Subscribe to Gizbot

ಶಾಂತಿಯುತ ಧ್ಯಾನಕ್ಕಾಗಿ ಮೆಡಿಟೇಟ್ ಪೀಸ್‌ಫುಲ್ಲಿ ಅಪ್ಲಿಕೇಶನ್

Posted By:

ಶಾಂತಿಯುತ ಧ್ಯಾನವನ್ನು ಮಾಡುವವರಿಗೆ ಮೊಬೈಲ್ ಧ್ವನಿ ಕಿರಿಕಿರಿಯನ್ನು ಉಂಟುಮಾಡುವುದು ಸಾಮಾನ್ಯವಾಗಿದೆ. ಕೆಲವರು ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿರಿಸಿರೆ, ಇನ್ನು ಕೆಲವರು ತಾವೆಲ್ಲಾದರೂ ಅತ್ಯಂತ ಮುಖ್ಯವಾದ ಕರೆಯನ್ನು ಮಿಸ್ ಮಾಡಿಕೊಳ್ಳುತ್ತೇವೆಯೋ ಎಂಬ ಭಯದಲ್ಲಿರುತ್ತಾರೆ. ಇನ್ನು ನಿಮ್ಮ ಈ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿಯೇ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.

ಶಾಂತಿಯುತ ಧ್ಯಾನಕ್ಕಾಗಿ ಮೆಡಿಟೇಟ್ ಪೀಸ್‌ಫುಲ್ಲಿ ಅಪ್ಲಿಕೇಶನ್

ಶಾಂತಿಯುತವಾಗಿ ಧ್ಯಾನಮಾಡಿ (ಮೆಡಿಟೇಟ್ ಪೀಸ್‌ಫುಲ್ಲಿ) ಎಂಬ ಹೊಸ ಅಪ್ಲಿಕೇಶನ್ ಈ ಸಮಸ್ಯೆಯನ್ನು ನಿವಾರಿಸುತ್ತದೆ. ನಿಮ್ಮ ಧ್ಯಾನದ ಸಮಯವನ್ನು ಇದರಲ್ಲಿ ಹೊಂದಿಸಿದರೆ ಸಾಕು, ಮತ್ತು ಸ್ಟಾರ್ಟ್ ಬಟನ್ ಕ್ಲಿಕ್ ಮಾಡಿ. ನಿಮ್ಮ ಫೋನ್ ಅನ್ನು ಈ ಅಪ್ಲಿಕೇಶನ್ ಸೈಲೆಂಟ್ ಮೋಡ್‌ನಲ್ಲಿರಿಸುತ್ತದೆ ಮತ್ತು ಧ್ಯಾನದ ಸಮಯದಲ್ಲಿ ಯಾರಾದರೂ ಕರೆ ಮಾಡುತ್ತಾರೆ ಎಂದಾದಲ್ಲಿ, ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಎಂಬ ಸಂದೇಶವನ್ನು ಎಸ್‌ಎಮ್‌ಎಸ್ ಮುಖಾಂತರ ಕಳುಹಿಸುತ್ತದೆ. ಇನ್ನು ಕರೆ ತುರ್ತು ಎಂದಾದಲ್ಲಿ ಅರ್ಜೆಂಟ್ ಎಂದು ಎಸ್‌ಎಮ್‌ಎಸ್‌ಗೆ ಉತ್ತರಿಸುತ್ತಾರೆ ಮತ್ತು ನೀವು ಇದರಿಂದ ಎಚ್ಚರಗೊಳ್ಳುತ್ತೀರಿ. ನೀವು ಯಾವುದೇ ಕರೆಯನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಅರಿತುಕೊಂಡು ಸಾವಧಾನವಾಗಿ ಧ್ಯಾನ ಮಾಡಬಹುದಾಗಿದೆ.

ಶಾಂತಿಯುತ ಧ್ಯಾನಕ್ಕಾಗಿ ಮೆಡಿಟೇಟ್ ಪೀಸ್‌ಫುಲ್ಲಿ ಅಪ್ಲಿಕೇಶನ್

ಇನ್ನು ಮುಂಜಾನೆ ಮತ್ತು ಸಂಜೆಯ ವೇಳೆಯ ಧ್ಯಾನಕ್ಕೂ ನಿಮ್ಮನ್ನು ಎಚ್ಚರಿಸುವಂತೆ ಈ ಅಪ್ಲಿಕೇಶನ್ ಸಹಾಯವಕವಾಗಿದೆ. www.MeditatePeacefully.com ಗೆ ಭೇಟಿ ನೀಡಿ ಮತ್ತು ಮೆಡಿಟೇಟ್ ಪೀಸ್‌ಫುಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು!

ಮೆಡಿಟೇಟ್ ಪೀಸ್‌ಫುಲ್ಲಿ ಅಪ್ಲಿಕೇಶನ್ ಅಕ್ಮೀನ್ ಟೆಕ್ನಾಲಜೀಸ್ ಸಂಸ್ಥೆಯದ್ದಾಗಿದೆ. ಮೊಬೈಲ್ ಅಪ್ಲಿಕೇಶನ್‌ಗಳನ್ನು ಒದಗಿಸುವ ಸಂಸ್ಥೆ ಇದಾಗಿದ್ದು, 5 ಮಿಲಿಯನ್ ಚಂದಾದಾರರನ್ನು ಇದು ಒಳಗೊಂಡಿದೆ. ಇನ್ನಷ್ಟು ಮಾಹಿತಿಗಾಗಿ www.akmin.com ಗೆ ಭೇಟಿ ನೀಡಿ.

English summary
Meditate peacefully is an all new free app which address this problem. Once you set the duration of your meditation and click the start button, the app will put your phone in silent mode and if someone calls during your meditation, it will automatically sent an SMS saying your phone is in silent mode.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot