Home
ಸುದ್ದಿಜಾಲ

GPS ತಂತ್ರಜ್ಞಾನದ "ಶೂ" ಬಂದಿದೆ

By Super
GPS ತಂತ್ರಜ್ಞಾನದ

ವಿಜರ್ಡ್‌ ಆಪ್‌ ಓಜ್‌ನಿಂದ ಪ್ರೇರಣೆ ಪಡೆದ ಬ್ರಟನ್ ಮೂಲದ ವಿನ್ಯಾಸ ಕಾರನೊಬ್ಬ ನಿಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆತರಬಲ್ಲ GPS ತಂತ್ರಜ್ಞಾನ ಹೊಂದಿರುವ ನೂತನ ಮಾದರಿಯ ಶೂಗಳನ್ನು ಅಭಿವೃಧಿ ಪಡಿಸಿದ್ದಾರೆ.

ವಿನ್ಯಾಸಕಾರ ಡಾಮಿನಿಕ್‌ ವಿಲ್‌ಕಾಕ್ಸ್‌ 1939 ರಲ್ಲಿ ತೆರೆ ಕಂಡ ಕ್ಲಾಸಿಕ್‌ ಚಿತ್ರ ವಿಜರ್ಡ್‌ ಆಪ್‌ ಓಜ್‌ನಲ್ಲಿ ತೋರಿಸಲಾದ ಮನೆಗೆ ಕರೆದೊಯ್ಯುವ ಶೂ ನಿಂದ ಪ್ರೇರಣೆ ಪಡೆದು ತಂತ್ರಜ್ಞಾನದ ಸಹಾಯದೊಂದಿಗೆ ನೂತನ ಶೂ ಆವಿಷ್ಕರಿಸಿದ್ದಾರೆ ಎಂದು ಡೈಲೀ ಮೇಲ್ ವರದಿ ಮಾಡಿದೆ.

"ವಿಜರ್ಡ್‌ ಆಪ್‌ ಓಜ್‌ ಚಿತ್ರದಲ್ಲಿ ಹೇಗೆ ಡ್ರೋತಿ ತನ್ನಯ ಶೂ ನಲ್ಲಿನ ಗುಂಡಿ ಒತ್ತಿ ಮನೆಗೆ ತಲಪು ತ್ತಿದ್ದಳೋ ಅದೇ ರೀತಿಯಲ್ಲಿ ನೀವು ಕೂಡ ಎಲ್ಲೇ ಇದ್ದರೂ ನಿಮ್ಮ ಮನೆಗೆ ಹೋಗಲು ದಾರಿ ತೋರಬಲ್ಲ ಶೂ ನಿರ್ಮೀಸಲು ನಾನು ನಿರ್ಧರಿಸಿದೆ" ಎಂದು ಡಾಮಿನಿಕ್‌ ತಿಳಿಸಿದ್ದಾರೆ.

PC ಸಾಪ್ಟ್‌ವೇರ್‌ ಹಾಗೂ USB ಕೇಬಲ್‌ಗಳೋಂದಿಗೆ ಲಭ್ಯವಿರುವ ಶೂ ಧರಿಸಿ ನೀವು ನಿಮ್ಮ ಮನೆಯ ವಿಳಾಸ ಅಪ್ಲೋಡ್‌ ಮಾಡಿದರೆ ಸಾಕು ನಿಮ್ಮ ಮನೆಗೆ ಯಾವ ದಾರಿಯಿಂದ ನಡೆದು ಹೋಗಬೇಕೆಂದು ತೋರಿಸುತ್ತದೆ. "ಶೂ" ನ ಎಡಭಾಗದ ಹಿಮ್ಮಡಿಯಲ್ಲಿ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ (GPS) ಆಂಟೆನಾ ಅಳವಡಿಸಲಾಗಿದಎ ಹಾಗೂ ದಿಕ್ಸೂಚಿಗಾಗಿ ಒಂದು ಸುತ್ತಿನ ಲೈಟ್‌ ಎಮಿಟಿಂಗ್‌ ಡಿಯೋಡ್‌ (LED) ಅನ್ನು ಅಳವಡಿಸಲಾಗಿದೆ. ಸದ್ಯದಲ್ಲಿ ಇನ್ನು ಎಷ್ಟು ದೂರ ಕ್ರಮಿಸ ಬೇಕೆಂಬುದನ್ನು ತೊರಿಸುವ ಪ್ರೊಗ್ರೆಸ್‌ ಬಾರ್‌ ಹೊಂದಿರುವ ಬಲಭಾಗದ ಶೂ ಮಾತ್ರ ವಯರ್‌ ಲೆಸ್‌ ಆಗಿದೆ.
Read In English

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+