ನಿಮಗ್ಯಾವ್ ನೋಟಿಫಿಕೇಷನ್ ಬೇಕು..? ಹೊಸ ಆಯ್ಕೆನೀಡಿದ ಫೇಸ್‌ಬುಕ್..!
ಫೇಸ್ ಬುಕ್ ಆಪ್ ಇನ್ನು ಮುಂದೆ ಆಂಡ್ರಾಯ್ಡ್ ನೋಟಿಫಿಕೇಷನ್ ಚಾನಲ್ ಗೆ ಬೆಂಬಲ ನೀಡುತ್ತದೆ. ಏನೆಂದು ಅರ್ಥ ಆಗಿಲ್ವಾ? ನೀವು ಬಯಸುವ ನೋಟಿಫಿಕೇಷನ್ ಗಳನ್ನು ಮಾತ್ರ ಫೇಸ್ ಬುಕ್ ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಾ ನೋಟಿಫಿಕೇಷನ್ ಗಳು ಪದೇ ಪದೇ ಬಂದು ಅಪ್ಪಳಿಸಿ ನಿಮಗೆ ಕಿರಿಕಿರಿ ಮಾಡುವುದನ್ನು ತಪ್ಪಿಸಬಹುದು.

ಇಷ್ಟು ದಿನ ನಿರ್ಧಿಷ್ಟ ನೋಟಿಫಿಕೇಷನ್ ಬರುವುದನ್ನು ಆಯ್ಕೆ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶವಿರಲಿಲ್ಲ. ಹಾಗಾಗಿ ನೋಟಿಫಿಕೇಷನ್ ಸಹವಾಸವೇ ಬೇಡ ಎಂದು ಬ್ಲಾಕ್ ಮಾಡಿ ಇಡಬೇಕಾಗಿತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ನಿಮಗೆ ಬೇಕಾದ ನೋಟಿಫಿಕೇಷನ್ ಗಳು ಮಾತ್ರ ಬರುವಂತೆ ಅಡ್ಜೆಸ್ಟ್ ಮಾಡಿ ಇಡಬಹುದು.

ಸದ್ಯ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್ ನಲ್ಲಿ ಈ ಅವಕಾಶವಿದೆ. ಈ ಅಪ್ ಡೇಟ್ ನಿಂದಾಗಿ ತಮ್ಮ ಫೇಸ್ ಬುಕ್ ಅಕೌಂಟನ್ನು ಮ್ಯಾನೇಜ್ ಮಾಡಲು ಬಳಕೆದಾರರಿಗೆ ಹೆಚ್ಚು ಅವಕಾಶಗಳು ಲಭ್ಯವಾಗುತ್ತದೆ. ಹುಟ್ಟುಹಬ್ಬದ ನೋಟಿಫಿಕೇಷನ್, ಫ್ರೆಂಡ್ ರಿಕ್ವೆಸ್ಟ್ ನ ನೋಟಿಫಿಕೇಷನ್ ಅಥವಾ ನಿಮಗೆ ತಿಳಿದಿರುವ ವ್ಯಕ್ತಿಗಳ ನೋಟಿಫಿಕೇಷನ್ ಗಳು ಮಾತ್ರ ಬರಬೇಕು ಹೀಗೆ ಹಲವು ಕೆಟಗರಿಗಳಿದ್ದು ನೀವು ಆಯ್ಕೆ ಮಾಡಲು ಅನುಕೂಲಕರವಾಗಿದೆ. ಫೇಸ್ ಬುಕ್ ಬಳಕೆದಾರರು ಆಂಡ್ರಾಯ್ಡ್ ನ ಸೆಟ್ಟಿಂಗ್ಸ್ ಮೆನುವಿನಲ್ಲಿ ಇದನ್ನು ಆಕ್ಸಿಸ್ ಮಾಡಬಹುದಾಗಿದೆ.
ನಿಮ್ಮ ಆಯ್ಕೆಗಾಗಿ ಇದೆ 17 ನೋಟಿಫಿಕೇಷನ್ ಕೆಟಗರಿಗಳು
ರೆಡ್ಡಿಟ್ ಕಳೆದ ಕೆಲವು ದಿನಗಳ ಹಿಂದೆ ನೀಡಿರುವ ಮಾಹಿತಿಯ ಪ್ರಕಾರ ಈ ನೋಟಿಫಿಕೇಷನ್ ಕೆಟಗರಿ ಫೇಸ್ ಬುಕ್ ವೈಶಿಷ್ಟ್ಯವು ಫೇಸ್ ಬುಕ್ ಆಪ್ ನ ವರ್ಷನ್ 185.0.0.39.72 ರಲ್ಲಿ ಲಭ್ಯವಿದೆಯಂತೆ. ಒಂದು ವೇಳೆ ನೀವು ಈ ಹೊಸ ಸೆಟ್ಟಿಂಗ್ಸ್ ನ್ನು ನಿಮ್ಮ ಆಂಡ್ರಾಯ್ಡ್ ನಲ್ಲಿ ಗಮನಿಸದೇ ಇದ್ದಲ್ಲಿ ಇಲ್ಲಿಗೆ ತೆರಳಿ ನೋಡಿ. Settings > Apps & notifications > Facebook > Notifications.
ಕೇವಲ ನೋಟಿಫಿಕೇಷನ್ ಆನ್ ಮತ್ತು ಆಫ್ ನ್ನು ಹೊರತು ಪಡಿಸಿ ಇಲ್ಲಿ ಬಳಕೆದಾರರು ಇನ್ನು 17 ವಿಭಿನ್ನ ಕೆಟಗರಿಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಟ್ಯಾಗ್ಸ್, ಕಮೆಂಟ್ಸ್, ಫ್ರೆಂಡ್ ರಿಕ್ವೆಸ್ಟ್, ನಿಮಗೆ ತಿಳಿದಿರುವ ವ್ಯಕ್ತಿಗಳು ಹೀಗೆ ಇತ್ಯಾದಿ ಕೆಟಗರಿಗಳ ಆಯ್ಕೆ ಇರುತ್ತದೆ.

