ಆನ್‌ಲೈನಲ್ಲಿ ಟ್ರೈನ್‌ ಫುಡ್‌ ಬುಕ್‌ ಮಾಡಿ

Posted By:

ರೈಲು ಪ್ರಯಾಣಿಸುವ ಮಂದಿಗೆ ಆಹಾರದ್ದೇ ದೊಡ್ಡ ಸಮಸ್ಯೆ.ರೈಲು ನಿಲ್ದಾಣದಲ್ಲಿ ಗುಣಮಟ್ಟದ ಆಹಾರ ಎಂದು ಹೇಳಿ ಪ್ರಯಾಣಿಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡುವವರಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಎರಡು ಪ್ರಮುಖ ವೆಬ್‌ಸೈಟ್‌ಗಳು ಗುಣಮಟ್ಟದ ಆಹಾರವನ್ನು ನೀಡಲು ಮುಂದಾಗಿವೆ.

ರೈಲ್ವೆ ಕೇಟರಿಂಗ್ ಸಮಸ್ಯೆಗೆ ಪರಿಹಾರ ನೀಡುವುದಕ್ಕಾಗಿ ಈ ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ಫುಡ್ ಬುಕ್ಕಿಂಗ್ ಆರಂಭಿಸುವ ಮೂಲಕ ಕ್ರಾಂತಿ ಮಾಡತೊಡಗಿವೆ.150 ರೂಪಾಯಿ ಖರ್ಚು‌ ಮಾಡಿ ಇಷ್ಟವಾದ ಆಹಾರವನ್ನು ನಿಮ್ಮ ಬರ್ಥ್(berth)ನಲ್ಲೇ ತಿನ್ನಬಹುದು. ಹೀಗೊಂದು ವ್ಯವಸ್ಥೆ ನಿಧಾನಗತಿಯಲ್ಲಿ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದೆ.

ಆನ್‌ಲೈನಲ್ಲಿ ಟ್ರೈನ್‌ ಫುಡ್‌ ಬುಕ್‌ ಮಾಡಿ


ಟ್ರಾವೆಲ್ ಖಾನಾ.ಕಾಂ ಹಾಗೂ ಮೇರಾ ಫುಡ್ ಚಾಯ್ಸ್.ಕಾಂ ವೆಬ್ ತಾಣ ಸಂಸ್ಥೆಗಳು ಸುಮಾರು 100ಕ್ಕೂ ಅಧಿಕ ನಗರಗಳ 200ಕ್ಕೂ ಅಧಿಕ ರೆಸ್ಟೋರೆಂಟ್ ಗಳ ಜತೆ ಒಪ್ಪಂದ ಮಾಡಿಕೊಂಡಿವೆ.ಆರಂಭಿಕ ಹಂತವಾಗಿ ನಿಮ್ಮ ರೈಲು ಟಿಕೆಟ್ ಮೇಲಿರುವ PNR ಸಂಖ್ಯೆ ಎಲ್ಲಿಂದ ಎಲ್ಲಿಗೆ ಪ್ರಯಾಣ? ಪ್ರಯಾಣ ದಿನದ ಮಾಹಿತಿಯನ್ನು ಮಾಹಿತಿ ವೆಬ್ ತಾಣಗಳಲ್ಲಿ ನಮೂದಿಸಬೇಕಾಗುತ್ತದೆ. ನಂತರ ಸರ್ಚ್ ಆಯ್ಕೆಯನ್ನು ಆರಿಸಿದ್ದಲ್ಲಿ ಬೇಕಾದ ಆಹಾರದ ಮೆನು ಕಾಣುತ್ತದೆ. ಇಲ್ಲಿ ಆಹಾರವನ್ನು ಸೆಲೆಕ್ಟ್‌ ಮಾಡಿ ಯಾವ ತಾಣದಲ್ಲಿ ಆಹಾರ ಸಿಗಬೇಕು ಎಂಬುದನ್ನು ನಮೂದಿಸಿದ್ದಲ್ಲಿ ಬೇಕಾದ ರೈಲು ನಿಲ್ದಾಣದಲ್ಲಿ ಡೆಲಿವರಿ ಬಾಯ್‌ ಆಹಾರದ ಪೊಟ್ಟಣವನ್ನುನಿಮ್ಮ ಕೈಯಲ್ಲಿ ಇಡುತ್ತಾನೆ.

ಎರಡು ಕಂಪನಿಗಳು ಕೋಟಿಗಟ್ಟಲೇ ಬಂಡವಾಳ ಹೂಡಿಕೆ ಮಾಡಿದ್ದಾರೆ ಆದರೆ, ರೈಲ್ವೇ ಬೋರ್ಡ್ ನಿಂದ ಅಧಿಕೃತ ಕೆಟರಿಂಗ್ ಮಾನ್ಯತೆ ಇನ್ನೂ ಸಿಗಬೇಕಿದೆ. ಇನ್ನೂ Mera Food Choiceನವರು ಇದಕ್ಕಾಗಿಯೇ ಆಂಡ್ರಾಯ್ಡ್‌ ಆಪ್‌ನ್ನು ಸಹ ಆರಂಭಿಸಿದ್ದಾರೆ. ಪ್ರಯಾಣಿಕರು ಈ ಆಪ್‌ನ್ನು ಡೌನ್‌ಲೋಡ್‌ ಮಾಡಿಕೊಂಡು ಆಹಾರವನ್ನು ಬುಕ್‌ ಮಾಡಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot