Subscribe to Gizbot

ಒಂದೇ ದಿನದಲ್ಲಿ ಪಾನ್‌ಕಾರ್ಡ್‌ ಪಡೆಯಲು ಬರುತ್ತಿದೆ 'ಆಪ್'!!

Posted By:

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಏನು ಬೇಕಾದರೂ ಕೆಲವೇ ಕ್ಷಣಗಳಲ್ಲಿ ಬದಲಾಗಬಹುದು. ನಮ್ಮ ಡಿಜಿಟಲ್ ಇಂಡಿಯಾ ಬೆಳವಣಿಗೆಯ ವೇಗವೂ ಕೂಡ.! ಹೌದು, ಮೊದಲೆಲ್ಲಾ ಪಾನ್‌ಕಾರ್ಡ್ ಪಡೆಯಲು ತಿಂಗಳುಗಟ್ಟಲೆ ಕಾಯ ಬೇಕಿತ್ತು. ಆದರೆ, ಆದಾಯ ತೆರಿಗೆ ಇಲಾಖೆ ಕೆಲವೇ ನಿಮಿಷಗಳಲ್ಲಿಯೇ ಪಾನ್‌ಕಾರ್ಡ್‌ ಪಡೆಯುವ ಸೌಲಭ್ಯ ನೀಡುತ್ತಿದೆ.!!

ನಂಬಿದರೆ ನಂಬಿ ಬಿಟ್ಟರೆ ಬಿಡಿ ನೀವು ಶೀಘ್ರದಲ್ಲಿಯೇ ಹೊಸ ಪ್ಯಾನ್‌ಸಂಖ್ಯೆಯನ್ನು ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾದ ಆಪ್‌ ಅನ್ನು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡುತ್ತಿದೆ.! ಹಾಗಾದರೆ, ಆಪ್‌ ಯಾವಾಗ ಬಿಡುಗಡೆಯಾಗುತ್ತಿದೆ.? ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆದಾಯ ತೆರಿಗೆಗೆ ಪ್ರತ್ಯೇಕ ಮೊಬೈಲ್ ಆಪ್.!!

ಆದಾಯ ತೆರಿಗೆಗೆ ಪ್ರತ್ಯೇಕ ಮೊಬೈಲ್ ಆಪ್.!!

ಆದಾಯ ತೆರಿಗೆ ಇಲಾಖೆ ಹೊಸದಾಗಿ ಆಪ್ ಅಭಿವೃದ್ಧಿಪಡಿಸುತ್ತಿದ್ದು, ನೂತನ ಆಪ್‌ ಮೂಲಕವೇ ಪಾನ್‌ಕಾರ್ಡ್‌ಪಡೆಯುವ, ಟ್ಯಾಕ್ಸ್ ಪೇ ಮಾಡುವ ಹಾಗೂ ತೆರಿಗೆ ಸ್ಥಿತಿಗತಿ ಬಗ್ಗೆ ಪರೀಶೀಲಿಸುವ ಆಯ್ಕೆ ಇರಲಿದೆ.!!

ಆಪ್ ಬಿಡುಗಡೆ ಯಾವಾಗ?

ಆಪ್ ಬಿಡುಗಡೆ ಯಾವಾಗ?

ಆದಾಯ ತೆರಿಗೆ ಇಲಾಖೆ ಅಭಿವೃದ್ಧಿಪಡಿಸುತ್ತಿರುವ ಆಪ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಹಣಕಾಸು ಇಲಾಖೆಯಿಂದ ಅನುಮೋದನೆ ಗಳಿಸಿದ ನಂತರ ಪ್ರಾಯೋಗಿಕವಾಗಿ ಈ ಸೌಲಭ್ಯ ಜಾರಿಗೆ ಬರಲಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.!!

ಆಧಾರ್ ಬಳಸಿ ಇ-ಕೆವೈಸಿ ದೃಢೀಕರಣ!!

ಆಧಾರ್ ಬಳಸಿ ಇ-ಕೆವೈಸಿ ದೃಢೀಕರಣ!!

ಆಪ್‌ ಬಿಡುಗಡೆಯಾದ ನಂತರ ಆಧಾರ್ ಬಳಸಿ ಇ-ಕೆವೈಸಿ ದೃಢೀಕರಣ ಮಾಡಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ. ಇದರಿಂದ ತೆರಿಗೆ ವ್ಯಾಪಪ್ತಿಗೆ ಹೆಚ್ಚು ಜನರು ಬರಲು ಸಹಾಯವಾಗಲಿದೆ.!!

ಪ್ರತಿ ವರ್ಷ 2.5 ಕೋಟಿ ಪಾನ್‌ಕಾರ್ಡ್ ಅರ್ಜಿ.!!

ಪ್ರತಿ ವರ್ಷ 2.5 ಕೋಟಿ ಪಾನ್‌ಕಾರ್ಡ್ ಅರ್ಜಿ.!!

ಸರ್ಕಾರಿ ಅಂಕಿಅಂಶಗಳ ಪ್ರಕಾರ ದೇಶಾಧ್ಯಂತ ಪ್ರತಿ ವರ್ಷ 2.5 ಕೋಟಿ ಪಾನ್‌ಕಾರ್ಡ್ಗೆ ಅರ್ಜಿಅಲ್ಲಿಸುತ್ತಿದ್ದಾರೆ. ಇನ್ನು ಸಧ್ಯಕ್ಕೆ 25 ಕೋಟಿ ಜನರು ಮಾತ್ರ ಪ್ಯಾನ್‌ ಕಾರ್ಡ್ ಹೊಂದಿದ್ದಾರೆ.!!

ಪ್ಯಾನ್‌ಕಾರ್ಡ್ ಕಡ್ಡಾಯ.!!

ಪ್ಯಾನ್‌ಕಾರ್ಡ್ ಕಡ್ಡಾಯ.!!

ಯಾವುದೇ ಖಾಸಾಗಿ ಉದ್ಯೋಗಕ್ಕೂ ಇಂದು ಪಾನ್‌ಕಾರ್ಡ್ ಅವಶ್ಯವಾಗಿದೆ.!! ಮತ್ತು 50,000 ರೂಗಿಂತ ಹೆಚ್ಚು ಹಣ ವರ್ಗಾವಣೆಗೆ ಮತ್ತು 2 ಲಕ್ಷಕ್ಕಿಂತಲೂ ಹೆಚ್ಚು ಖರೀದಿಗೆ ಪಾನ್‌ಕಾರ್ಡ್‌ ಕಡ್ಡಾಯವಾಗಿದೆ.!!

ಓದಿರಿ:ಫೇಸ್‌ಬುಕ್ ಅಕೌಂಟ್ ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ? ನಿಮಗಿದು ಗೊತ್ತಿಲ್ಲಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Another major stride has been taken towards the government’s Digital India campaign. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot