ಪೇಟಿಎಂ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಇನ್ನು ಉಚಿತ!!

|

ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೊಬೈಲ್ ವಾಲೆಟ್ ಸಂಸ್ಥೆ 'ಪೇಟಿಎಂ' ಸಿಹಿಸುದ್ದಿಯೊಂದನ್ನು ನೀಡಿದೆ. ಪೇಟಿಎಂ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸುವ ತನ್ನ ಬಳಕೆದಾರರಿಗೆ ಪೇಟಿಎಂ ಭರ್ಜರಿ ಆಫರ್ ಒಂದನ್ನು ನೀಡಿದ್ದು, ಇನ್ಮುಂದೆ ಪೇಟಿಎಂ ಮೂಲಕ ಆನ್-ಲೈನ್ ವಿಧಾನದಲ್ಲಿ ರೈಲ್ವೆ ಪ್ರಯಾಣದ ಟಿಕೆಟ್ಟನ್ನು ಕಾಯ್ದಿರಿಸುವುದು ಉಚಿತವಾಗಿದೆ.

ಹೌದು, ಆನ್‌ಲೈನ್ ವ್ಯವಹಾರಕ್ಕೆ ಹೆಸರಾಗಿರುವ ಪೇಟಿಎಂ ಕಂಪನಿಯು ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆಯನ್ನು ಈಗ ಮತ್ತಷ್ಟು ಸುಲಭಗೊಳಿಸಿದೆ. ಪೇಟಿಎಂ ಮೂಲಕ ಆನ್‌ಲೈನ್ ವಿಧಾನದಲ್ಲಿ ರೈಲ್ವೆ ಪ್ರಯಾಣದ ಟಿಕೆಟ್ಟನ್ನು ಕಾಯ್ದಿರಿಸುವವರು ಯಾವುದೇ ಸೇವಾ ಶುಲ್ಕವನ್ನಾಗಲಿ, ಗೇಟ್-ವೇ ಶುಲ್ಕ ಅಥವಾ ಸೌಲಭ್ಯ ಪೂರೈಕೆ ಶುಲ್ಕವನ್ನಾಗಲಿ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ.

ಪೇಟಿಎಂ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಇನ್ನು ಉಚಿತ!!

ಪೇಟಿಎಂ ಮೂಲಕ ಹೆಚ್ಚುಹೆಚ್ಚು ಜನರು ತಮ್ಮ ರೈಲು ಪ್ರಯಾಣದ ಟಿಕೆಟ್ಟುಗಳನ್ನು ಕಾಯ್ದಿರಿಸುವುದನ್ನು ಉತ್ತೇಜಿಸುವುದು ಇದರ ಹಿಂದಿನ ಆಶಯವಾಗಿದ್ದು, ಟಿಕೆಟ್ ಬುಕ್ ಮಾಡಿದವರು ತಮ್ಮ ಪ್ರಯಾಣವನ್ನು ಅನಿವಾರ್ಯವಾಗಿ ರದ್ದುಪಡಿಸುವಂತಹ ಪ್ರಯಾಣಿಕರಿಗೆ ಕ್ಷಣಾರ್ಧದಲ್ಲಿ ಅವರ ಹಣವನ್ನು ವಾಪಸ್ ಮಾಡಲಾಗುವುದು ಅಂತ ಪೇಟಿಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಷ್ಟು ಮಾತ್ರವಲ್ಲದೆ, ಪ್ರಯಾಣಿಕರು ಪೇಟಿಎಂ ಮೂಲಕವೇ ರೈಲ್ವೇ ಟಿಕೆಟ್​ನ ಪಿಎನ್ಆರ್ ಸ್ಥಾನಮಾನವನ್ನು ತಿಳಿದುಕೊಳ್ಳಬಹುದು. ಜೊತೆಗೆ, ತಾವು ಪ್ರಯಾಣಿಸಲಿರುವ ಅಥವಾ ತಮಗೆ ಅಗತ್ಯವೆನಿಸುವಂತಹ ನಗರ, ಪಟ್ಟಣಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಹಾಗೂ ಹತ್ತಿರದಲ್ಲಿರುವ ರೈಲು ನಿಲ್ದಾಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ಪೇಟಿಎಂ ಹೇಳಿದೆ.

ಪೇಟಿಎಂ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವುದು ಇನ್ನು ಉಚಿತ!!

ಪೇಟಿಎಂ ಸಾರಿಗೆ ಸೌಲಭ್ಯ ವಿಭಾಗದಲ್ಲಿ ಈ ವರ್ಷ 38 ದಶಲಕ್ಷ ಟಿಕೆಟ್ಟುಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿದೆ. ಒಟ್ಟಾರೆಯಾಗಿ 9 ದಶಲಕ್ಷ ಜನರು ಈ ಸೌಲಭ್ಯವನ್ನು ಉಪಯೋಗಿಸಿಕೊಂಡಿದ್ದಾರೆ. ಪೇಟಿಎಂ ಟ್ರಾವೆಲ್ ವಿಭಾಗವು ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, 300 ಸಿಬ್ಬಂದಿಯ ಬಲವನ್ನು ಹೊಂದಿರುವ ಯಶಸ್ವಿ ಸಂಸ್ಥೆಯಾಗಿದೆ.

Best Mobiles in India

English summary
For those who regularly travel by train, Indian Railway Catering and ... But with Paytm now there will be no additional charges for tickets ...to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X