ಫೇಸ್ ಬುಕ್ ನ ಆಂಡ್ರಾಯ್ಡ್ ವರ್ಷನ್ ನ ಮೆಸೇಂಜರ್ ನಲ್ಲಿ ಅಡಾಪ್ಟಿವ್ ಐಕಾನ್ ಗೆ ಬೆಂಬಲ
ನೋಟಿಫಿಕೇಷನ್ ವೈಶಿಷ್ಟ್ಯತೆಯನ್ನು ಹೊರತು ಪಡಿಸಿ, ಫೇಸ್ ಬುಕ್ ನ ಆಂಡ್ರಾಯ್ಡ್ ವರ್ಷನ್ ನ ಆಪ್ ನಲ್ಲಿ ಅಡಾಪ್ಟಿವ್ ಐಕಾನ್ ಗೆ ಬೆಂಬಲ ನೀಡುತ್ತದೆ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲೂ ಕೂಡ ಈ ಅಡಾಪ್ಟೀವ್ ಐಕಾನ್ ಬೆಂಬಲವನ್ನು ಪರಿಚಯಿಸಲಾಗಿತ್ತು. ಆಂಡ್ರಾಯ್ಡ್ ಪೋಲೀಸರು ನೀಡುವ ಮಾಹಿತಿಯ ಪ್ರಕಾರ, ಫೇಸ್ ಬುಕ್ ಮೆಸೇಂಜರ್ ಐಕಾನ್ ಹ್ಯಾಂಡ್ ಸೆಟ್ ನಲ್ಲಿ ಥೀಮ್ ಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ಅಡಾಪ್ಟೀವ್ ಐಕಾನ್ ಸಪೋರ್ಟ್ ನ್ನು ಫೇಸ್ ಬುಕ್ ಮೆಸೇಂಜರ್ ನ ವರ್ಷನ್ 180 ಮತ್ತು ಅದಕ್ಕೂ ಮೇಲಿನದ್ದರಲ್ಲಿ ಬಿಡುಗಡೆಗೊಳಿಸಲಾಗಿದೆ. ಒಂದು ವೇಳೆ ತಮ್ಮ ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಬಳಕೆದಾರರಿಗೆ ಸಾಧ್ಯವಾಗದೇ ಇದ್ದಲ್ಲಿ ಎಪಿಕೆ ಮಿರರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications








