Home
ಸುದ್ದಿಜಾಲ

Nothing; ಶೀಘ್ರದಲ್ಲೇ ಬರಲಿದೆ ನಥಿಂಗ್ ಸಬ್ ಬ್ರಾಂಡ್ CMF ಫೋನ್-1 ಸ್ಮಾರ್ಟ್‌ಫೋನ್ ! ಏನೆಲ್ಲಾ ವೈಶಿಷ್ಟ್ಯಗಳಿರಲಿವೆ ?

ಪ್ರಸ್ತುತ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರ ಬಳಗ ಹೊಂದಿರುವ ನಥಿಂಗ್ (Nothing) ಕಂಪನಿ ತನ್ನ ಸಬ್‌ಬ್ರಾಂಡ್‌ ಆಗಿ CMF Phone-1 (ಸಿಎಂಎಸ್‌ ಫೋನ್-1) ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಕುರಿತು X ನಲ್ಲಿ ಟೀಸರ್ ಹಂಚಿಕೊಂಡಿದೆ. ಇದು ನಥಿಂಗ್ ಸಬ್ ಬ್ರಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ. CMF ಸ್ಮಾರ್ಟ್‌ಫೋನ್ ಕುರಿತು ನಥಿಂಗ್ ಅಧಿಕೃತವಾಗಿ ಘೋಷಿಸಿದೆ ಮತ್ತು ಮುಂಬರುವ ಹ್ಯಾಂಡ್‌ಸೆಟ್‌ನ ಬಿಡುಗಡೆ ಕುರಿತು ದೃಢಪಡಿಸಿದೆ. ನಥಿಂಗ್ ಮುಂಬರಲಿರುವ ಸ್ಮಾರ್ಟ್‌ಫೋನ್‌ನ ಪ್ರಮುಖ ವಿನ್ಯಾಸ ಅಂಶಗಳ ಕುರಿತಾದ ಮಾಹಿತಿಯನ್ನು ಸಹ ಬಿಡುಗಡೆಗೊಳಿಸಿದ್ದು, ಈ ಲೇಖನದಲ್ಲಿ ನಥಿಂಗ್ CMF ಫೋನ್‌- 1 ಕುರಿತು ಬಿಡುಗಡೆಯಾಗಿರುವ ಅಂಶಗಳನ್ನು ತಿಳಿಯೋಣ ಬನ್ನಿ.

CMF ಯುಕೆ ಆಧಾರಿತ ಸ್ಟಾರ್ಟ್‌ಅಪ್‌ನ ಉಪ ಬ್ರ್ಯಾಂಡ್ ಆಗಿದ್ದು, OnePlus ಸಹ ಸಂಸ್ಥಾಪಕ ಕಾರ್ಲ್ ಪೀ ನೇತೃತ್ವದಲ್ಲಿ ನೂತನ ವಿನ್ಯಾಸಗಳ ಮೇಲೆ ಕೇಂದ್ರೀಕರಿಸಿದೆ. ಹಿಂದಿನ ವರದಿಗಳ ಪ್ರಕಾರ CMF ಫೋನ್ 1 ನಥಿಂಗ್ ಫೋನ್ 2a ನ ಮರುಬ್ರಾಂಡ್ ಆಗಿರಬಹುದು ಎಂದು ಹೇಳಲಾಗಿದೆ. ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್‌ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಪರಿಚಯಿಸಿದೆ. ಆದರೂ ಮುಂಬರುವ CMF ಸ್ಮಾರ್ಟ್‌ಫೋನ್ ಗಮನಾರ್ಹ ಬದಲಾವಣೆಯೊಂದಿಗೆ ಬರುವ ನಿರೀಕ್ಷೆ ಇದೆ.

ಶೀಘ್ರದಲ್ಲೇ ಬರಲಿದೆ ನಥಿಂಗ್ ಸಬ್ ಬ್ರಾಂಡ್ CMF ಫೋನ್-1 ಸ್ಮಾರ್ಟ್‌ಫೋನ್!

ನಥಿಂಗ್ ಸಂಸ್ಥೆ ಹಂಚಿಕೊಂಡಿರುವ X ಪೋಸ್ಟ್‌ ಪ್ರಕಾರ, CMF ಬೈ ನಥಿಂಗ್ ಅಧಿಕೃತವಾಗಿ 'ಶೀಘ್ರದಲ್ಲೇ ಬರಲಿದೆ' ಎಂದು ದೃಢಪಡಿಸಿದೆ. ಗಮನಾರ್ಹ ಅಂಶವೆಂದರೆ CMF ಫೋನ್ 1ರ ಹಿಂದಿನ ಮಾಹಿತಿಯ ಪ್ರಕಾರ ಭಾರತದಲ್ಲಿ ಸುಮಾರು 12,000 ರೂ. ಮೂಲ ಬೆಲೆ ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ ಭಾರತದಲ್ಲಿ ಹ್ಯಾಂಡ್‌ಸೆಟ್ ಬಿಡುಗಡೆ ಕುರಿತು ಸ್ಮಾರ್ಟ್‌ಫೋನ್ ತಯಾರಕರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

