಯ ಮತ್ತು ಪ್ರಾಮಾಣಿಕವಾಗಿದೆ, ಇದು ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಅಪರೂಪದ ಪ್ರವೃತ್ತಿಯಾಗಿದೆ. ಫೋನ್ (3) ವಿನ್ಯಾಸದ ಸ್ಥಿರತೆಯನ್ನು ಹೊಸ ಆಲೋಚನೆಗಳೊಂದಿಗೆ ಸಮತೋಲನಗೊಳಿಸುತ್ತದೆ, ಆದರೆ ಈ ಆಲೋಚನೆಗಳು ನಿಜವಾಗಿಯೂ ಮೌಲ್ಯಯುತವಾದಾಗ ಮಾತ್ರ ಅವುಗಳನ್ನು ಕಾರ್ಯಗತಗೊಳಿಸುತ್ತದೆ.

ಕಾರ್ಲ್ ಪೀ ಅವರ ಈ ಚಿಂತನೆಗಳು, ವೇಗದ ಓಟದಲ್ಲಿರುವ ಸ್ಮಾರ್ಟ್‌ಫೋನ್ ಉದ್ಯಮಕ್ಕೆ ಒಂದು ಹೊಸ ದಿಕ್ಕನ್ನು ತೋರಿಸುತ್ತಿವೆ. ನಾವು ನಾವೀನ್ಯತೆಯನ್ನು ವೇಗವಾದ ಬಿಡುಗಡೆಗಳಲ್ಲಿ ಹುಡುಕುವ ಬದಲು, ಗುಣಮಟ್ಟ, ಬಾಳಿಕೆ ಮತ್ತು ಸುಸ್ಥಿರತೆಯಲ್ಲಿ ಹುಡುಕಬೇಕಿದೆ. ಅನಗತ್ಯ ಇ-ತ್ಯಾಜ್ಯದ ಸಮಸ್ಯೆಗೆ ನಥಿಂಗ್‌ನ ಈ ನಿಧಾನಗತಿಯ ಹೆಜ್ಜೆ ಒಂದು ಪರಿಹಾರ ನೀಡುತ್ತದೆ. ನಥಿಂಗ್‌ನ ಈ ವಿಧಾನವು, ತಂತ್ರಜ್ಞಾನ ಕಂಪನಿಗಳು "ನಾವೀನ್ಯತೆ" ಮತ್ತು "ಪ್ರಗತಿ" ಯನ್ನು ಹೇಗೆ ವ್ಯಾಖ್ಯಾನಿಸುತ್ತವೆ ಎಂಬುದನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Carl Pei, CEO and co-founder of Nothing, discusses the reasons behind the two-year timeline for the launch of the upcoming Nothing Phone (3).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+