Subscribe to Gizbot

ಇನ್ನು ವಾಟ್ಸಾಪ್ ಪ್ರವೇಶಿಸಿ ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ

Written By:

ವಾಟ್ಸಾಪ್ ತನ್ನ ಅಪ್ಲಿಕೇಶನ್‌ನ 'ವೆಬ್ ಬ್ರೌಸರ್' ಆವೃತ್ತಿಯನ್ನು ಹೊರತಂದಿದ್ದು ಪ್ರಥಮ ಬಾರಿಗೆ ವೆಬ್ ಬ್ರೌಸರ್‌ನಲ್ಲಿ ಕೂಡ ವಾಟ್ಸಾಪ್ ಪ್ರವೇಶಿಸಬಹುದಾಗಿದೆ. ಎಂದು ಕಂಪೆನಿ ತನ್ನ ಅಧಿಕೃತ ಬ್ಲಾಗ್‌ನಲ್ಲಿ ತಿಳಿಸಿದೆ.

(ಇದನ್ನೂ ಓದಿ: ಕರ್ನಾಟಕದ ಜನಪ್ರಿಯ ವ್ಯಕ್ತಿಗಳ ಟ್ವಿಟ್ಟರ್ ಖಾತೆ ಒಳನೋಟ)

ಇನ್ನು ವಾಟ್ಸಾಪ್ ಪ್ರವೇಶಿಸಿ ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ

ವಾಟ್ಸಾಪ್‌ನ ವೆಬ್ ಕ್ಲೈಂಟ್ ಎನ್ನುವುದು ಬಳಕೆದಾರರ ಫೋನ್‌ನ ವಿಸ್ತರಣೆಯಾಗಿದ್ದು ಈ ವೆಬ್ ಬ್ರೌಸರ್ ಬಳಕೆದಾರರ ಮೊಬೈಲ್‌ನಿಂದ ಸಂವಾದಗಳು ಮತ್ತು ಸಂದೇಶಗಳನ್ನು ಪ್ರದರ್ಶಿಸುತ್ತದೆ. ಬಳಕೆದಾರರ ಫೋನ್‌ನಲ್ಲಿ ಎಲ್ಲಾ ಸಂದೇಶಗಳು ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

(ಇದನ್ನೂ ಓದಿ: ಮೈಕ್ರೋಸಾಫ್ಟ್ ವಿಂಡೋಸ್ 10 ಅತ್ಯದ್ಭುತಗಳೇನು ಗೊತ್ತೇ?)

ಇನ್ನು ವಾಟ್ಸಾಪ್ ಪ್ರವೇಶಿಸಿ ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ

ನಿಮ್ ವೆಬ್ ಬ್ರೌಸರ್ ಅನ್ನು ವಾಟ್ಸಾಪ್ ಕ್ಲೈಂಟ್‌ಗೆ ಸಂಪರ್ಕಪಡಿಸಲು, ಬಳಕೆದಾರರು ವೆಬ್ ಅನ್ನು ತೆರೆಯಬೇಕು. ಅಂದರೆ web.whatsapp.com ಅನ್ನು ತನ್ನ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ತೆರೆಯಬೇಕು. ಇಲ್ಲಿ ನಿಮಗೆ ಕ್ಯುಆರ್ ಕೋಡ್ ದೊರೆಯುತ್ತದೆ ವಾಟ್ಸಾಪ್‌ನ ಒಳಗೆ ಈ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಮತ್ತು ಇಲ್ಲಿಂದ ನಿಮಗೆ ಮುಂದುವರಿಯಬಹುದಾಗಿದೆ. ವಾಟ್ಸಾಪ್ ವೆಬ್ ಕ್ಲೈಂಟ್ ಜೊತೆಗೆ ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಅನ್ನು ಇದೀಗ ನೀವು ಪೇರ್ ಮಾಡಬಹುದಾಗಿದೆ.

ಇನ್ನು ವಾಟ್ಸಾಪ್ ಪ್ರವೇಶಿಸಿ ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ

ವಾಟ್ಸಾಪ್ ವೆಬ್ ಕ್ಲೈಂಟ್ ಕೆಲಸ ಮಾಡಲು ಬಳಕೆದಾರರ ಫೋನ್ ಇಂಟರ್ನೆಟ್ ಸಂಪರ್ಕದಲ್ಲಿರುವುದು ಅಗತ್ಯವಾಗಿದೆ. ವಾಟ್ಸಾಪ್‌ನ ಅತ್ಯಾಧುನಿಕ ಫೀಚರ್ ಅನ್ನು ಪ್ರವೇಶಿಸುವುದು ಅತೀ ಅಗತ್ಯವಾಗಿದೆ. ಆಪಲ್ ಪ್ಲಾಟ್‌ಫಾರ್ಮ್‌ನ ಸೀಮಿತ ನಿರ್ದೇಶನಕ್ಕನುಗುಣವಾಗಿ ಐಓಎಸ್ ಬಳಕೆದಾರರಿಗೆ ವೆಬ್ ಕ್ಲೈಂಟ್ ಅನ್ನು ಒದಗಿಸಲಾಗುವುದಿಲ್ಲ ಎಂದು ಬ್ಲಾಗ್ ತಿಳಿಸಿದೆ.

English summary
Today, for the first time, millions of you will have the ability to use WhatsApp on your web browser," WhatsApp's official blog said.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot