ತುಟಿಯ ಸನ್ಹೆ ಮೂಲಕ ಭಾವನೆ ಅರಿಯುವ ಕಂಪ್ಯೂಟರ್‌

Posted By: Staff
ತುಟಿಯ ಸನ್ಹೆ ಮೂಲಕ ಭಾವನೆ ಅರಿಯುವ ಕಂಪ್ಯೂಟರ್‌

ತುಟಿಯ ಸನ್ಹೆಗಳನ್ನು ಅರಿತು ಮಾನವನ ಭಾವನೆಗಳನ್ನು ತಿಳಿಯಬಲ್ಲ ಕಂಪ್ಯೂಟರ್‌ ವೊಂದನ್ನು ಅಭಿವೃಧಿ ಪಡಿಸಲಾಗಿದೆ. ಇದರಿಂದಾಗೀ ಮಾನವ ಹಾಗೂ ಕಂಪ್ಯೂಟರ್‌ ನಡುವಿನ ಪರಸ್ಪರ ಪ್ರತಿಕ್ರಿಯೆ ಹೆಚ್ಚಾಗಲಿದ್ದು ಹಾಗೂ ಅಂಗವಿಕಲರ ಧ್ವನಿಯನ್ನು ಹೆಚ್ಚು ನಿಖರ ಹಾಗೂ ಸ್ಪಷ್ಟವಾಗಿ ಗುರ್ತಿಸಲು ಸಹಾಯಕಾರಿ ಯಾಗಿದೆ.

ಮಲೇಷಿಯಾದ ಸೆಲಂಗೂರ್‌ನಲ್ಲಿರುವ ಮಣಿಪಾಲ್‌ ಅಂತರ್ರಾಷ್ಟ್ರೀಯ ವಿಶ್ವವಿದ್ಯಾಲಯದ ಕಾರ್ತಿಗೇಯನ್‌ ಮುತ್ತುಕರಪ್ಪನ್‌ ಹಾಗೂ ಸಹಾಯಕರುಗಳು ಸೇರಿ ಈ ಕಂಪ್ಯೂಟರ್‌ನ್ನು ಅಭಿವೃಧಿ ಪಡಿಸಿದ್ದಾರೆ. ಜೆನೆಟಿಕ್ಸ್ ಆಲ್ಗೊರಿದಮ್‌ ಬಳಸಿ ವಿವಿಧ ಭಾವನೆಗಳನ್ನು ಹೊರಹಾಕುವ ಮಾನವನ ತುಟಿಯ ಸನ್ಹೆಗಳನ್ನು ಕರಾರುವಾಕ್ಕಾಗಿ ಅರಿತು ಭಾವನೆಗಳನ್ನು ಅರಿಯಬಲ್ಲ ಸಿಸ್ಟಂ ಅಭಿವೃಧಿ ಪಡಿಸಿದ್ದಾರೆ. ಇದಲ್ಲದೆ ಆಗ್ನೇಯ ಏಷ್ಯಾದ ಪ್ರತಿಯೊಬ್ಬ ವ್ಯಕ್ತಿಯ ಚಿತ್ರಗಳನ್ನು ಬಳಸಿ ಮಾನವನ ಪ್ರಮುಖ ಆರು ಸಾಮಾನ್ಯ ಭಾವನೆಗಳಾದ ಸಂತೊಷ, ದುಃಖ, ಭಯ, ಕೊಪ, ಅಸಹ್ಯ ಹಾಗೂ ಆಶ್ಚರ್ಯ ಗಳನ್ನು ಗುರ್ತಿಸುವಂತೆ ಕಂಪ್ಯೂಟರ್‌ಗೆ ತರಬೇತಿ ನೀಡಿದ್ದಾರೆ.

ಆಲ್ಗೊರಿದಮ್‌ಗಳು ಕೆಳ ಹಾಗೂ ಮೇಲ್ಭಾಗದ ತುಟಿಗಳನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳವ ಸಾಮರ್ತ್ಯ ಹೊಂದಿದೆ ಎಂದು ಅಂತರ್ರಾಷ್ಟ್ರೀಯ ಆರ್ಟಿಫಿಶಿಯಲ್‌ ಇನ್‌ಟೆಲಿಜೆನ್ಸ್‌ ಹಾಗೂ ಸಾಪ್ಟ್‌ ಕಂಪ್ಯೂಟಿಂಗ್‌ ಜರ್‌ನಲ್‌ ವರದಿಮಾಡಿದೆ. ಕಂಪ್ಯೂಟರ್‌ ಹಾಗೂ ಮಾನವನ ನಡುವಿನ ಪ್ರತಿಕ್ರಿಯೆಗಳನ್ನು ಬಲಪಡಿವತ್ತ ಸಾಕಷ್ಟು ಬೆಳವಣಿಗೆಗಲಾಗಿದ್ದು ಅದರಲ್ಲಿಯೂ ಮುಖಭಾವಗಳ ಮೂಲಕ ಭಾವನೆಯನ್ನು ಅರಿಯಬಲ್ಲ ಕಂಪ್ಯೂಟರ್‌ ಅಭಿವೃಧಿ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಮಣಿಪಾಲ್‌ನ ತಂಡ ತಿಳಿಸಿದೆ.

ಈ ಮೊದಲು ಕಂಪ್ಯೂಟರ್‌ನ ಪರದೆಯ ಮೇಲೆ ಮಾನವನ ಮುಖದ ಚೆಹರೆಗಳನ್ನು ಅಳವಡಿಸಿ ಭಾವನೆಗಳನ್ನು ಅರಿಯುವ ಹಾಗೂ ತಿಳಿದುಕೊಳ್ಳುವ ಕಂಪ್ಯೂಟರ್‌ ಕಂಡುಹಿಡಿಯಲಾಗಿತ್ತು. ಆದರೇ ಈ ಕಂಪ್ಯೂಟರ್‌ನಲ್ಲಿ ತುಟಿ ಸನ್ಹೆಗಳ ಮೂಲಕ ಭಾವನೆ ಅರಿಯುವುದು ಸವಾಲಿ ಪ್ರಶ್ನೆಯಾಗಿತ್ತು. ಅಂದಹಾಗೇ ತಂಡವು ಆಲ್ಗೊರಿದಮ್‌ ಬಳಸಿ ಸಿದ್ದಪಡಿಸಿರುವ ಕಂಪ್ಯೂಟರ್‌ ಮಾನವನ ಅತಿ ಸಾಮಾನ್ಯವಾದ 7 ಮುಖ ಭಾವನೆಗಳನ್ನು ಗುರ್ತಿಸುವಲ್ಲಿ ಯಶಸ್ವಿಯಾಗಿದೆ. ಸಂಶೋಧಕರುಗಳ ಪ್ರಕಾರ ಈ ಕಂಪ್ಯೂಟರ್‌ನ ಸಹಾಯದಿಂದ ಮಾತಿನ ಅಂಗವೈಕಲ್ಯತೆ ಹೋದಿರುವ ವ್ಯಕ್ತಿಗಳು ಹೆಚ್ಚು ನಿಖರವಾಗಿ ಸಂವಹನ ನಡೆಸಲು ಸಹಾಯಕವಾಗುತ್ತದೆ ಎಂದು ತಿಸಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot