Home
ಸುದ್ದಿಜಾಲ

ಟೆಕ್ಸ್ಚರ್ಡ್ ಬಟನ್ ಹೊಂದಿರುವ ಹೊಸ Nothing Phone 3 ವಿನ್ಯಾಸ ಟೀಸ್!

ಇದೇ ಜುಲೈನಲ್ಲಿ ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಬಹುನಿರೀಕ್ಷಿತ Nothing Phone 3 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಕಂಪೆನಿಯು ಇನ್ನೂ ಅಧಿಕೃತ ನಿಖರವಾದ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಕಾರ್ಲ್ ಪೀ ನೇತೃತ್ವದಲ್ಲಿ, ಈ ಮುಂಬರುವ ಹ್ಯಾಂಡ್‌ಸೆಟ್ ತಮ್ಮ ಮೊದಲ "ನಿಜವಾದ ಫ್ಲ್ಯಾಗ್‌ಶಿಪ್" ಆಗಿರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೆ, ಕಾರ್ಲ್‌ ಪೀ ಅವರು ಈ ಹಿಂದೆ ಸ್ಮಾರ್ಟ್‌ಫೋನ್‌ನ ಬೆಲೆಯ ಸುಳಿವನ್ನು ಸಹ ನೀಡಿದ್ದರು. ಇದೀಗ ಬಿಡುಗಡೆಯಾಗಿರುವ ಹೊಸ ಟೀಸರ್‌ನಲ್ಲಿ, Nothing Phone 2 ಮತ್ತು Nothing Phone 1 ಹ್ಯಾಂಡ್‌ಸೆಟ್‌ಗಳಂತೆ, Nothing Phone 3 ಸ್ಮಾರ್ಟ್‌ಫೋನ್ ಕೂಡ ವಿಶಿಷ್ಟವಾದ ಗ್ಲಿಫ್ ಇಂಟರ್‌ಫೇಸ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

Nothing Phone 3 ವಿನ್ಯಾಸದ ಟೀಸರ್ ಬಹಿರಂಗ
ಹೌದು, Nothing ಕಂಪನಿಯು ಇತ್ತೀಚೆಗೆ X ಪೋಸ್ಟ್‌ನಲ್ಲಿ Nothing Phone 3 ಫೋನಿನ ವಿನ್ಯಾಸ ಟೀಸರ್ ಅನ್ನು ಹಂಚಿಕೊಂಡಿದೆ. ಈ ಟೀಸರ್ ಫೋನ್‌ನ ಹಿಂದಿನ ಫಲಕದ ಒಂದು ಭಾಗವನ್ನು ತೋರಿಸುತ್ತದೆ, ಇದು ಡ್ಯುಯಲ್-ಟೋನ್ ಫಿನಿಶ್‌ನಲ್ಲಿ ಕಾಣಿಸಿಕೊಂಡಿದೆ. ಇದು ಏಪ್ರಿಲ್‌ನಲ್ಲಿ ಭಾರತದಲ್ಲಿ ಅನಾವರಣಗೊಂಡ Nothing ಉಪ-ಬ್ರಾಂಡ್ CMF Phone 2 Pro ನ ಕಿತ್ತಳೆ ಮತ್ತು ಬಿಳಿ ಆಯ್ಕೆಗಳನ್ನು ಹೋಲುತ್ತದೆ. ಟೀಸರ್‌ನಲ್ಲಿ, ಒಂದು ಬಟನ್ ತರಹದ ವೈಶಿಷ್ಟ್ಯದೊಂದಿಗೆ ಟೆಕ್ಸ್ಚರ್ಡ್ ಪ್ರದೇಶವನ್ನು ಸಹ ಕಾಣಬಹುದು. ಇದು ನಿಜವಾದ ಬಟನ್ ಆಗಿದೆಯೇ ಅಥವಾ ಕೇವಲ ವಿನ್ಯಾಸದ ಅಂಶವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದರ ವಿನ್ಯಾಸವು ಬ್ರೈಲ್ ಭಾಷೆಯನ್ನು ನೆನಪಿಸುತ್ತದೆ, ಇದು ಹೆಚ್ಚು ಸುಲಭವಾಗಿ ಬಳಸಬಹುದಾದ ವಿನ್ಯಾಸದ ಬಗ್ಗೆ ಸುಳಿವು ನೀಡಬಹುದು.

