ಉಪಯೋಗಿಸಿದ ಪ್ಲಾಸ್ಟಿಕ್ ಬಾಟಲಿಯಿಂದ ಶುದ್ಧ ನೀರು ಐಐಟಿ ಸಾಧನೆ

By Shwetha
|

ನೀರಿನ ಬಾಟಲಿಗಳಿಂದಲೇ ನೀರನ್ನು ಪಡೆದುಕೊಳ್ಳುವ ರಹಸ್ಯದ ಬಗ್ಗೆ ನಿಮಗೆ ಗೊತ್ತಿದೆಯೇ? ಐಐಟಿ ಬಾಂಬೆಯ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದು ನಿಜಕ್ಕೂ ಇದು ಹೆಚ್ಚು ಕೌತುಕಮಯ ಎಂದೆನಿಸಿದೆ. ಖಾಲಿಯಾದ ನೀರಿನ ಬಾಟಲಿಗಳನ್ನು ನಾವು ಎಲ್ಲೆಂದರಲ್ಲಿ ಎಸೆದು ಅದನ್ನು ತ್ಯಾಜ್ಯವನ್ನಾಗಿಸುತ್ತೇವೆ ಮತ್ತು ಈ ತ್ಯಾಜ್ಯಗಳನ್ನು ಏನು ಮಾಡುವುದು ಎಂಬುದೇ ದೊಡ್ಡ ತಲೆನೋವಾಗಿರುತ್ತದೆ. ನಿಜಕ್ಕೂ ಈ ಪ್ಲಾಸ್ಟಿಕ್ ಪರಿಸರಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ.

ಇದಕ್ಕೆ ಅಂತ್ಯಗಾಣಿಸುವ ನಿಟ್ಟಿನಲ್ಲಿ ಐಐಟಿ ಬಾಂಬೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಾತ್ಕಾಲಿಕ ಪರಿಹಾರವನ್ನು ಈ ಸಮಸ್ಯಗೆ ಕಂಡುಕೊಂಡಿದ್ದು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಅದ್ಭುತ ಯೋಜನೆಯೊಂದನ್ನು ರೂಪಿಸಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಈ ಅನ್ವೇಷಣೆಯ ಕುರಿತಾದ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

#1

#1

ಅನುರಾಗ್ ಮೀನಾ ಮತ್ತು ಸತ್ಯೇಂದ್ರ ಮೀನಾ ಮೆಶೀನ್ ಒಂದನ್ನು ಅಭಿವೃದ್ಧಿಪಡಿಸಿದ್ದು ಇದಕ್ಕೆ ನೀವು ಬಳಸಿದ ಕ್ಯಾನ್ ಅಥವಾ ಬಾಟಲ್ ಅನ್ನು ಹಾಕಿ ಶುದ್ಧವಾದ 300 ಎಮ್‌ಎಲ್ ನೀರನ್ನು ಪಡೆದುಕೊಳ್ಳಬಹುದಾಗಿದೆ.

#2

#2

ನಗರ ಪ್ರದೇಶಗಳಲ್ಲಿ ಜವಬ್ದಾರಿಯನ್ನುಂಟು ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.

#3

#3

ಮೆಶೀನ್ ಅನ್ನು ಚಂಡೀಗಢ ಮೂಲದ ಸ್ಟಾರ್ಟಪ್ ಟ್ರೆಸ್ಟರ್ ರಚಿಸಿದ್ದು ಇದನ್ನು ಮಾಲ್‌ಗಳು, ಸಿನಿಮಾ ಹಾಲ್‌ಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಅಳವಡಿಸುವ ಯೋಜನೆ ಇದೆ.

#4

#4

ಈ ಯೋಜನೆಯನ್ನು ಚಂಡೀಗಢ ಮತ್ತು ಮುಂಬೈನಲ್ಲಿ ಆರಂಭಿಸಲಾಗಿದೆ.

#5

#5

ಎಂಟು ಲೀಟರ್‌ಗಳಷ್ಟು ನೀರು ಸಂಗ್ರಹಣಾ ಸಾಮರ್ಥ್ಯವನ್ನು ಮೆಶೀನ್ ಹೊಂದಿದ್ದು ಹಾಗೂ ಕೊಠಡಿ ತಾಪಮಾನದಲ್ಲಿ ಅಂತೆಯೇ ಶೀತ ನೀರಿನಂತೆ ವಿತರಣೆ ಮಾಡಬಹುದು. ನೀರು ಆರ್‌ಒ ಮತ್ತು ಯುವಿ ಟ್ರೀಟೆಡ್ ಆಗಿದೆ. ಈ ಮೇಶೀನ್ ಬ್ಲ್ಯೂಟೂತ್ ಮತ್ತು ಇಂಟರ್ನೆಟ್ ಸೌಲಭ್ಯವನ್ನು ಹೊಂದಿದ್ದು ಬಳಕೆ ಮತ್ತು ನಿರ್ವಹಣೆ ಕಾರ್ಯಗಳನ್ನು ಇದನ್ನು ಬಳಸಿ ಮಾಡಬಹುದಾಗಿದೆ. ಎರಡು ಲೀಟರ್‌ನಷ್ಟು ಮರುಬಳಕೆ ಯೂನಿಟ್ ಸಾಮರ್ಥ್ಯವನ್ನು ಇದು ಹೊಂದಿದೆ.

