ಅಮೆಜಾನ್‌ನಲ್ಲಿ ಬುಕ್ ಮಾಡಿದರೆ ಬರುವುದು 'ಡೆಲಿವರಿ ಬಾಯ್' ಅಲ್ಲ 'ಡೆಲಿವರಿ ಗರ್ಲ್'!!
ಆನ್‌ಲೈನ್ ಶಾಪಿಂಗ್ ಹೆಚ್ಚಿದ ನಂತರ ಡೆಲಿವರಿ ಬಾಯ್ ಎಂಬ ಮಾತೂ ಕೂಡ ಎಲ್ಲರ ಮನೆಮಾತಾಗಿತ್ತು. ಆದರೆ, ಇನ್ಮುಂದೆ 'ಡೆಲಿವರಿ ಬಾಯ್' ಅಲ್ಲದೇ 'ಡೆಲಿವರಿ ಗರ್ಲ್' ಬರುವ ಸಾಧ್ಯತೆ ಹೆಚ್ಚಿದೆ.!!
ಆನ್‌ಲೈನ್ ಶಾಪಿಂಗ್ ಹೆಚ್ಚಿದ ನಂತರ ಡೆಲಿವರಿ ಬಾಯ್ ಎಂಬ ಮಾತೂ ಕೂಡ ಎಲ್ಲರ ಮನೆಮಾತಾಗಿತ್ತು. ಆದರೆ, ಇನ್ಮುಂದೆ 'ಡೆಲಿವರಿ ಬಾಯ್' ಅಲ್ಲದೇ 'ಡೆಲಿವರಿ ಗರ್ಲ್' ಬರುವ ಸಾಧ್ಯತೆ ಹೆಚ್ಚಿದೆ.!! ನೀವು ಚೆನ್ನೈನಲ್ಲಿದ್ದು ಅಮೆಜಾನ್ ಜಾಲತಾಣದಲ್ಲಿ ಉತ್ಪನ್ನವನ್ನು ಖರೀದಿಸಿದರೆ ನಿಮಗೆ ಈಗಲೇ ಈ ಅನುಭವವಾಗುತ್ತದೆ.!!
ಹೌದು, ಪುರುಷರ ಸರಿಸಮಾನವಾಗಿ ಸಂಪೂರ್ಣ ಮಹಿಳೆಯರ ತಂಡವೊಂದು ಆನ್‌ಲೈನ್ ಕೋರಿಯರ್ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸುದ್ದಿ ದೇಶದಾಧ್ಯಂತ ವೈರಲ್ ಆಗಿದೆ. ಪುರುಷರೇ ಮಾಡಬೇಕು ಅನ್ನುವಂತಿದ್ದ ಆನ್‌ಲೈನ್ ಕೋರಿಯರ್ ಸೇವೆ ಕೆಲಸವನ್ನು ಮಹಿಳೆಯರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.!!

ಇನ್ನು ಮಹಿಳಾ ವಿತರಕಿಯರ ಸಂರಕ್ಷಣೆಗಾಗಿ ಸುರಕ್ಷತಾ ನಿಯಮಗಳನ್ನು ಅಮೆಜಾನ್ ಕೂಡ ಜಾರಿಗೊಳಿಸಿದ್ದು, ಮಹಿಳೆಯರ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ.! ಹಾಗಾದರೆ, ಏನಿದು ವರದಿ? ಮಹಿಳೆಯರೇ ಕೂಡಿಕೊಂಡು ಸಾಧಿಸುತ್ತಿರುವುದು ಏನು? ಮಹಿಳೆಯರಿಗೆ ಇದ್ದ ಸವಾಲುಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

11 ಜನ ಮಹಿಳೆಯರ ತಂಡ!!
ಚೆನ್ನೈನ ಅಮೆಜಾನ್ ಕೇಂದ್ರದಲ್ಲಿ 21ರಿಂದ 35 ವಯಸ್ಸಿನ 11 ಜನ ಮಹಿಳೆಯರ ತಂಡವೊಂದು ಪುರುಷರ ಸರಿಸಮಾನವಾಗಿ ಆನ್‌ಲೈನ್ ಕೋರಿಯರ್ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ತಂಡದಲ್ಲಿ 9 ಜನ ವಿವಾಹಿತೆಯರಿದ್ದು, ಎಲ್ಲರೂ ಕೂಡ ಯಾವುದೇ ಅಂಜಿಕೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ.!!