Nothing Phone 3 ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ
Nothing ಕಂಪನಿಯು Nothing Phone 3 "ಮೊದಲ ನಿಜವಾದ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್" ಆಗಿರುತ್ತದೆ ಮತ್ತು "ಪ್ರೀಮಿಯಂ ಸಾಮಗ್ರಿಗಳನ್ನು" ಒಳಗೊಂಡಿರುತ್ತದೆ ಎಂದು ಈ ಹಿಂದೆಯೇ ಘೋಷಿಸಿದೆ. ಈ ಹ್ಯಾಂಡ್‌ಸೆಟ್ ಪ್ರಮುಖ ಸಾಫ್ಟ್‌ವೇರ್ ಮತ್ತು ಕಾರ್ಯಕ್ಷಮತೆಯ ಅಪ್‌ಗ್ರೇಡ್‌ಗಳೊಂದಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಇದು ಸ್ನಾಪ್‌ಡ್ರಾಗನ್ 8 ಎಲೈಟ್, ಮೀಡಿಯಾ ಟೆಕ್ ಡೈಮೆನ್ಸಿಟಿ 9400, ಅಥವಾ ಮೀಡಿಯಾ ಟೆಕ್ ಡೈಮೆನ್ಸಿಟಿ 9400+ SoC ಅನ್ನು ಪಡೆಯಬಹುದು. ಬ್ಯಾಟರಿ ವಿಭಾಗದಲ್ಲಿ 5,000mAh ಗಿಂತ ದೊಡ್ಡ ಬ್ಯಾಟರಿ ಮತ್ತು ಕ್ಯಾಮೆರಾ ವಿಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ದೊಡ್ಡ ಪ್ರಾಥಮಿಕ ಸಂವೇದಕ ಹಾಗೂ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಅನ್ನು ಸಹ ಪಡೆಯಬಹುದು.ಫೋನ್ ಬಿಡುಗಡೆಯ ಸಮೀಪದಲ್ಲಿ ಹೆಚ್ಚಿನ ವಿವರಗಳು ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ಟೆಕ್ಸ್ಚರ್ಡ್ ಬಟನ್ ಹೊಂದಿರುವ ಹೊಸ Nothing Phone 3 ವಿನ್ಯಾಸ ಟೀಸ್!

Nothing Phone 3 ನಿರೀಕ್ಷಿತ ಬೆಲೆ
ಕಾರ್ಲ್ ಪೀ ಅವರು ಈ ಹಿಂದೆ Nothing Phone 3 ರ ಬೆಲೆಯ ಬಗ್ಗೆ ಸುಳಿವು ನೀಡಿದ್ದರು. ಬಿಡುಗಡೆಯ ಸಮಯದಲ್ಲಿ ಇದರ ಬೆಲೆ GBP 800 (ಸುಮಾರು ರೂ. 90,000) ಆಗಿರಲಿದೆ ಎಂದು ಹೇಳಿದ್ದರು. ಆದರೆ, ಇತ್ತೀಚಿನ ವರದಿಗಳು ಭಾರತದಲ್ಲಿ Nothing Phone 3 ಸುಮಾರು ರೂ. 55,000 ವೆಚ್ಚವಾಗಬಹುದು ಎಂದು ಸೂಚಿಸುತ್ತವೆ. ಹೋಲಿಕೆಗಾಗಿ ನೋಡುವುದಾದರೆ, ಈ ಹಿಂದಿನ ಮಾದರಿ Nothing Phone 2 ಫೋನಿಮ ಮೂಲ 8GB + 128GB ಮಾದರಿಯು ಬಿಡುಗಡೆಯಾದ ಸಮಯದಲ್ಲಿ ರೂ. 44,999 ವೆಚ್ಚವಾಗಿತ್ತು. Nothing Phone 3 ಕೂಡ ಇದೇ ಬೆಲೆ ವಿಭಾಗದಲ್ಲಿ ಬರಬಹುದು ಎಂಬುದು ನಮ್ಮ ಅಭಿಪ್ರಾಯ. ಹಾಗಾದರೆ, Nothing Phone 3 ಕುರಿತು ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Nothing has recently confirmed the highly anticipated launch of the Nothing Phone (3) in July 2025. They have now released the first teaser, featuring..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+