#6

#6

ತನ್ನ ಸಂಗ್ರಹಣಾ ಸಾಮರ್ಥ್ಯದ 80 ಶೇಕಡಾವನ್ನು ಇದು ಒಮ್ಮೆ ತಲುಪಿದರೆ ಸಾಕು ಸ್ವಯಂಚಾಲಿತ ಅಧಿಸೂಚನೆಯನ್ನು ಮೆಶೀನ್‌ ನಿರ್ವಾಹಕರಿಗೆ ಕಳುಹಿಸುತ್ತದೆ.

#7

#7

ಈ ಯಂತ್ರಕ್ಕೆ ತಗುಲಿದ ಮೂಲ ಖರ್ಚು ರೂ 50,000 ಆಗಿದ್ದು ಇದರ ಬೆಲೆ ರೂ 1 ಲಕ್ಷದವರೆಗೆ ಹೋಗುತ್ತದೆ. ಪ್ರಸ್ತುತ ಒಂದು ಯಂತ್ರವನ್ನು ಐಐಟಿ ಮುಂಬೈನ ಹುಡುಗರ ಹಾಸ್ಟೆಲ್‌ನಲ್ಲಿ ಅಳವಡಿಸಲಾಗಿದೆ.

#8

#8

ಪ್ರತೀ ತಿಂಗಳು 5,000 ಮೆಶೀನ್ ಅನ್ನು ತಯಾರಿಸುವ ಇರಾದೆಯನ್ನು ಕಂಪೆನಿ ಹಮ್ಮಿಕೊಂಡಿದೆ. ಅಂತೆಯೇ ಇದಕ್ಕಾಗಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಕೂಡ ಕಂಪೆನಿ ಯೋಚಿಸಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ತಂತ್ರಜ್ಞಾನದ ಆವಿಷ್ಕಾರಗಳು ವಿಚಿತ್ರವಾದರೂ ಇದು ಸತ್ಯ</a><br /><a href=ಟೈಮ್‌ ತಿಳಿಯಲು ವ್ಯಕ್ತಿಯ ನೆರಳು ಬಳಸುವ ""ಶಾಡೊಪ್ಲೇ ಗಡಿಯಾರ"
ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು? ಅವರ ಸಂಶೋಧನೆ ಏನು ಗೊತ್ತೇ?
ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ" title="ತಂತ್ರಜ್ಞಾನದ ಆವಿಷ್ಕಾರಗಳು ವಿಚಿತ್ರವಾದರೂ ಇದು ಸತ್ಯ
ಟೈಮ್‌ ತಿಳಿಯಲು ವ್ಯಕ್ತಿಯ ನೆರಳು ಬಳಸುವ ""ಶಾಡೊಪ್ಲೇ ಗಡಿಯಾರ"
ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು? ಅವರ ಸಂಶೋಧನೆ ಏನು ಗೊತ್ತೇ?
ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ" loading="lazy" width="100" height="56" />ತಂತ್ರಜ್ಞಾನದ ಆವಿಷ್ಕಾರಗಳು ವಿಚಿತ್ರವಾದರೂ ಇದು ಸತ್ಯ
ಟೈಮ್‌ ತಿಳಿಯಲು ವ್ಯಕ್ತಿಯ ನೆರಳು ಬಳಸುವ ""ಶಾಡೊಪ್ಲೇ ಗಡಿಯಾರ"
ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು? ಅವರ ಸಂಶೋಧನೆ ಏನು ಗೊತ್ತೇ?
ಅಂಧತ್ವವನ್ನೇ ಮೆಟ್ಟಿನಿಂತ 10 ಕೋಟಿ ಬೆಲೆಯ ಕಂಪೆನಿ ಸಿಇಒ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Two final year IIT Bombay students have developed a temporary solution of this problem and that is giving incentive to people who are interested in recycling the plastic garbage. Anurag Meena and Satyendra Meena have developed a machine where you can put a used can or bottle and in return you will get water.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X