2016ರಲ್ಲಿ ಪ್ರಾರಂಭ!!
2016ರಲ್ಲಿ ಮಹಿಳೆಯರೇ ಇರುವಂಥ ಅಮೆಜಾನ್ ವಿತರಣಾ ತಂಡವನ್ನು ಕಟ್ಟಲಾಯಿತು, ಪ್ರಾರಂಭದಲ್ಲಿ ಇದು ಸವಾಲಾದರೂ ಸಹ 2018ರ ವೇಳೆಗೆ ಉತ್ಪನ್ನಗಳ ವಿತರಣೆ ಮೂರು ಪಟ್ಟು ಏರಿಕೆಯಾಗಿದೆ. ಕೇವಲ ಎರಡು ವರ್ಷದಲ್ಲಿ ಮಹಿಳೆಯರು ಉದ್ಯಮದ ಆಳಗಳನ್ನು ತಿಳಿದುಕೊಂಡಿದ್ದಾರೆ ಎಂದು ಅಮೆಜಾನ್ ಇಂಡಿಯಾದ ಸೇವಾ ವ್ಯವಸ್ಥಾಪಕಿ ಜಮುನಾ ರಾಣಿ ತಿಳಿಸಿದ್ದಾರೆ.

ಯಶಸ್ವಿ ಟಾರ್ಗೆಟ್!!
ಅಮೆಜಾನ್ ಉತ್ಪನ್ನಗಳ ವಿತರಣೆಯಲ್ಲಿ ಸಂಪೂರ್ಣ ಮಹಿಳೆಯರ ತಂಡವಾದರೂ ಕೂಡ ಯಶಸ್ವಿ ಟಾರ್ಗೆಟ್ ರೀಚ್ ಮಾಡುತ್ತಿದ್ದಾರೆ. ದಿನಕ್ಕೆ ಈ ತಂಡ 500 ಪ್ಯಾಕೆಟ್‌ಗಳನ್ನು ಗ್ರಾಹಕರಿಗೆ ವಿತರಿಸುತ್ತದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಯಶಸ್ವಿ ಕಾರ್ಯವನ್ನು ನಡೆಸುತ್ತಾರೆ ಎಂದು ಅಮೆಜಾನ್ ಸೇವಾ ವ್ಯವಸ್ಥಾಪಕಿ ಜಮುನಾ ರಾಣಿ ಹೇಳಿದ್ದಾರೆ.

ಅಮೆಜಾನಿನಿಂದ ಪೆಪ್ಪರ್‌ಸ್ಪ್ರೇ!!
ಸಂಪೂರ್ಣ ಮಹಿಳೆಯರ ತಂಡ ಉತ್ಪನ್ನಗಳ ವಿತರಣೆಗೆ ಮುಂದಾದ್ದರಿಂದ ಅಮೆಜಾನ್ ಕೂಡ ಪ್ರೋತ್ಸಾಹ ನೀಡಿದೆ. ಮಹಿಳೆಯರ ಸಂರಕ್ಷಣೆಗಾಗಿ ಸುರಕ್ಷತಾ ನಿಯಮಗಳನ್ನು ಅಮೆಜಾನ್ ಜಾರಿಗೊಳಿಸಿದೆ.!! ಆದರೆ, ಅಮೆಜಾನ್ ಕಂಪೆನಿ ಎಲ್ಲ ಮಹಿಳೆಯರಿಗೂ ಒದಗಿಸಿರುವ ಪೆಪ್ಪರ್‌ಸ್ಪ್ರೇಯನ್ನು ಬಳಸುವ ಸಂದರ್ಭವೇ ಎದುರಾಗಿಲ್ಲ ಎಂದು ಮಹಿಳಾ ತಂಡ ತಿಳಿಸಿದೆ.!!


ಗ್ರಾಹಕರಿಂದ ಪ್ರೋತ್ಸಾಹ!!
ಸಂಪೂರ್ಣ ಮಹಿಳೆಯರೇ ನಿಭಾಯಿಸುವುದನ್ನು ಕೇಳಿ ತಿಳಿಯುವ ಗ್ರಾಹಕರಿಂದ ಮಹಿಳೆಯರಿಗೆ ಪ್ರೋತ್ಸಾಹ ಸಿಗುತ್ತಿದೆಯಂತೆ. ಮಹಿಳಾ ಗ್ರಾಹಕರೂ ಕೂಡ ಸಂಪೂರ್ಣ ಮಹಿಳೆಯರ ತಂಡ ಉತ್ಪನ್ನಗಳ ವಿತರಣೆಗೆ ನಿಂತಿರುವುದನ್ನು ನೋಡಿ ಅಭಿನಂದಿಸುತ್ತಾರಂತೆ. ಸಮಯ ವಿಳಂಬ ಮಾಡದೇ ನಿಗದಿತ ವಿಳಾಸಕ್ಕೆ ಸರಕು ತಲುಪಿಸಿ ಮೆಚ್ಚುಗೆಯನ್ನು ಸಹ ಪಡೆಯುತ್ತಾರಂತೆ.!!


Click it and Unblock the Notifications