CMF ಫೋನ್ 1 ವಿನ್ಯಾಸ:

ಹ್ಯಾಂಡ್‌ಸೆಟ್ ಕುರಿತು ಯಾವುದೇ ಇತರ ವಿವರಗಳನ್ನು ಕಂಪನಿ ದೃಢೀಕರಿಸಲಾಗಿಲ್ಲವಾದರೂ, Nothing ಕಂಪನಿಯು x ಪೋಸ್ಟ್‌ನಲ್ಲಿ ಹಂಚಿಕೊಂಡಿರುವ CMF ಫೋನ್ 1 ರ ಟೀಸರ್‌ ಆಧಾರದಲ್ಲಿ ನೋಡುವುದಾದರೆ, ಇದು CMF ಬಡ್ಸ್ ಚಾರ್ಜಿಂಗ್ ಕೇಸ್‌ನಲ್ಲಿ ಕಂಡುಬರುವ ರೀತಿಯಲ್ಲಿಯೇ ಒಂದು ಬದಿಯಲ್ಲಿ ಇರಿಸಲಾಗಿರುವ ವೃತ್ತಾಕಾರದ ಡಯಲ್‌ನಂತೆ ತೋರುವ ಕಿತ್ತಳೆ ಬಣ್ಣದ ಫಾಕ್ಸ್ ಲೆದರ್ ಪ್ಯಾನೆಲ್ ಅನ್ನು ಹೊಂದಿರುವುದಾಗಿ ಬಹಿರಗಪಡಿಸಿದೆ.

TWS ಇಯರ್‌ಫೋನ್ ಕೇಸ್‌ನಲ್ಲಿರುವ ಡಯಲ್ ಲ್ಯಾನ್ಯಾರ್ಡ್ ಹೋಲ್ಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಹ್ಯಾಂಡ್‌ಸೆಟ್‌ನಲ್ಲಿ ಡಯಲ್ ಇತರೆ ಉದ್ದೇಶಗಳನ್ನು ಪೂರೈಸುತ್ತದೆಯೇ ಎಂಬುದು ಇನ್ನೂ ತಿಳಿಸಿಲ್ಲ. ಗಮನಾರ್ಹವಾದ ಅಂಶವೆಂದರೆ, ಫೋನ್ 2a ಸೇರಿದಂತೆ ಎಲ್ಲಾ ನಥಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಗ್ಲಿಫ್ ಇಂಟರ್ಫೇಸ್ CMF ಫೋನ್ 1 ಟೀಸರ್‌ನಲ್ಲಿ ಅಥವಾ ಲೀಕ್‌ ಆಗಿರುವ ಮಾಹಿತಿಯಲ್ಲಿ ಕಂಡು ಬಂದಿಲ್ಲ.

ವದಂತಿಯ ಆಧಾರದಲ್ಲಿ CMF ಫೋನ್ 1 ವಿಶೇಷತೆಗಳು:

CMF ಫೋನ್ 1 ಹಿಂದೆ ಬ್ಯಾಕ್‌ಸೈಡ್‌ನಲ್ಲಿ ಬೆಜೆಲ್‌ಗಳನ್ನು ಹೊಂದಿರಬಹುದು ಹಾಗೂ 6.7 ಇಂಚಿನ 120Hz OLED ಡಿಸ್‌ಪ್ಲೇ ಹೊಂದಿರಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಯಿಂದ 6GB RAM ನೊಂದಿಗೆ ಜೋಡಿಸಲ್ಪಡುವ ನಿರೀಕ್ಷೆಯಿದೆ. ಫೋನ್ 128GB ಮತ್ತು 256GB UFS 2.2 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಸಹ ಬೆಂಬಲಿಸುವ ಸಾಧ್ಯತೆಯಿದೆ. ಇದು ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲದ NothingOS 2.6.0 ಆವೃತ್ತಿಯೊಂದಿಗೆ ಬರುವ ನಿರೀಕ್ಷೆಯಿದೆ.

ಕ್ಯಾಮೆರಾಕ್ಕಾಗಿ CMF ಫೋನ್ 1ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50MP ಪ್ರಾಥಮಿಕ ಸೆನ್ಸಾರ್‌ ಮತ್ತೊಂದು 50 MP ವೈಡ್ ಆಂಗಲ್ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಯಿದೆ. ಹ್ಯಾಂಡ್‌ಸೆಟ್‌ನ ಮುಂಭಾಗದಲ್ಲಿ 16MP ಸೆನ್ಸಾರ್‌ ಕ್ಯಾಮರಾ ಹೊಂದಿರುವ ನಿರೀಕ್ಷೆಯಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ.

Best Mobiles in India

English summary
Nothing Company has shared a teaser on X post about the upcoming launch of CMF Phone-1 as its sub-brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+