ಪ್ರಾಣಿಗಳ ಧ್ವನಿ ಕಲಿಸಲು ಹೊಸ ಫೀಚರ್‌ ಬಿಡುಗಡೆ ಮಾಡಿದ ಗೂಗಲ್‌

By Suneel
|

ದೊಡ್ಡ ದೊಡ್ಡ ಸಿಟಿಗಳಲ್ಲಿ ವಾಸಿಸುವವರ ಫೋಷಕರ ಮಕ್ಕಳಿಗೆ ಪ್ರಾಣಿಗಳು ಹೇಗೆ ಧ್ವನಿ ಮಾಡುತ್ತವೆ ಅಂತ ತಿಳಿಯುವುದೇ ಇಲ್ಲ ಅಂತನೋ, ಅಥವಾ ಗೂಗಲ್‌ ತನ್ನ ಅಭಿವೃದ್ದಿಯಲ್ಲೇ ಹೊಸ ನಡೆಯನ್ನು ರೂಪಿಸಲೋ ಅಂತು ಇಂತು ಒಂದು ಹೊಸ ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ಆ ಹೊಸ ಫೀಚರ್‌ನಿಂದ ಪೋಷಕರು ತಮ್ಮ ಮಕ್ಕಳಿಗೆ ವಿವಿಧ ಪ್ರಾಣಿಗಳು ಹೇಗೆ ಧ್ವನಿಸುತ್ತವೆ ಎಂಬುದನ್ನು ಕಲಿಸಬಹುದಂತೆ. ಹಾಗಾದ್ರೆ ಆ ಫೀಚರ್‌ ಬಳಕೆ ಮಾಡುವುದು ಹೇಗೆ, ಪ್ರಾಣಿಗಳ ಧ್ವನಿ ಕೇಳುವುದು ಎಂದು ಲೇಖನದ ಸ್ಲೈಡರ್‌ನಿಂದ ತಿಳಿಯಿರಿ.

1

1

ಗೂಗಲ್‌ ಹೊಸ ಫೀಚರ್ ಒಂದನ್ನು ಬಿಡುಗಡೆ ಮಾಡಿದ್ದು, ಹೊಸ ಫೀಚರ್‌ ಪೋಷಕರು ತಮ್ಮ ಮಕ್ಕಳಿಗೆ ವಿವಿಧ ಪ್ರಾಣಿಗಳ ಶಬ್ಧವನ್ನು ಕಲಿಸಲು ಸಹಾಯಕವಾಗಿದೆ.

2

2

ಗೂಗಲ್‌ ಓಪನ್‌ ಮಾಡಿ "animal noises" ಎಂದು ಟೈಪ್‌ ಮಾಡಿ ಸರ್ಚ್ ಬಟನ್‌ ಕ್ಲಿಕ್ ಮಾಡಿ

3

3

"animal noises" ಎಂದು ಟೈಪ್‌ ಮಾಡಿ ಸರ್ಚ್‌ ಮಾಡಿದ ನಂತರ ಈ ಚಿತ್ರದಲ್ಲಿ ಕಾಣುವ ರೀತಿ ಪೇಜ್‌ ಒಂದು ತೆರೆದುಕೊಳ್ಳುತ್ತದೆ.

4

4

ಓಪನ್‌ ಆದ ಪೇಜ್‌ನಲ್ಲಿ ನಿಮಗೆ ಇಷ್ಟವಾದ ಪ್ರಾಣಿಗಳ ಮೇಲೆ ಮೌಸ್‌ ಪಾಯಿಂಟ್‌ ಇಟ್ಟು ಕ್ಲಿಕ್ ಮಾಡಿ. ಆಗ ನಿಮಗೆ ಪ್ರಾಣಿಗಳು ಕೂಗುವ ಶಬ್ಧ ಕೇಳಿಸುತ್ತದೆ.

5

5

ನಿಮಗೆ ಬೇಕಾದ ಇಷ್ಟವಾದ ಪ್ರಾಣಿಗಳ ಧ್ವನಿ ಆಲಿಸಲು ಇಂಗ್ಲೀಷ್‌ನಲ್ಲಿ "What does the dog say" ಎಂದು ಟೈಪಿಸ ಬೇಕು. ಇತರೆ ಪ್ರಾಣಿಗಳ ಧ್ವನಿ ಬೇಕಾದಲ್ಲಿ DOG ತೆಗೆದು ಆ ಪ್ರಾಣಿಯ ಹೆಸರು ಹಾಕಿದರಾಯಿತು.

6

6

ಗೂಲಗ್ ಪ್ರಸ್ತುತದಲ್ಲಿ 19 ಪ್ರಾಣಿಗಳ ಧ್ವನಿಯನ್ನು ಮಾತ್ರ ಸೇರಿಸಿದ್ದು, ಅದರಲ್ಲಿ ಅಮೆರಿಕಾದ ಕಡವೆ, ಬಾತುಕೋಳಿ, ಹುಂಜ, ಜೀಬ್ರಾ, ವಾನರ, ಬೆಕ್ಕು, ಸಿಂಹ, ಗೂಬೆ, ಹಂದಿ, ಹಸು, ಆನೆ, ಕುದುರೆ, ರಕೂನ್, Bowhead ತಿಮಿಂಗಿಲ ಹಂಪ್ಬ್ಯಾಕ್ ತಿಮಿಂಗಿಲ, ತೋಳ, ಕುರಿ, ಹುಲಿ, ಟರ್ಕಿ ಪ್ರಾಣಿಗಳ ಧ್ವನಿ ಇದೆ.

Best Mobiles in India

English summary
Now learn animal sounds with this new Google feature. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X